ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘಕ್ಕೆ ಜುಲೈ 7ರಂದು ನಡೆದ ಚುನಾವಣೆಯ ಅಂತಿಮ ಫಲಿತಾಂಶ ಭಾನುವಾರ ಅಂದರೆ ಆ.18ರಂದು ಹೊರಬಿದ್ದಿದ್ದು, ಅಂತಿಮವಾಗಿ ಸಾರಿಗೆ ನೌಕರರ ಕೂಟದ ಚಂದ್ರಶೇಖರ್ ನೇತೃತ್ವದ ಬಂಣ 19ಕ್ಕೆ 18 ಸ್ಥಾನಗಳನ್ನು ಗೆದ್ದು ಬೀಗುತ್ತಿದ್ದು, ಕೇವಲ ಒಂದೇಒಂದು ಸ್ಥಾನವನ್ನು ಗೆಲ್ಲುವ ಮೂಲಕ ಭಾರಿ ಮುಖಭಂಗವನ್ನು ಅನುಭವಿಸಿದೆ 4 ದಶಕಗಳಷ್ಟು ಹಳೆಯದಾದ ಅನಂತಸುಬ್ಬರಾವ್ ನೇತೃತ್ವದ ಬಣ.
ಇದರಿಂದ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಬಹುತೇಕ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿಯಲ್ಲಿ ತನ್ನದೆ ಪಾರುಪತ್ಯವನ್ನು ಕಳೆದ ನಾಲ್ಕೂ ದಶಕಗಳಿಂದ ಮೆರೆದಿದ್ದ ಎಐಟಿಯುಸಿಯ ಪದಾಧಿಕಾರಿಗಳಿಗೆ ಈ ಚುನಾವಣಾ ಫಲಿತಾಂಶ ಭಾರೀ ಮರ್ಮಾಘಾತವನ್ನೇ ಕೊಟ್ಟಿದೆ.
ಇನ್ನು ಸದ್ಯ ಸಾರಿಗೆ ನೌಕರರ ಕೂಟ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಭಾರಿ ಆಕ್ಟಿವ್ ಆಗಿದ್ದು, ಎಲ್ಲ ಸಾರಿಗೆ ಸಹಕಾರ ಸಂಘಗಳನ್ನು ಒಂದೊಂದಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಇದರ ಜತೆಗೆ ಸಾರಿಗೆ ನೌಕರರು ಕೂಡ ಕೂಟದ ಪರವಾಗಿದ್ದು, 4 ದಶಕಗಳ ನಿಮ್ಮ ಆಡಳಿತದಿಂದ ನಾವು ನೊಂದಿದ್ದೇವೆ, ಮತ್ತೆ ಆ ನೋವನ್ನು ಅನುಭವಿಸಲು ಸಿದ್ದರಿಲ್ಲ ಎಂಬ ಸಂದೇಶವನ್ನು ಚುನಾವಣೆ ಮೂಲಕ ಎಐಟಿಯುಸಿ ಸಂಘಟನೆಗೆ ರವಾನಿಸಿದ್ದಾರೆ.
ಹೀಗಾಗಿ ಯಾರೆ ನಾವು ಜಾಣದರು ಯಾರನ್ನು ಬೇಕಾದರೂ ಯಾಮಾರಿಸುವ ಚಾಕಚಕ್ಯತೆ ನಮ್ಮಲ್ಲಿದೆ ಎಂದುಕೊಂಡರೆ ಅದು ನಿಮ್ಮ ಮೂರ್ಖತನ ಎಂದು ಸಾರಿಗೆ ನೌಕರರು ಎಐಟಿಯುಸಿಯ ಅನಂತ ಸುಬ್ಬರಾವ್ ಬಣವನ್ನು ಸಾರಸಗಟಾಗಿ ತಿರಸ್ಕರಿಸುವ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಅಲ್ಲದೆ ಈ ಚುನಾವಣೆ ಫಲಿತಾಂಶದಿಂದ ಅಕ್ರಮಕ್ಕೆ ಕಡಿವಾಣ ಬಿದ್ದಂತಾಗಿದೆ ಎಂದು ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ಆಡಳಿತ ಮಂಡಳಿಗೆ ನೌಕರರ ಕೂಟದ ಪರ ಅಭ್ಯರ್ಥಿಗಳು ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಸಂಘದ ಸದಸ್ಯರು ಇಟ್ಟಿರುವ ಭರವಸೆಯನ್ನು ಹುಸಿಗೊಳಿಸದೆ ಅವರ ಬೇಡಿಕೆಗಳು ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ನಮ್ಮದು ಸರಿಯಾದ ಆಯ್ಕೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳವಂತ ಕೆಲಸವನ್ನು ನೂತನ ನಿರ್ದೇಶಕರು ಮಾಡಬೇಕು ಎಂದು ಕೂಟದ ಅಧ್ಯಕ್ಷ ಆರ್. ಚಂದ್ರಶೇಖರ್ ಕಿವಿಮಾತು ಹೇಳಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘದ ನೂತನ ನಿರ್ದೇಶಕರ ಹೆಸರು – ಪಡೆದ ಮತಗಳ ವಿವರ:
ನವೀನ್ ಎ. 1598
ಕುರುವತ್ತಿ ಸುಣಗಾರ 1570
ಚಲುವರಂಗಯ್ಯ ಎಂ.ಕೆ. 1527
ಮಹೇಂದ್ರ ಡಿ.ಪಿ. 1401
ಲೋಕೇಶ್ ಪಿ. 1390
ಪುಟ್ಟಯ್ಯ ಕೆ.ವಿ. 1364
ರಾಘವೇಂದ್ರ ಪಿ.ಬಿ. 1331
ರಾಘವೇಂದ್ರ ಜಿ. 1296
ನಾಗೇಶ್ ಜಿ.ಬಿ. 1275
ಮಲ್ಲೇಶಪ್ಪ 1265
ಮಲ್ಲಪ್ಪ ಅಣ್ಣಿಗೇರಿ 1246
ಸತೀಶ್ ಎನ್. 1205
ರೇಣುಕಾನಂದ 1170
ಗೌರಮ್ಮ 1767
ಭಾಗ್ಯಲಕ್ಷ್ಮಿ ಆರ್. 1421
ಕೃಷ್ಣ 1602
ಓಂಕಾರಪ್ಪ ಎಸ್. 1546
ಕುಮಾರ್ ಸಿಂಗ್ ಎಚ್. 1399
ಯೋಗೀಶ್ ವಿ.ಎಸ್. 1509
ಮತದಾನದ ದಿನ ಹೈಡ್ರಾಮ: ನಕಲಿ ಮತದಾರರನ್ನು ಕರೆತಂದು ಮತದಾನ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿ ಕೂಟದ ಪರ ಸಂಘದ ನೂರಾರು ಸದಸ್ಯರು ಪ್ರತಿಭಟನೆ ಮಾನಡೆಸಿದ್ದರು. ಸಹಕಾರ ಸಂಘಕ್ಕೆ ಚುನಾವಣೆ ನಡೆದು 5 ವರ್ಷಗಳು ಕಳೆದಿದ್ದ ಹಿನ್ನೆಲೆಯಲ್ಲಿ ಮತ್ತೆ 5ವರ್ಷದ ಅವಧಿಗೆ ಆಡಳಿತ ಮಂಡಳಿಯ ಚುನಾವಣೆಯನ್ನು ನಡೆಸಲಾಗಿತ್ತು.
ಈ ವೇಳೆ ಪ್ರಮುಖವಾಗಿ ಅನಂತ ಸುಬ್ಬರಾವ್ ಟೀಂ ಮತ್ತು ಕೂಟದ ಟೀಂಗಳ ತಲಾ 19 ಅಭ್ಯರ್ಥಿಗಳನ್ನು ಕಣಕ್ಕಿಸಿದ್ದವು. ಆದರೆ ಚುನಾವಣೆ ನಡೆಯುತ್ತಿದ್ದ ವೇಳೆ ಸಹಕಾರ ಸಂಘದಲ್ಲಿ ಸದಸ್ಯರಲ್ಲದವರನ್ನು ಕರೆ ತಂದು ನಕಲಿ ಮತ ಹಾಕಿಸುತ್ತಿದ್ದಾರೆ ಎಂದು ಕೂಟದ ಅಭ್ಯರ್ಥಿಗಳು ಆರೋಪಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲದೆ, ಹೈ ಕೋರ್ಟ್ ಚುನಾವಣಾ ಪಟ್ಟಿಯಲ್ಲಿ ಕೈ ಬಿಟ್ಟಿರುವ 771 ಮಂದಿಗೆ ಮತದಾನ ಮಾಡುವುದಕ್ಕೆ ಅವಕಾಶ ನೀಡಬೇಕು ಎಂದು ಆದೇಶ ಮಾಡಿದೆ. ಆದರೆ, ಇಂದು ಕೋರ್ಟ್ ಆದೇಶದ ಪಟ್ಟಿಯಲ್ಲಿರುವವರ ಬಹುತೇಕರ ಹೆಸರು ಚುನಾವಣಾ ಪಟ್ಟಿಯಲ್ಲಿ ಇಲ್ಲ ಎಂದು ಆರೋಪಿ ಸಹಕಾರ ಸಂಘದ ನೂರಾರು ಸದಸ್ಯರು ಕಿಡಿಕಾರಿದ್ದರು.
ಒಟ್ಟಾರೆ, ಈ ಚುನಾವಣೆ ಒಂದು ರೀತಿಯ ಅಕ್ರಮದಿಂದ ಕೂಡಿದ್ದು, ಇಲ್ಲಿ ವಾಮ ಮಾರ್ಗದಲ್ಲಾದರೂ ಸರಿಯೇ ಗೆಲ್ಲಲೇ ಬೇಕು ಎಂಬ ತೀರ್ಮಾನಕ್ಕೆ ಬಂದಿರುವ ಕೆಲವರು ಚುನಾವಣೆ ಅಕ್ರಮ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಎಲ್ಲ ಅಕ್ರಮ ಗೊಂದಲಗಳ ನಡುವೆಯೂ ಮತದಾನ ನಡೆದಿತ್ತು.
ಸಂತೋಷ, ದಶಕಗಳಿಂದ ಬಾವಿ ಒಳಗಿನ ಕಪ್ಪೆಯಂತಿದ್ದ ಸಾರಿಗೆ ನೌಕರರು ಬಾವಿಯಿಂದ ಎದ್ದು ಬಂದುಬಿಟ್ಟಿದ್ದಾರೆ, ಈಗ ಅವರಿಗೆ ಜ್ಞಾನೋದಯವಾಗಿ ಇಲ್ಲಿತನಕ ಯಾಕೆ ನಾವು ಕಷ್ಟ ಪಟ್ಟಿರಿ ಎಂದು ಪ್ರಶ್ನೆ ಮಾಡಿದ್ದು ಅದಕ್ಕೆ ಉತ್ತರವನ್ನೂ ಕಂಡುಕೊಂಡಿದ್ದಾರೆ. ಈಗ ಪ್ರಶ್ನೆ ಬಹಳ ಸರಳ ಇದೇ ಕೂಟದ ಅಧ್ಯಕ್ಷರು ಈಗ ವಿಧಾನ ಸಭೆ ಚುನಾವಣೆಗೂ ಮುಂಚೆ ಯಾವ ಪಕ್ಷದ ಪರ ಸಹಾನುಬೂತಿ ಹೊಂದಿ ಆ ನಾಯಕರ ಜೊತೆ ಓಡಾಡಿಕೊಂಡಿದ್ದರೋ ಅವರೇ ಈಗ ಸರ್ಕಾರ ನಡೆಸುತ್ತಿದ್ದಾರೆ, ಆದರಿಂದ ಕಾಲಹರಣ ಮಾಡದೆ ಕೂಟದ ಮುಖ್ಯ ಅಜೆಂಡಾ ಆದ ಸರ್ಕಾರಿ ನೌಕರರು ಅಥವ ಸರಿಸಮಾನ ವೇತನಕ್ಕಾಗಿ ಮನವಿ ಮಾಡಿ ಅದರಲ್ಲಿ ಯಶಸ್ಸು ಕಾಣಬೇಕು. ಇಲ್ಲ ಇದೇ ಯಶಸ್ಸು ತಲೆಗೇರಿ ಈ ಅಜೆಂಡಾವನ್ನು ಮರೆತಿರೋ ಸುಬ್ಬರಾವ್ ಗೆ ಬಂದ ಗತಿಯೇ ನಿಮಗೂ ಎಚ್ಚರ