NEWSದೇಶ-ವಿದೇಶನಮ್ಮರಾಜ್ಯ

MSRTC: 7ನೇ ವೇತನ ಆಯೋಗ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೌಕರರ ಮುಷ್ಕರ ಆರಂಭ- ಜನರ ಪರದಾಟ

ಗಣೇಶ ಹಬ್ಬದ ಮುನ್ನವೇ ಸರ್ಕಾರಕ್ಕೆ ಶಾಕ್‌ ಕೊಟ್ಟ ನೌಕರರು

ವಿಜಯಪಥ ಸಮಗ್ರ ಸುದ್ದಿ

ಮುಂಬೈ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಬಸ್‌ಗಳನ್ನು ನಿಲ್ಲಿಸಿ ಪ್ರತಿಭಟನೆ ಆರಂಭಿಸಿದ್ದು, ಗಣೇಶ ಹಬ್ಬಕ್ಕೆ ತೆರಳಲು ಸಜ್ಜಾಗಿದ್ದ ಸಾರ್ವಜನಿಕರು ಪರದಾಡುತ್ತಿದ್ದಾರೆ.

MSRTC ನೌಕರರಿಗೂ 7ನೇ ವೇತನ ಮಾದರಿಯಲ್ಲಿ ವೇತನ ನೀಡಬೇಕು. ಈ ಮೂಲಕ ಸರ್ಕಾರಿ ನೌಕರರಿಗೆ ಸರಿ ಸಮಾನವಾದ ಸೌಲಭ್ಯಗಳು ನಮಗೂ ಸಿಗಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ನೌಕರರು ಇಂದು ಮುಷ್ಕರವನ್ನು ನಡೆಸುತ್ತಿದ್ದಾರೆ.

2021ರ ಡಿಸಿಸೆಂಬರ್‌ ನಿಂದ 2022ರ ಜನವರಿ ಕೊನೆಯ ವಾರದವರೆಗೂ ನೌಕರರು ಮುಷ್ಕರನ ನಡೆಸಿದ್ದರು. ಆ ವೇಳೆ ಕೆಲ ಬೇಡಿಕೆಗಳ ಈಡೇರಿಸುವ ಆಶ್ವಾಸನೆ ನೀಡಿದ ಸರ್ಕಾರ ಬಳಿಕ ತಟಸ್ಥವಾಗಿದೆ. ಈ ಹಿನ್ನೆಲೆಯಲ್ಲಿ ಇದೇ 2024ರ ಆಗಸ್ಟ್‌ನಲ್ಲಿ ಮುಷ್ಕರ ನಡೆಸುವ ಬಗ್ಗೆ ಎಚ್ಚರಿಕೆ ನೀಡಿತ್ತು. ಆ ವೇಳೆ ಒಂದುವಾರಗಳ ಕಾಲವಕಾಶ ಕೇಳಿದ ಸರ್ಕಾರ ಬಳಿಕ ಹಳೇ ಚಾಳಿಯನ್ನೇ ಮುಂದುವರಿಸಿದೆ ಎಂದು ಆರೋಪಿಸಿ ಮತ್ತೆ ಮುಷ್ಕರ ನಡೆಸುತ್ತಿದ್ದಾರೆ.

ಆಗಸ್ಟ್ 9ರಿಂದಲೇ ಮುಷ್ಕರಕ್ಕೆ ಸಜ್ಜಾಗಿದ್ದರು: ಆ.9ರಿಂದಲೇ ಮತ್ತೊಮ್ಮೆ ಮುಷ್ಕರಕ್ಕೆ ಕರೆ ನೀಡಿದ್ದರು. ಈ ಬೆನ್ನಲ್ಲೇ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಾರಿಗೆ ನೌಕರರ ಮುಖಂಡರೊಂದಿಗೆ ಆ.8ರಂದು ಸಭೆಕರೆದು ಚರ್ಚಿಸಿದ ಬಳಿಕ ಆಗಸ್ಟ್ 9 ರಂದು ಹಮ್ಮಿಕೊಂಡಿದ್ದ  ಮುಷ್ಕರವನ್ನು ಒಂದು ವಾರ ಮುಂದೂಡಿ  ಬೇಡಿಕೆ ಈಡೇರಿಕೆಗೆ ಗಡುಡವು ವಿಧಿಸಿದ್ದರು.

ರಾಜ್ಯ ಸಾರಿಗೆ ನಿಗಮದ ನೌಕರರ ಸಂಘಟನೆಗಳ ಕ್ರಿಯಾ ಸಮಿತಿಯು ಆಗಸ್ಟ್ 9 ರಿಂದ ಕರೆ ನೀಡಿದ್ದ ಮುಷ್ಕರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಅಧ್ಯಕ್ಷತೆಯಲ್ಲಿ ಕ್ರಿಯಾ ಸಮಿತಿ ಸಭೆ ನಡೆದಿತ್ತು. ಆ ವೇಳೆ ನೌಕರರ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಒಂದು ವಾರದೊಳಗೆ ವರದಿ ಕೊಡುವಂತೆ ಸಮಿತಿಗೆ ಆದೇಶ ಮಾಡಿದ್ದರು.

ಎಸ್ಟಿ ನೌಕರರ ಸಂಘಟನೆಗಳು ಆಗಸ್ಟ್ 9 ರಿಂದ ಮುಷ್ಕರ ನಡೆಸುವುದಾಗಿ ಎಚ್ಚರಿಕೆಯನ್ನೂ ಕೂಡ ನೀಡಿದ್ದವು. ಆ ವೇಳೆ ಎಸ್ಟಿ ನೌಕರರ ಪ್ರತಿಭಟನೆಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಭಯಗೊಂಡು ದಿಢೀರ್‌ ಸಭೆಕರೆದು ಒಂದು ವಾರ ಸಮಯಕೊಡಿ ಎಂದು ಮನವಿ ಮಾಡಿದ್ದರು.

ಅದರಂತೆ ನೌಕರರ ಬೇಡಿಕೆಯಂತೆ ಮುಖ್ಯಮಂತ್ರಿಗಳು ಉನ್ನತಾಧಿಕಾರ ಸಮಿತಿ ಸಭೆ ನಡೆಸಿ ವಾರದೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಿದ್ದರು. ಅಲ್ಲದೆ ನಿಗಮದ ನೌಕರರ ಬೇಡಿಕೆಗಳ ಈಡೇರಿಕಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ತಿಳಿಸಿದ್ದ ಮುಖ್ಯಮಂತ್ರಿಗಳು, ಈ ಬೇಡಿಕೆಗಳಿಂದ ಉಂಟಾಗುವ ಆರ್ಥಿಕ ಹೊರೆ ಮತ್ತು ಅವುಗಳನ್ನು ಸಮತೋಲನಗೊಳಿಸುವ ಬಗ್ಗೆ ಉನ್ನತಾಧಿಕಾರಿಗಳ  ಸಮಿತಿಯೊಂದಿಗೆ ಸಭೆ ನಡೆಸುವಂತೆ ಸಾರಿಗೆ ಸಚಿವರಿಗೂ ಸೂಚಿಸಿದ್ದರು.

ಅಲ್ಲದೆ ಕೂಡಲೇ ಸಭೆ ನಡೆಸಿ ವಾರದೊಳಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆಯೂ ಮುಖ್ಯಮಂತ್ರಿ ಸೂಚಿಸಿದ್ದು, ವಿವರವಾಗಿ ಹೇಳುವುದಾದರೆ, ನೌಕರರಿಗೆ ಏಳನೇ ವೇತನ ಆಯೋಗ ಮಾದರಿಯಲ್ಲೇ ವೇತನ ಪಾವತಿಸಬೇಕು. ಅಗ್ರಿಮೆಂಟ್‌ ಮೂಲಕ ಮಾಡುವ ವೇತನ ಪರಿಷ್ಕರಣೆಗೆ ಬ್ರೇಕ್‌ಹಾಕಬೇಕು ಎಂದು ನೌಕರರ ಸಂಘಟನೆಗಳು ಮುಖಂಡುರ ಒತ್ತಾಯಿಸಿದ್ದರು.

ಇನ್ನು ರಾಜ್ಯ ಸರ್ಕಾರಿ ನೌಕರರಂತೆ ನಿಗಮದ ನೌಕರರಿಗೂ ವಿವಿಧ ಸೌಲಭ್ಯಗಳನ್ನು  ನೀಡಬೇಕು. ಅಗ್ರಿಮೆಂಟ್‌ ಎಂಬ ಭೂತವನ್ನು ಕಿತ್ತೊಗೆಯಬೇಕು. ಇದರೊಂದಿಗೆ ನೌಕರರ ವಿರುದ್ಧ ತೆಗೆದುಕೊಳ್ಳುವ ಶಿಸ್ತು ಮತ್ತು ದಂಡ ವಿಧಿಸುವ ವಿಧಾನದಲ್ಲಿ ಬದಲಾವಣೆ ಆಗಬೇಕು. ಪ್ರಮುಖವಾಗಿ ನಿಗಮದ ಎಲ್ಲ ನೌಕರರಿಗೂ ನಗದು ರಹಿತ ವೈದ್ಯಕೀಯ ಯೋಜನೆ ಅನ್ವಯವಾಗಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸಿಎಂ ಜತೆಗೆ 13 ಸಂಘಟನೆಗಳ ಮುಖಂಡರು ಚರ್ಚೆ ನಡೆಸಿದ್ದರು.

ಎಸ್‌ಟಿ ನೌಕರರಿಗೆ ರಾಜ್ಯ ಸರ್ಕಾರಿ ನೌಕರರಿಗೆ ಸರಿಸಮಾನವಾಗಿ ವೇತನ ನೀಡಬೇಕು ಎಂಬ ಪ್ರಮುಖ ಬೇಡಿಕೆ ಸೇರಿದಂತೆ ಬಾಕಿ ಉಳಿದಿರುವ ಇತರ ಬೇಡಿಕೆಗಳನ್ನು ಈಡೇರಿಸಲು ನೌಕರರು ಮತ್ತೊಮ್ಮೆ ಮುಷ್ಕರದ ಎಚ್ಚರಿಕೆ ನೀಡಿದ್ದು, ರಾಜ್ಯಾದ್ಯಂತ 13 ಎಸ್ಟಿ ನೌಕರರ ಸಂಘಟನೆಗಳು ಮುಷ್ಕರ ಸಂಬಂಧ ಸಭೆ ಸೇರಿ ಏಕ  ತೀರ್ಮಾನ ತೆಗೆದುಕೊಂಡಿವೆ. ಹೀಗಾಗಿ ಬೇಡಿಕೆ ಈಡೇರಿಕೆಗಾಗಿ ಇಂದಿನಿಂದ ಮತ್ತೊಮ್ಮೆ ರಾಜ್ಯದಲ್ಲಿ MSRTC ಬಸ್‌ಗಳನ್ನು ನಿಲ್ಲಿಸಿ ಹೋರಾಟ ಮಾಡುತ್ತಿದ್ದಾರೆ.

ಜತೆಗೆ ರಾಜ್ಯ ಸಾರಿಗೆ ನೌಕರರ ವಿರುದ್ಧ ನಿಗಮಗಳಲ್ಲಿ ಬಾಕಿ ಇರುವ ಪ್ರಕರಣಗಳ ಪರಿಹಾರಕ್ಕೂ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ. ಈ ನಡುವೆ ರಾಜ್ಯ ಸರ್ಕಾರಿ ನೌಕರರಂತೆ ಭತ್ಯೆ, ವೇತನ ಹೆಚ್ಚಳ ಮಾಡಲು ಈ ಹಿಂದಿನ  ಒಪ್ಪಂದದಂತೆ ಒಪ್ಪಿಗೆ ನೀಡಲಾಗಿದೆ. ಆದರೆ ಬೇಡಿಕೆಗಳ ಇತ್ಯರ್ಥಕ್ಕೆ ಮುಂದಾದರೂ ಕ್ರಮ ಕೈಗೊಳ್ಳದ ಕಾರಣ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.

Leave a Reply

error: Content is protected !!
LATEST
KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ ನಾಗಮಂಗಲ ಕೋಮುಗಲಭೆ ಪ್ರಕರಣ: ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅಮಾನತು KSRTC ಸಿಬ್ಬಂದಿಯಿಂದಲೇ ಡಿಸಿಗೆ ಇರಿಯಲು ಯತ್ನ- ಕೈ ಅಡ್ಡಹಾಕಿ ಪ್ರಾಣಾಪಾಯದಿಂದ ಪಾರಾದ ಜಗದೀಶ್ ಕುಮಾರ್‌ "ARM" ಸಿನಿಮಾ ಇಂದು ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಸೆ.14ರಂದು ಸಾರಿಗೆ ಸಿಬ್ಬಂದಿಗಳಿಗೆ ಔಷಧೀಯ ಸಸ್ಯಗಳ  ಉಚಿತ ವಿತರಣೆ: ಅಧಿಕಾರಿಗಳು ಭಾಗಿ ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್! ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಬಂಧನ ಅವಧಿ ಮತ್ತೆ ಒಂದು ದಿನ ವಿಸ್ತರಣೆ KSRTC ಚಿಕ್ಕಮಗಳೂರು: ಘಟಕದ ಗೇಟ್‌ ಬಳಿ ತ್ಯಾಜ್ಯಗಳ ನಡುವೆ ಚಾಲಕನ ಪಾರ್ಥಿವ ಶರೀರವಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ-... ವಾಲ್ಮೀಕಿ ಹಗರಣ: ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ - ಛಲವಾದಿ ನಾರಾಯಣಸ್ವಾಮಿ