NEWSನಮ್ಮರಾಜ್ಯ

ಮೇ 20- ರಾಜ್ಯದಲ್ಲಿ 67 ಹೊಸ ಕೊರೊನಾ ಪಾಸಿಟಿವ್‌ ದೃಢ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕದಲ್ಲಿ ಇಂದು ಕೊರೊನಾ ವೈರಸ್‌ ಸ್ಫೋಟಗೊಂಡಿದ್ದು, ಇಂದು ಒಂದೇದಿನ ಅದು ಮಧ್ಯಾಹ್ನದ ವೇಳೆಗೆ 67ಸೋಂಕು ಪ್ರಕರಣ ಪತ್ತೆಯಾಗಿದ್ದು, ರಾಜ್ಯದ ಜನರಲ್ಲಿ ಆತಂಕವನ್ನು ಇಮ್ಮಡಿಗೊಳಿಸಿದೆ. ಜತೆಗೆ ಇಂದು ಬೆಂಳೂರಿನಲ್ಲಿ ಒಬ್ಬರು ಬಲಿಯಾಗಿದ್ದು ಸಾವಿನ ಸಂಖ್ಯೆ 41ಕ್ಕೆ ಏರಿಕೆ ಆಗಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

ಬುಧವಾರ ಒಂದೇದಿನ 63 ಮಂದಿಯಲ್ಲಿ ಕೊರೊನಾ ಪಾಸಿಟಿವ್‌ ಕಂಡು ಬಂದಿದ್ದು, ಅದರಲ್ಲಿ ಅತಿ ಹೆಚ್ಚು ಹಾಸನ 21 ಕೊರೊನಾ ಪಾಸಿಟಿವ್‌ ಆಗಿದೆ. ಉಳಿದಂತೆ ಬೀದರ್‌ 10, ಮಂಡ್ಯದಲ್ಲಿ 8, ಕಲಬುರಗಿ 7, ರಾಯಚೂರು, ಬೆಂಗಳೂರು ಮತ್ತು  ತುಮಕೂರಿನಲ್ಲಿ ತಲಾ 4,  ಉಡುಪಿಯಲ್ಲಿ 6, ಯಾದಗಿರಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಒಂದು ಕೇಸ್‌ ಪತ್ತೆಯಾಗಿದೆ. ಹೀಗಾಗಿ ರಾಜ್ಯದಲ್ಲು ಒಟ್ಟು 1462ಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗಿದೆ.

ದೇಶದಲ್ಲಿ 106,886ಕ್ಕೇರಿದ ಸೋಂಕಿತರ ಸಂಖ್ಯೆ

ಇನ್ನು ದೇಶದಲ್ಲಿ ಈವರೆಗೆ 101,261 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 3,303ಮಂದಿ ಮೃತಪಟ್ಟಿದ್ದಾರೆ. 42,309 ಮಂದಿ ರೋಗಮುಕ್ತರಾಗಿದ್ದಾರೆ. ಪ್ರಪಂಚಾದ್ಯಂತ ಈವರೆಗೆ 4,999,235 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 325,125ಜನರು ಮೃತಪಟ್ಟಿದ್ದಾರೆ. 1,970,686 ಮಂದಿ ರೋಗದಿಂದ ಮುಕ್ತಗೊಂಡಿದ್ದಾರೆ. view by country

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

Leave a Reply