- 5 ವರ್ಷದಿಂದಲೂ ಸಾರಿಗೆ ನೌಕರರ ಯಾಮಾರಿಕೊಂಡೆ ಬಂದಿರುವುದು ಸಾಕು
- ಇನ್ನಾದರೂ ಕಾರ್ಯರೂಪಕ್ಕೆ ಬರುವಂಥ ಕೆಲಸ ಮಾಡಿ
- ಕೂಟದ ಅಧ್ಯಕ್ಷ ಚಂದ್ರು ಅವರಿಗೆ ಸಮಸ್ತ ನೌಕರರ ಆಗ್ರಹ
ಬೆಂಗಳೂರು: ಕರ್ನಾಟಕ ರಾಜ್ಯ ಸರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ನಾವು ಕೇಳುತ್ತಿರುವುದು ಸರಿ ಸಮಾನ ವೇತನ ವೇತನ ಆಗಬೇಕು ಎಂದು ಪರಿಷ್ಕರಣೆಯನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಅಂತ ನೌಕರರ ಕೂಡದ ಅಧ್ಯಕ್ಷ ಹೇಳುತ್ತಿದ್ದಾರೆ. ಆದರೆ ಅದು ಕನ್ನಡಿಯೊಳಗಿನ ಗಂಟಾಗಿಯೇ ಉಳಿದಿದೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಕೂಟದ ಅಧ್ಯಕ್ಷ ಚಂದ್ರಶೇಖರ್ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸುವ ಭರವಸೆಯಿದೆ ಎಂದು ಹೇಳಿಕೊಂಡೆ ಈಗ 13 ತಿಂಗಳು ವ್ಯರ್ಥ ಮಾಡಿದ್ದಾರೆ. ಜತೆಗೆ 2020ರ ಜನವರಿಯಿಂದ ಅನ್ವಯವಾಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿಯನ್ನು ಕೊಡಿಸಿಲ್ಲ ಎಂದು ಕಿಡಿಕಾರುತ್ತಿದ್ದಾರೆ.

ಚಂದ್ರಶೇಖರ್ ಅವರೇ ಸರ್ಕಾರದ ನಡೆ ಬಗ್ಗೆ ಮೃದುಧೋರಣೆ ತಳೆದಿದ್ದು ಯಾವುದೆ ದೃಢ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಏಕೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ನೌಕರರು ಕಾರಣ ಹೇಳುವುದನ್ನು ಬಿಟ್ಟು ಸರಿ ಸಮಾನ ವೇತನ ಕೊಡಿಸಲು ಮುಂದಾಗಿ ಇಲ್ಲ ಈ ಒಣ ಪ್ರತಿಷ್ಠೆ ಬಿಟ್ಟು ಹೊರ ಹೋಗಿ ಎಂದು ಆಗ್ರಹಿಸಿದ್ದಾರೆ.
ಹಿಂದಿನ ಹಾಗೂ ಈಗಿನ ಈ ಎಲ್ಲ ಸರ್ಕಾರಗಳು ನಮ್ಮ ಸಾರಿಗೆ ಸಂಸ್ಥೆ ನೌಕರರ ಬಗ್ಗೆ ತಾರತಮ್ಯತೆ ಮಾಡಿಕೊಂಡೆ ಬರುತ್ತಿವೆ. ಈ ಧೋರಣೆ ತಳೆದಿರುವ ಕಾರಣದಿಂದಾಗಿ ಬಹಳಷ್ಟು ಹುದ್ದೆಗಳು ಈಗಲೂ ಖಾಲಿ ಇವೆ. ಇದರಿಂದ ನೌಕರರು ಒತ್ತಡದಲ್ಲೇ ಕೆಲಸ ಮಾಡುವಂತಾಗಿದೆ ಅದು ಇನ್ನು ಸುಧಾರಣೆ ಆಗಿಲ್ಲ ಎಂದು ಬೇಸರ ಹೊರಹಾಕುತ್ತಿದ್ದಾರೆ.
ಪ್ರಮುಖವಾಗಿ ನಮ್ಮದು ಸರಿ ಸಮಾನ ವೇತನದ ಬೇಡಿಕೆ ಇದೆ. ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸುತ್ತದೆ ಎಂಬ ನಂಬಿಕೆಯಿದೆ. ವೇತನ ಪರಿಷ್ಕರಣೆ ಮಾಡುವುದಿದ್ದರೆ ಇಷ್ಟರಲ್ಲಾಗಲೇ ಸರ್ಕಾರ ಮಾಡುತ್ತಿತ್ತು ಆದರೆ ನಾವು ಕೇಳುತ್ತಿರುವ ಸಮಾನ ವೇತನ ಕೊಡುವ ಸಲುವಾಗಿಯೇ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ಭರವಸೆಯಿದೆ ಎಂದು ಹೇಳುತ್ತಿರುವ ಚಂದ್ರಶೇಖರ್ ನೌಕರರನ್ನು ಇನ್ನೂ ಎಷ್ಟು ದಿನ ಯಾಮಾರಿಸಲು ಹೊರಟಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ.
ಇನ್ನು ಬರುವ ಬಜೆಟ್‌ನಲ್ಲಿ ಸಾರಿಗೆ ಸಿಬ್ಬಂದಿಗಳಿಗೆ ಸರಿ ಸಮಾನ ವೇತನ ಘೋಷಣೆ ಆಗುತ್ತದೆ ಎಂದು ನಾವು ನಂಬಿ ಕುಳಿತಿದ್ದೇವೆ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಕೊಡದಿದ್ದರೆ ಅಧಿವೇಶನ ಮುಗಿಯುವ ಮುನ್ನವೇ ಹೋರಾಟಕ್ಕೆ ಇಳಿಯುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ನಮಗೆ ನಿಮ್ಮ ಭಿಕ್ಷೆ ಬೇಡ ಜತೆಗೆ ನೌಕರರಿಗೆ ಪ್ರಯೋಜನವಾದ ಮಾತುಗಳು ಭರವಸೆಗಳು ಬೇಡ. ಈಗಾಗಲೇ 38 ತಿಂಗಳ ಶೇ.15ರಷ್ಟ ವೇತನ ಹಿಂಬಾಕಿ ಬರಬೇಕು ಅದನ್ನು ಕೊಡಿಸಿ. ಜತೆಗೆ ಈಗಾಗಲೇ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳವಾಗದೆ 13 ತಿಂಗಳು ಕಳೆದಿದ್ದು 14ನೇ ತಿಂಗಳು ಆರಂಭವಾಗಿದೆ. ಆದರೂ ಯಾವುದೆ ಸ್ಪಷ್ಟತೆ ಇಲ್ಲ.
ಇನ್ನು ಈವರೆಗೂ 2024ರ ಜ.1ರಿಂದ ಆಗಬೇಕಿರುವ ವೇತನ ಹೆಚ್ಚಳದ ಬಗ್ಗೆ ಯಾವುದೇ ಸ್ಪಷ್ಟತೆಯನ್ನು ಸರ್ಕಾರ ನೀಡಿಲ್ಲ. ಆ ಬಗ್ಗೆ ಸ್ಪಷ್ಟಪಡಿಸಿ ಇಲ್ಲ ಸೈಡಲ್ಲಿ ಇದ್ದು ಬಿಡಿ ಎಂದು ಕೂಟದ ಚಂದ್ರ ಶೇಖರ್ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳ ನಡೆಯ ಬಗ್ಗೆ ನೌಕರರು ಅಸಮಾಧಾನ ಹೊರಹಾಕಿದ್ದಾರೆ.