ಮೈಸೂರು: ಬಸ್ನ ಲೆವಲಿಂಗ್ ರಾಡ್ ರಿಪೇರಿ ಮಾಡುವಾಗ ಜಾಕ್ ಆಯಿಲ್ ಲೀಕ್ ಆಗಿ ಜಾಕ್ ಕುಸಿದಿದ್ದರಿಂದ ಟಯರ್ ಮತ್ತು ವಾಹನದ ಬಾಡಿ ಮದ್ಯ ಸಿಲುಕಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೈಸೂರು ಘಟಕ 2ರ ಚಾಲಕರೊಬ್ಬರು ಮೃತಪಟ್ಟಿರುವ ಘಟನೆ ಚನ್ನೈನಲ್ಲಿ ಸಂಭವಿಸಿದೆ.
ಮೈಸೂರು ಡಿಪೋ 2 ರಚಾಲಕ ಶಬ್ಬೀರ್ ಬಾಷಾ ಮೃತರು. ರೋಟ್ ಮೇಲೆ ಚನ್ನೈಗೆ ಹೋಗಿದ್ದಾಗ ಬಸ್ನ ಲೆವಲಿಂಗ್ ರಾಡ್ ರಿಪೇರಿ ಮಾಡಲು ಜಾಕ್ ಹಾಕಿದ್ದಾರೆ ಬಳಿಕ ರಿಪೇರಿ ಮಾಡುತ್ತಿದ್ದಾಗ ಜಾಕ್ ಆಯಿಲ್ ಲೀಕ್ ಆಗಿದೆ ತಕ್ಷಣ ಅದು ಕೆಳಕ್ಕೆ ಕುಸಿದಿದ್ದರಿಂದ ಟಯರ್ ಮತ್ತು ವಾಹನದ ಬಾಡಿ ಮಧ್ಯೆ ಸಿಲುಕಿ ಸ್ಥಳದಲ್ಲೇ ಅಸುನೀಗಿದ್ದಾರೆ.
ಏನೋ ಗೊತ್ತಿಲ್ಲ ಸಾರಿಗೆ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿ ಮೃತರಾಗುತ್ತಿರುವುದು ನಿತ್ಯ ಕೇಳಿ ಬರುತ್ತಿದೆ. ಇದರಿಂದ ನೌಕರರು ಆತಂಕಕ್ಕೆ ಸಿಲುಕಿದ್ದಾರೆ. ಇವರಿಗೆ ಧೈರ್ಯ ತುಂಬುವ ಕೆಲಸವನ್ನು ಡಿಪೋ ಮಟ್ಟದಲ್ಲೇ ನಿಗಮದ ಅಧಿಕಾರಿಗಳು ಮಾಡಲು ಮುಂದಾಗಬೇಕು ಎಂದು ಪ್ರಜ್ಞಾವಂತರು ಒತ್ತಾಯ ಮಾಡಿದ್ದಾರೆ.
ಕಳೆದ 10-12 ದಿನಗಳಿಂದಲೂ ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡರು, ಹೃದಯಾಘಾತದಿಂದ ಮೃತಪಟ್ಟರು, ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾದರು, ಜಾಕ್ ಸ್ಲಿಪ್ಆಗಿ ಅಸುನೀಗಿದರು ಎಂಬ ಸುದ್ದಿಗಳೆ ಕೇಳಿ ಬರುತ್ತಿರುವುದು ತುಂಬ ನೋವಿನ ಸಂಗತಿಯಾಗಿದೆ.
ಇನ್ನು ನೌಕರರು ಬಸ್ ರಿಪೇರಿ ಮಾಡುವ ವೇಳೆ ಎಚ್ಚರಿಕೆ ವಹಿಸಬೇಕು ಈ ರೀತಿ ತೊಂದರೆ ಆಗುತ್ತದೆಯೇ ಇಲ್ಲವೇ ಎಂಬ ಬಗ್ಗೆ ಖಚಿತಪಡಿಸಿಕೊಂಡ ಬಳಿಕ ರಿಪೇರಿಗೆ ಮುಂದಾಗಬೇಕು ಎಂದು ನಿಗಮದ ಇಂಜಿನಿಯರೊಬ್ಬರು ತಿಳಿಸಿದ್ದಾರೆ.
ಜಾಕ್ ಹಲವಾರು ತಿಂಗಳುಗಳು ಕೆಲವೊಂದು ವೇಳೆ ವರ್ಷದ ವರೆಗೂ ಒಂದೆಕಡೆ ಇಟ್ಟಿರಲಾಗುತ್ತದೆ. ಅವುಗಳ ಬಳಕೆ ಮಾಡುವುದು ತೀರ ವಿರಳವಾಗಿರುವುದರಿಂದ ಅದು ಸರಿ ಇದೆಯೋ ಇಲ್ಲವೋ ಎಂಬುದನ್ನು ಮೊದಲು ಖಚಿತ ಪಡಿಸಿಕೊಳ್ಳಬೇಕು ಎಂದು ಎಲ್ಲ ಚಾಲನಾ ಸಿಬ್ಬಂದಿಗಳಿಗೆ ಸಲಹೆ ನೀಡಿದ್ದಾರೆ.