Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಟಿಕೆಟ್‌ ಪಡೆದು ಅರ್ಧದಲ್ಲೇ ಬಸ್‌ ಇಳಿದ ಮಹಿಳೆ – ಸಲ್ಲದ ಕೇಸ್‌ಹಾಕಿ ಕಂಡಕ್ಟರ್‌ ಅಮಾನತು ಮಾಡಿದ ಡಿಸಿ !

ವಿಜಯಪಥ ಸಮಗ್ರ ಸುದ್ದಿ
  • ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿಯ ಕಾನೂನು ಬಾಹಿರ ನಡೆಗೆ ಆಕ್ರೋಶ
  • ಡಿಸಿ ಅಮಾನತು ಮಾಡಿ ನಿರ್ವಾಹಕನಿಗೆ ಡ್ಯೂಟಿ ಕೊಡಿ ಎಂದು ಎಂಡಿಗೆ ಒತ್ತಾಯ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸನ್ನು ಮದ್ದೂರಿನಲ್ಲಿ ಬಸ್‌ ಹತ್ತಿದ ಮೂವರು ಮಹಿಳೆಯರು ಒಟ್ಟಿಗೆ ಸಂಚರಿಸುತ್ತಿದ್ದು ಬೆಂಗಳೂರಿಗೆಂದು ಮೂವರು ಸೇರಿ ಒಂದೇ ಟಿಕೆಟ್‌ ಪಡೆದುಕೊಂಡುದ್ದಾರೆ. ಆದರೆ ಒಬ್ಬಾಕೆ ಮಾರ್ಗಮಧ್ಯೆ ಬಸ್‌ ಇಳಿದು ಹೋಗಿದ್ದಾರೆ. ಬಳಿಕ ತನಿಖಾ ಸಿಬ್ಬಂದಿ ಬಸ್‌ ಹತ್ತಿ ಟಿಕೆಟ್‌ ಚೆಕ್‌ ಮಾಡುವಾಗ ಒಬ್ಬಾಕೆ ಇಲ್ಲ ಎಂದು ನಿರ್ವಾಹಕರನ್ನು ಅಮಾನತು ಮಾಡಲಾಗಿದೆ.

ಹೌದು! KSRTC ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಮಾಡಿಕೊಡಲಾಗಿದೆ. ಇದು ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಚೈತನ್ಯ ನೀಡುತ್ತಿದೆ. ಆದರೆ, ನಿರ್ವಾಹಕರ ಕೆಲಸಕ್ಕೆ ಕುತ್ತುತರುತ್ತಿದೆ. ಶಕ್ತಿ ಯೋಜನೆ ರಾಜ್ಯದಲ್ಲಿ ಜಾರಿಗೆ ಬಂದಾಗಿನಿಂದ ಕೋಟ್ಯಂತರ ಮಹಿಳೆಯರು ಪ್ರಯಾಣಿಸುವ ಮೂಲಕ ಸೌಲಭ್ಯ ಸದುಪಯೋಗಪಡಿಸಿಕೊಂಡಿದ್ದಾರೆ. ಅದೇ ರೀತಿ ಕೆಲ ಮಹಿಳೆಯರು ನಿರ್ವಾಹಕರನ್ನು ಅಮಾನತು ಮಾಡುವುದಕ್ಕೆ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ.

ನೋಡಿ ಕಳೆದ ಏಪ್ರಿಲ್‌ 15ರಂದು ಚಾಮರಾಜನಗರ ಘಟಕದ ಬಸ್‌ ಕೊಳ್ಳೇಗಾಲ – ಮಳವಳ್ಳಿ – ಮದ್ದೂರು ಮಾರ್ಗವಾಗಿ ಬೆಂಗಳೂರಿಗೆ ಕಾರ್ಯಾಚರಣೆ ಮಾಡುತ್ತಿತ್ತು. ಈ ವೇಳೆ ಮದ್ದೂರಿನಲ್ಲಿ ಮೂವರು ಮಹಿಳೆಯರು ಒಟ್ಟಿಗೆ ಬಸ್‌ ಹತ್ತಿದ್ದು ಉಚಿತ ಟಿಕೆಟ್‌ ಪಡೆದುಕೊಂಡಿದ್ದಾರೆ. ಆದರೆ, ಅವರಲ್ಲಿ ಒಬ್ಬರು ಮಾರ್ಗಮಧ್ಯೆ ನಿರ್ವಾಹಕರ ಗಮನಕ್ಕೂ ತರದೆ ಬಸ್‌ ಇಳಿದು ಹೋಗಿದ್ದಾರೆ.

ಆ ಬಳಿಕ ಚೆನ್ನಪಟ್ಟಣ ಬಸ್‌ ನಿಲ್ದಾಣದಲ್ಲಿ ಬಸ್‌ ಹತ್ತಿದ ತನಿಖಾ ಸಿಬ್ಬಂದಿಗಳಿಗೆ ಟಿಕೆಟ್‌ ಚೆಕ್‌ ಮಾಡುವ ವೇಳೆ ಮೂವರು ಮಹಿಳೆಯರಲ್ಲಿ ಒಬ್ಬರು ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ವೇಳೆ ಇನ್ನೊಬ್ಬರು ಎಲ್ಲಿ ಎಂದು ಆ ಗುಂಪಿನಲ್ಲಿದ್ದ ಇಬ್ಬರು ಮಹಿಳೆಯರನ್ನು ವಿಚಾರಿಸಿದ್ದಾರೆ. ಆದರೆ ಆ ಮಹಿಳೆಯರು ಇಲ್ಲ ನಾವಿಬ್ಬರೆ ಬಂದಿರೋದು ಅಂತ ಹೇಳಿಕೆ ಜಾರಿಕೊಂಡಿದ್ದಾರೆ.

ಇದರಿಂದ ನಿರ್ವಾಹಕರು ಒಂದು ಟಿಕೆಟ್‌ ಹೆಚ್ಚಿವರಿಯಾಗಿ ನೀಡಿದ್ದಾರೆ ಎಂದು ಕಾರಣ ಕೇಳಿ ಕಂಡಕ್ಟರ್‌ಗೆ ಮೆಮೋ ನೀಡಿದ್ದಾರೆ. ಬಳಿಕ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಈ ಸಂಬಂಧ ಇದೇ ಮೇ 1ರಂದು ನಿರ್ವಾಹಕನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಇನ್ನು ಇಲ್ಲಿ ಪ್ರಯಾಣಿಕರು ಮಾಡಿದ ತಪ್ಪಿಗೆ ನಿರ್ವಾಹಕ ಅಮಾನತಾಗಿದ್ದು ಅಲ್ಲದೆ ಆತ ದಂಡಬೇರೆ ಕಟ್ಟಬೇಕಿದೆ. ಯಾರೋ ಮಾಡಿದ ತಪ್ಪಿಗೆ ನಿರ್ವಾಹಕನ ತಲೆಂಡವಾಗಿರುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಸಾರ್ವಜನಿಕರೆ ಕೇಳುತ್ತಿದ್ದಾರೆ. ಆದರೆ ಇಂಥ ಪ್ರಕರಣದ ಬಗ್ಗೆ ಉತ್ತರ ಕೊಡಬೇಕಾದ ಸರ್ಕಾರ, ಸಾರಿಗೆ ಸಚಿವರು ಮತ್ತು ನಿಗಮದ ಆಡಳಿತ ಮಂಡಳಿ ಮಾತ್ರ ಮೌನಕ್ಕೆ ಶರಣಾಗಿದೆ.

ಇತ್ತ ಈ ರೀತಿ ಅರ್ಧದಲ್ಲೇ ಇಳಿದು ಹೋಗುವ ಮಹಿಳೆಯರು ಮಾಡುವ ತಪ್ಪಿಗೆ ನಿರ್ವಾಹಕರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಅಮಾನತಿನ ಶಿಕ್ಷೆ ನೀಡಿ ನೌಕರರ ಮೇಲೆ ಕಾನೂನಿನ ಹೆಸರಿನಲ್ಲಿ ಬಲಿಪಶು ಮಾಡುತ್ತಿದ್ದಾರೆ.

ಈ ಪ್ರಕರಣದಲ್ಲಿ ಅಮಾನತಿಗೆ ಅವಕಾಶವಿಲ್ಲ: ಇನ್ನು ಇಲ್ಲಿ 71 ರೂಪಾಯಿ ಉಚಿತ ಟಿಕೆಟ್‌ ನೀಡಿಲ್ಲ ಅಂದರೆ ನಿಗಮದಲ್ಲಿ ಅಮಾನತು ಮಾಡಲು ಬರುವುದಿಲ್ಲ. ಆದರೂ ಒಎಸ್‌ (ಔಟ್‌ ಸ್ಟ್ಯಾಂಡಿಂಗ್‌) ಕೇಸ್‌ ಹಾಕಿರುವುದನ್ನು ಗಮನಿಸಿದರೆ ಇಲ್ಲಿ ನಿರ್ವಾಹಕರನ್ನು ಡಿಸಿಯೇ ಟಾರ್ಗೆಟ್‌ ಮಾಡಿರುವುದು ಎದ್ದು ಕಾಣುತ್ತಿದೆ.

ನೋಡಿ ಸಂಸ್ಥೆಯಲ್ಲಿ ಒಎಸ್‌ ಕೇಸ್‌ ದಾಖಲಿಸಬೇಕು ಅಂದರೆ ನಿರ್ವಾಹಕರು 120 ರೂ. ಮತ್ತು ಮೇಲ್ಪಟ್ಟು ಹಣ ಪಡೆದು ಪ್ರಯಾಣಿಕರಿಗೆ ಚೀಟಿ ವಿತರಿಸದಿದ್ದರೆ ಈ ಒಎಸ್‌ ಕೇಸ್‌ ದಾಖಲಿಸಿ ಅಮಾನತು ಮಾಡಬೇಕು ಎಂದು ನಿಗಮದ ನಿಯಮವೇ ಹೇಳುತ್ತದೆ. ಆದರೆ ಇಲ್ಲಿ 71 ರೂಪಾಯಿಯ ಹೆಚ್ಚುವರಿಯಾಗಿ ಉಚಿತ ಟಿಕೆಟ್‌ ವಿತರಣೆ ಮಾಡಿದ್ದಾರೆ ಎಂದರೆ ಅದು ಸಾಮಾನ್ಯ ಪ್ರಕರಣವಾಗುತ್ತದೆ ಅಂದರೆ ಮೌಖಿಕವಾಗಿ ಡಿಸಿ ವಾರ್ನಿಂಗ್‌ ಮಾಡಿ ಬಿಡಬೇಕು.

ಆದರೆ ಇಲ್ಲಿ ಚಾಮರಾಜನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಮ್ಮ ಕೈಲಿ ಅಧಿಕಾರವಿದೆ ಎಂದು ಒಎಸ್‌ ಪ್ರಕರಣ ದಾಖಲಿಸಿ ಅಮಾನತು ಮಾಡಿರುವುದನ್ನು ನೋಡಿದರೆ ಈ ಅಧಿಕಾರಿಯ ಉದ್ದೇಶವೆ ಬೇರೆ ಇದೆ ಎಂದು ಕಾಣುತ್ತಿದೆ. ಹೀಗಾಗಿ ಈ ರೀತಿ ತಪ್ಪು ಮಾಡಿರುವ ಡಿಸಿ ಅವರ ವಿರುದ್ಧ ಎಂಡಿ ಅವರು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಜತೆಗೆ ನಿರ್ವಾಹಕರಿಗೆ ತಕ್ಷಣಕ್ಕೆ ಡ್ಯೂಟಿ ಕೊಡಬೇಕು ಎಂದು ಹೆಸರೇಳಲಿಚ್ಛಿಸದ ಅಧಿಕಾರಿಯೊಬ್ಬರು ವಿಜಯಪಥದೊಂದಿಗೆ ಮಾತನಾಡುವ ವೇಳೆ ಒತ್ತಾಯಿಸಿದ್ದಾರೆ.

1 Comment

  • ನಾನು ನಿರ್ವಾಹನ ಪರವಾಗಿ ಇದ್ದೇನೆ. ಮಾಡದ ತಪ್ಪಿಗೆ ಶಿಕ್ಷೆ ಯಾಕೆ? ಇದನ್ನು ಕೂಲಂಕುಶವಾಗಿ ಪರಿಶೀಲಿಸಿ ಯಾರದ್ದು ತಪ್ಪು ಯಾರದು ಇಲ್ಲ ಎಂದು ಪರಿಶೀಲಿಸುವುದು ಅತ್ಯಂತ ಮುಖ್ಯವಾಗಿರ್ತಕಂತ ವಿಷಯವಾಗಿದೆ. ಒಂದು ಮಾತಿನ ಪ್ರಕಾರ ಪ್ರತ್ಯಕ್ಷವಾಗಿ ಕಂಡರೂ ಪರಮಾರ್ಶಿಸಿ ನೋಡಬೇಖಿತ್ತು. ನಿರ್ವಾಹಕನದು ಈ ಸದ್ಯಕ್ಕೆ ತಪ್ಪೆಂಬಂತೆ ಕಾಣಿಸಿದರು ಅದನ್ನು ಪರಿಶೀಲಿಸಿ ನೋಡಿದಾಗ ಮಾತ್ರ ಸತ್ಯ ಹೊರ ಬರಲು ಸಾಧ್ಯ.

Leave a Reply

error: Content is protected !!
LATEST
ಹೆಂಡತಿ, ಮಾವನ ಕಾಟ: ರೈಲಿಗೆ ತಲೆಕೊಟ್ಟು ಹೆಡ್‌ಕಾನ್‌ಸ್ಟೇಬಲ್ ಆತ್ಮಹತ್ಯೆ 9 ಸಾವಿರ ರೂ. ಲಂಚ ಪ್ರಕರಣ: ಪಿಡಿಒಗೆ 3 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ.ದಂಡ KSRTC ತುಮಕೂರು: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಚಾಲಕನಿಗೆ ಧೈರ್ಯ ತುಂಬಿದ ಡಿಸಿ, ಅಧಿಕಾರಿಗಳು KSRTC: ಡಿ.31ರ ಮುಷ್ಕರ ಬೆಂಬಲಿಸುವಂತೆ ಕೂಟಕ್ಕೆ ಜಂಟಿ ಕ್ರಿಯಾ ಸಮಿತಿ ಮನವಿ ಸರ್ಕಾರದ ನಡೆಯೇ  BMTC ಆರ್ಥಿಕವಾಗಿ ಕುಸಿಯಲು ಕಾರಣ: ವರದಿ ಕೊಟ್ಟ CAG KSRTC ಕುಣಿಗಲ್‌: ಹಲ್ಲೆಕೋರರ ವಿರುದ್ಧ ಕ್ರಮ ಜರುಗಿಸದಿರುವುದಕ್ಕೆ ಮನನೊಂದ ಚಾಲಕ ಆತ್ಮಹತ್ಯೆಗೆ ಯತ್ನ KSRTC: ಈ ಅಧಿವೇಶನದಲ್ಲಾದರೂ ಸಿಎಂ ಸರಿ ಸಮಾನ ವೇತನ ಬಗ್ಗೆ ದಿಟ್ಟ ಹೆಜ್ಜೆ ಇಡಲಿ BMTC: ಆಧಾರ್‌ ಕಾರ್ಡ್‌ ಯಾವ ಭಾಷೆಯಲ್ಲೇ ಇರಲಿ ಕರ್ನಾಟಕದ ವಿಳಾಸವಿದ್ದರೆ ಉಚಿತ ಪ್ರಯಾಣ ಹಾವೇರಿ: ಸರ್ಕಾರಿ ಬಸ್ ಹತ್ತಲು ಹೋದ ವೃದ್ಧೆ ಕಾಲುಗಳ ಮೇಲೆ ಹಿಂಬದಿ ಚಕ್ರ ಹರಿದು ಕಾಲುಗಳು ಕಟ್‌ KSRTC ಮಡಿಕೇರಿ: ಸಹೋದ್ಯೋಗಿ ಕಂಡಕ್ಟರ್‌ ಕೊಲ್ಲುವ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡ್ಹಾರಿಸಿದ ಡ್ರೈವರ್‌ ಬಂಧನ