NEWSದೇಶ-ವಿದೇಶನಮ್ಮರಾಜ್ಯ

MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ

ಸರಿ ಸಮಾನ ವೇತನಕ್ಕೆ ಆಗ್ರಹ l ಇಂದು ಸಂಜೆ ಸರ್ಕಾರ- ಸಂಘಟನನೆಗಳ ನಡುವೆ ಸಭೆ

ವಿಜಯಪಥ ಸಮಗ್ರ ಸುದ್ದಿ

ಮುಂಬೈ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (ಎಂಎಸ್‌ಆರ್‌ಟಿಸಿ) ನೌಕರರ ಸಂಘಟನೆಗಳು ಮಂಗಳವಾರ ಬೆಳಗ್ಗೆಯಿಂದ ಕರೆ ನೀಡಿರುವ ಮುಷ್ಕರ ತೀವ್ರ ಸ್ವರೂಪ ಪಡದುಕೊಂಡಿದ್ದು, ನಾಗರಿಕರು ಅದರಲ್ಲೂ ವಿಶೇಷವಾಗಿ ಗಣಪತಿ ಹಬ್ಬಕ್ಕೆ ನಗರದಿಂದ ಹಳ್ಳಿಗೆ ತೆರಳುವವರಿಗೆ ಭಾರಿ ಸಮಸ್ಯೆ ಎದುರಾಗಿದೆ.

ಇನ್ನು ಹಬ್ಬ ಆಚರಿಸಲು ಕೊಂಕಣಕ್ಕೆ ತೆರಳುತ್ತಿದ್ದವರು ಕಂಗಾಲಾಗಿದ್ದಾರೆ. ಮುಂಬೈ, ಥಾಣೆ ಮತ್ತು ಪಾಲ್ಘರ್ ವಿಭಾಗಗಳಿಂದ ಕೊಂಕಣಕ್ಕೆ ನಿಗದಿತ ಬಸ್‌ಗಳ ಜತೆಗೆ 1,006 ಗಣಪತಿ ಹಬ್ಬಕ್ಕೆ ವಿಶೇಷ ಬಸ್‌ಗಳನ್ನು ಓಡಿಸುವುದಾಗಿ ಸಂಸ್ಥೆ ತಿಳಿಸಿತ್ತು. ಆದರೆ ಮುಷ್ಕರದಿಂದಾಗಿ ಬಸ್‌ಗಳು ನಿಂತಲೇ ನಿಂತಿದ್ದು ಸಮಸ್ಯೆ ಆಗುತ್ತಿದೆ ಎಂದು ಎಂಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಅಂದರೆ ಇಂದು ಇದರ ಪರಿಣಾಮ ಹೆಚ್ಚು ಕಂಡುಬರುತ್ತಿದ್ದು, ಸೆಪ್ಟೆಂಬರ್ 3 ಮತ್ತು 7 ರ ನಡುವೆ ಕೊಂಕಣಕ್ಕೆ 5,000 ಹೆಚ್ಚುವರಿ ಗಣಪತಿ ಹಬ್ಬಕ್ಕೆ ಹೋಗುವವರಿಗಾಗಿ ವಿಶೇಷ ಬಸ್‌ಗಳನ್ನು ಓಡಿಸಲು ನಿಗಮವು ಯೋಜಿಸಿದ್ದು ತಲೆಕೆಳಗಾಗಿದೆ.

ಹೌದು! ನಿನ್ನೆಯಿಂದ ಅಂದರೆ ಮಂಗಳವಾರ ಬೆಳಗ್ಗೆ 8 ಗಂಟೆಗೆ ರಾಜ್ಯಾದ್ಯಂತ 35 ಬಸ್ ಡಿಪೋಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಮುಷ್ಕರ ಪ್ರಾರಂಭಿಸಿದವು. ದಿನ ಕಳೆದಂತೆ ಸಂಖ್ಯೆ ಹೆಚ್ಚಾಯಿತು ಮತ್ತು ಸಂಜೆ 5 ಗಂಟೆಯ ಹೊತ್ತಿಗೆ 59 ಡಿಪೋಗಳ ನೌಕರರು ಬೀದಿಗಳಿದಿದ್ದಾರೆ. ಎಂಎಸ್‌ಆರ್‌ಟಿಸಿಯ 11 ನೌಕರರ ಸಂಘಗಳನ್ನು ಒಳಗೊಂಡ ಮಹಾರಾಷ್ಟ್ರ ಎಸ್‌ಟಿ ನೌಕರರ ಜಂಟಿ ಸಮಿತಿ ಅಥವಾ ಜಂಟಿ ಕ್ರಿಯಾ ಸಮಿತಿಯು ಸಿಬ್ಬಂದಿ ವೇತನ ಸಮಸ್ಯೆ ಪರಿಹರಿಸುವಂತೆ ಈ ಮುಷ್ಕರಕ್ಕೆ ಕರೆ ನೀಡಿದೆ.

ಈ ಮುಷ್ಕರದಿಂದ MSRTCಯ 15,000 ಬಸ್‌ಗಳಲ್ಲಿ ಶೇ.50ರಷ್ಟು ರಸ್ತೆಗಿಳಿದಿಲ್ಲ. ಇನ್ನು “ನಮ್ಮ 251 ಡಿಪೋಗಳಲ್ಲಿ 59 ಸಂಪೂರ್ಣವಾಗಿ ನಿಲ್ಲಿಸಲಾಗಿದೆ. 77 ಭಾಗಶಃ ಕಾರ್ಯನಿರ್ವಹಿಸುತ್ತಿವೆ ಮತ್ತು 115 ಡಿಪೋಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ” ಎಂದು MSRTC ವಕ್ತಾರರು ತಿಳಿಸಿದ್ದಾರೆ.

ಆದರೆ 22,389 ನಿಗದಿತ ಟ್ರಿಪ್‌ಗಳಲ್ಲಿ, ನಾವು 11,943 ಅನ್ನು ರದ್ದುಗೊಳಿಸಿದ್ದೇವೆ. ನಾವು ಒಟ್ಟು ಟ್ರಿಪ್‌ನ ಶೇ.50ರಷ್ಟು ಮಾತ್ರ ಓಡಿಸುವ ಪ್ರಯತ್ನದಲ್ಲಿದ್ದೇವೆ. ಒಟ್ಟಾರೆ ಮುಷ್ಕರದಿಂದ ನಮ್ಮ ದೈನಂದಿನ ಗಳಿಕೆಯಲ್ಲಿ ₹14 ರಿಂದ 15 ಕೋಟಿ ನಷ್ಟಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಮುಂಬೈ ಡಿಪೋಗಳು ಕಾರ್ಯನಿರ್ವಹಿಸುತ್ತಿದ್ದರೂ, ಥಾಣೆ, ಕಲ್ಯಾಣ್ ಮತ್ತು MMR ನ ಕೆಲವು ಭಾಗಗಳಿಗೆ ಹೋಗುತ್ತಿಲ್ಲ. ಕಲ್ಯಾಣ್ ಮತ್ತು ಥಾಣೆ ಡಿಪೋಗಳಲ್ಲಿ ಬೆಳಗ್ಗೆಯಿಂದಲೇ ಎಂಎಸ್‌ಆರ್‌ಟಿಸಿ ಬಸ್‌ಗಳಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಈಗ ಬಸ್‌ಗಳಿಲ್ಲದೆ ಪರದಾಡುತ್ತಿದ್ದಾರೆ.

ಠಾಣೆಯ ನಿವಾಸಿ ಮನು ಭಾವೇಕರ್ ಎಂಬುವರು ತಮ್ಮ ಕುಟುಂಬ ಸಮೇತ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಮಹಾಡ್‌ಗೆ ಬಸ್‌ಗಾಗಿ ಕಾಯುತ್ತಿದ್ದರು. “ಗಣಪತಿ ಹಬ್ಬ ಸಮೀಪಿಸುತ್ತಿದೆ ಮತ್ತು ಸರ್ಕಾರವು ಸಾಮಾನ್ಯವಾಗಿ ರಾಯಗಡ ಮತ್ತು ಕೊಂಕಣಕ್ಕೆ ಹೆಚ್ಚುವರಿ ಬಸ್‌ಗಳನ್ನು ಹಾಕಿದೆ ಆದರೆ ಮುಷಕ್ರದಿಂದ ಒಂದೇ ಒಂದು ಬಸ್‌ಗಳು ಇಲ್ಲ ಎಂದು ಹೇಳಿದರು.

ನಾವು ಬಸ್ ಸಿಗುತ್ತದೆ ಎಂದು ನಿರೀಕ್ಷಿಸಿದ್ದೇವೆ ಆದರೆ ಈಗಾಗಲೇ ಟಿಕೆಟ್‌ ಬುಕ್‌ ಮಾಡಿದ್ದು ಬಸ್‌ಗಾಗಿ ಕಾಯುತ್ತಿದ್ದೇವೆ ಆದರೆ ಬಸ್‌ ಬರುತ್ತಿಲ್ಲ. ನಾವೆಲ್ಲರೂ ಇದರಿಂದ ಭಾರಿ ತೊಂದರೆಗೆ ಸಿಲುಕಿದ್ದೇವೆ ಮತ್ತು ನನಗೆ, ನನ್ನ ಆರೋಗ್ಯ ಸಮಸ್ಯೆಗಳಿಂದಾಗಿ ಇದು ನನಗೆ ಇನ್ನಷ್ಟು ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.

ಕೊಂಕಣ, ಮಹಾಡ್ ಮತ್ತು ಅಲಿಬಾಗ್‌ಗೆ ಹೋಗುವ ಅನೇಕ ಜನರಿಗೆ ಮುಷ್ಕರದ ಬಗ್ಗೆ ಮಂಗಳವಾರ ತಿಳಿದಿರಲಿಲ್ಲ, ಇದು MMR ನಲ್ಲಿರುವ MSRTC ಡಿಪೋಗಳಲ್ಲಿ ಜನಸಂದಣಿಗೆ ಕಾರಣವಾಯಿತು. ಈ ಬಗ್ಗೆ ಪದೇಪದೇ ಸಿಬ್ಬಂದಿಗೆ ಮನವಿ ಸಲ್ಲಿಸಿದರೂ ಅಲ್ಪಸ್ವಲ್ಪ ಮಾಹಿತಿ ಸಿಗುತ್ತಿದೆ ಎಂದು ಜನರು ದೂರಿದರು. ಲಗೇಜ್‌ಗಳ ಜತೆಗೆ ಬಂದಿದ್ದ ಕುಟುಂಬಗಳು, ಮಕ್ಕಳು ಮತ್ತು ವೃದ್ಧರು ಬಸ್‌ಗಳಿಲ್ಲದೆ ಪರದಾಡಿದರು.

ಅಶ್ವಿನಿ ನವೀನ್‌ (36) ಎಂಬುವರು ಖೇಡ್ ಬಸ್‌ಗಾಗಿ ಕಾಯ್ದಿರಿಸಿದ್ದರು, ಆದರೆ 83 ವರ್ಷದ ತಮ್ಮ ಅಜ್ಜಿಯರೊಂದಿಗೆ ಬಂದಿದ್ದ ಅವರು ಗಂಟೆಗಂಟಲ್ಲು ಕಾದರೂ ಬಸ್‌ ಬಾರದ ಕಾರಣ ವಾಪಸ್‌ ಮನೆಗೆ ಮರಳುತ್ತಿದ್ದೇವೆ ಎಂದು ಹೇಳಿದರು.

ಏತನ್ಮಧ್ಯೆ, ಕೈಗಾರಿಕಾ ಸಚಿವ ಉದಯ್ ಸಾಮಂತ್, ಗಣೇಶೋತ್ಸವದ ಮುನ್ನಾದಿನದಂದು ಮುಷ್ಕರ ನಡೆಸದಂತೆ MSRTC ಯೂನಿಯನ್‌ಗಳನ್ನು ಮನವೊಲಿಸುವಲ್ಲಿ ವಿಫಲರಾಗಿದ್ದಾರೆ. ನಂತರ ರಾಜ್ಯ ಸರ್ಕಾರವು ಭಾರತೀಯ ರೈಲ್ವೆ ಮತ್ತು ಖಾಸಗಿ ಬಸ್ ನಿರ್ವಾಹಕರನ್ನು ಸಂಪರ್ಕಿಸಿ, ಹೆಚ್ಚಿನ ರೈಲು ಮತ್ತು ಬಸ್ ಸೇವೆಗಳನ್ನು ಕೇಳಿತು. ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ರಾಜ್ಯ ಸಾರಿಗೆ ನೌಕರರ ತುರ್ತು ಸಭೆಯನ್ನು ಇಂದು ಅಂದರೆ ಬುಧವಾರ ಸಂಜೆ ಕರೆಯಲಾಗಿದೆ.

ರೈಲ್ವೆಯು ಈಗಾಗಲೇ ಕೊಂಕಣಕ್ಕೆ 342 ಗಣಪತಿ ವಿಶೇಷ ರೈಲುಗಳನ್ನು ಓಡಿಸುತ್ತಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ, ಅವರ ನಿರೀಕ್ಷಿತ ಸಂಖ್ಯೆ 302 ಕ್ಕಿಂತ ಹೆಚ್ಚಿನದಾಗಿದೆ. ರೈಲ್ವೆ ಅಧಿಕಾರಿಗಳು ರಾಜ್ಯ ಸರ್ಕಾರವು ಅವರನ್ನು ಸಂಪರ್ಕಿಸಿದೆ ಮತ್ತು ಅಗತ್ಯವಿದ್ದರೆ, ಅವರು ಹೆಚ್ಚಿನ ರೈಲುಗಳನ್ನು ಬಿಡುವುದಾಗಿ ತಿಳಿಸಿದ್ದಾರೆ.

ದಿವಾ ಮತ್ತು ಪನ್ವೇಲ್‌ನಿಂದ ಕೊಂಕಣಕ್ಕೆ ಗರಿಷ್ಠ ನಾಲ್ಕು ವಿಶೇಷ ರೈಲುಗಳನ್ನು ನಿಯೋಜಿಸಬಹುದು. ಆದರೆ ಸಿಎಸ್‌ಎಂಟಿ, ಎಲ್‌ಟಿಟಿ ಮತ್ತು ದಾದರ್‌ನಿಂದ ಅಲ್ಲ ಎಂದು ಅವರು ರಾಜ್ಯ ಸರ್ಕಾರಕ್ಕೆ ತಿಳಿಸಿದ್ದಾರೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಎಂಎಸ್‌ಆರ್‌ಟಿಸಿ ಬಸ್‌ಗಳು ಕೊಂಕಣದಾದ್ಯಂತ 160 ವಿವಿಧ ಸ್ಥಳಗಳನ್ನು ಮುಟ್ಟಿದರೆ, ರೈಲುಗಳು ಕೇವಲ 25 ರಿಂದ 30 ನಿಲ್ದಾಣಗಳಿಗೆ ಸಂಪರ್ಕಗೊಂಡಿವೆ, ಅಲ್ಲಿಂದ ಹಳ್ಳಿಗಳು ಮತ್ತು ಒಳಭಾಗಗಳಿಗೆ ಕೊನೆಯ ಮೈಲಿ ಸಂಪರ್ಕವು ಸಮಸ್ಯೆಯಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಖಾಸಗಿ ಬಸ್ ನಿರ್ವಾಹಕರು ಮತ್ತು ಮುಂಬೈ ಬಸ್ ಮಲಕ್ ಸಂಘಟನೆಯ ಸದಸ್ಯರು ಕೊಂಕಣಕ್ಕೆ ಹೆಚ್ಚುವರಿ 1,000 ಬಸ್‌ಗಳನ್ನು ಕೋರಿರುವ ರಾಜ್ಯ ಸರ್ಕಾರಕ್ಕೆ 200 ಕ್ಕಿಂತ ಹೆಚ್ಚು ಬಸ್‌ಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕೊಂಕಣಕ್ಕೆ ನಮ್ಮ 1,200 ಬಸ್‌ಗಳು ಈಗಾಗಲೇ ಇವೆ. ಕಾಯ್ದಿರಿಸಲಾಗಿದೆ ಎಂದು ಅವರು ಹೇಳಿದರು. “ರಸ್ತೆಗಳ ಕಳಪೆ ಸ್ಥಿತಿಯಿಂದಾಗಿ ಈ ಮಾರ್ಗಕ್ಕೆ ವಿಶೇಷ ಕೌಶಲ್ಯ ಹೊಂದಿರುವ ಚಾಲಕರು ಅಗತ್ಯವಿದೆ. ಅಲ್ಲದೆ, ಮುಂಬೈನಲ್ಲಿ ಓಡುವ ಸಾಮಾನ್ಯ ಬಸ್‌ಗಳನ್ನು ನಿರ್ವಹಿಸಲಾಗುವುದಿಲ್ಲ, ಏಕೆಂದರೆ ಅಪಘಾತಗಳು ಅಥವಾ ಕೆಟ್ಟು ಬಿಲ್ಲುವ ಅಪಾಯವಿದೆ ಎಂದು ಹೇಳಿದ್ದಾರೆ.

Leave a Reply

error: Content is protected !!
LATEST
KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ ನಾಗಮಂಗಲ ಕೋಮುಗಲಭೆ ಪ್ರಕರಣ: ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅಮಾನತು KSRTC ಸಿಬ್ಬಂದಿಯಿಂದಲೇ ಡಿಸಿಗೆ ಇರಿಯಲು ಯತ್ನ- ಕೈ ಅಡ್ಡಹಾಕಿ ಪ್ರಾಣಾಪಾಯದಿಂದ ಪಾರಾದ ಜಗದೀಶ್ ಕುಮಾರ್‌ "ARM" ಸಿನಿಮಾ ಇಂದು ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಸೆ.14ರಂದು ಸಾರಿಗೆ ಸಿಬ್ಬಂದಿಗಳಿಗೆ ಔಷಧೀಯ ಸಸ್ಯಗಳ  ಉಚಿತ ವಿತರಣೆ: ಅಧಿಕಾರಿಗಳು ಭಾಗಿ ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್! ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಬಂಧನ ಅವಧಿ ಮತ್ತೆ ಒಂದು ದಿನ ವಿಸ್ತರಣೆ KSRTC ಚಿಕ್ಕಮಗಳೂರು: ಘಟಕದ ಗೇಟ್‌ ಬಳಿ ತ್ಯಾಜ್ಯಗಳ ನಡುವೆ ಚಾಲಕನ ಪಾರ್ಥಿವ ಶರೀರವಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ-... ವಾಲ್ಮೀಕಿ ಹಗರಣ: ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ - ಛಲವಾದಿ ನಾರಾಯಣಸ್ವಾಮಿ