
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಿಕ್ಷಣ ಫೌಂಡೇಶನ್ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆರ್ ಡಿ ಪಿ ಆರ್ ಮತ್ತು ಒಂದು ದಿನದ ನಾಯಕತ್ವ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಎನ್ ಅನುರಾಧ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಫೌಂಡೇಶನ್ ಸಂಸ್ಥೆ ಅತ್ಯುನ್ನತ ಕೆಲಸವನ್ನು ನಿರ್ವಹಿಸುತ್ತಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಂಥಾಲಯಗಳಿಗೆ ಇಲ್ಲಿಯವರೆಗೂ 202 ಸ್ಮಾರ್ಟ್ಫೋನ್, 41 ಟಿವಿ ಹಾಗೂ ಕ್ರೋಮ್ ಬುಕ್ ಲ್ಯಾಪ್ಟಾಪ್ ಮಾನಿಟರ್ಗಳು ಇಂಟರ್ನೆಟ್ಗಳನ್ನು ಉಚಿತವಾಗಿ ವಿತರಿಸಿದೆ ಎಂದರು.
ಇನ್ನು ಇದೆಷ್ಟೆ ಅಲ್ಲದೆ ಸೂಲಿಬೆಲೆಯಲ್ಲಿ ಎಂಡಿಐಸಿ ಕೇಂದ್ರವನ್ನು ತೆರೆದಿದ್ದು ಡಿಜಿಟಲ್ ಸಾಕ್ಷರತಾ ಮತ್ತು ಡಿಜಿಟಲ್ ತಂತ್ರಜ್ಞಾನದ ಕೌಶಲ್ಯವನ್ನು ಗ್ರಾಮೀಣ ಪ್ರದೇಶದ ಯುವ ಸಮುದಾಯದವರು ಮತ್ತು ಮಹಿಳಾ ಸಮುದಾಯದವರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತರಬೇತಿಯಲ್ಲಿ ಹುಲಿಕಲ್ ನಟರಾಜ್ ರವರು ವಿಜ್ಞಾನ ಮಾದರಿಯ ಪ್ರಯೋಗಗಳನ್ನು ಮತ್ತು ಶಿಕ್ಷಣ ಫೌಂಡೇಶನ್ ತರಬೇತುದಾರರಾದ ಕಿರಣ್ ಮತ್ತು ರಂಜನಿ ರವರು ಗ್ರಾಮ ಡಿಜಿ ವಿಕಸನ ಕಾರ್ಯಕ್ರಮಕ್ಕೆ ಸಂಬಂಧಿಸಿದಂತ ತರಬೇತಿಯನ್ನು ಪಿ.ಡಿ.ಒಗಳಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಯೋಜನಾ ನಿರ್ದೇಶಕ ವಿಠ್ಠಲ್ ಕಾವ್ಳೆ, ಶಿಕ್ಷಣ ಫೌಂಡೇಶನ್ ಮುಖ್ಯ ತರಬೇತುದಾರರಾದಂತಹ ಕಿರಣ್,ರಂಜಿನಿ, ಗಂಗಾಧರ, ಪಂಚಾಯಿತಿ ಪಿಡಿಒಗಳು ಭಾಗವಹಿಸಿದ್ದರು.