ಬೆಂಗಳೂರು: 2019ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿ ಒಟ್ಟು 179 ಚಲನಚಿತ್ರ ನಿರ್ಮಾಪಕರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಈ ಅರ್ಜಿಗಳನ್ನು ಹೊರತುಪಡಿಸಿ ಇನ್ನೂ ಯಾವುದಾದರು ಚಿತ್ರ ನಿರ್ಮಾಪಕರು ನಿಗದಿತ ಅವಧಿಯೊಳಗೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದು, ಪಟ್ಟಿಯಲ್ಲಿ ಬಿಟ್ಟು ಹೋಗಿದ್ದಲ್ಲಿ ಅಂತಹ ಚಿತ್ರ ನಿರ್ಮಾಪಕರು ಜೂ. 20 ರೊಳಗಾಗಿ ಉಪನಿರ್ದೇಶಕರು, ಚಲನಚಿತ್ರ ಶಾಖೆ ಇವರಿಗೆ ಇಲಾಖೆಯು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀಡಿರುವ ಸ್ವೀಕೃತಿಯ (Acknowledgement) ಮಾಹಿತಿಯನ್ನು ನೀಡಿದರೆ ಅರ್ಜಿಯನ್ನು ಪರಿಗಣಿಸಲಾಗುವುದು.
ಚಿತ್ರಗಳ ಪೈಕಿ ರಿಮೇಕ್ ಅಥವಾ ಡಬ್ಬಿಂಗ್ ಚಿತ್ರಗಳಾಗಿ ನಿರ್ಮಾಣಗೊಂಡ ಚಿತ್ರಗಳೆಂದು ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಜೂ. 20 ರೊಳಗಾಗಿ ಸೂಕ್ತ ದಾಖಲೆಯೊಂದಿಗೆ ಉಪನಿರ್ದೇಶಕರು, ಚಲನಚಿತ್ರ ಶಾಖೆ ಇವರಿಗೆ ಖುದ್ದಾಗಿ ನೀಡುವಂತೆ ತಿಳಿಸಲಾಗಿದೆ. ನಿಗದಿತ ಅವಧಿಯ ನಂತರ ನೀಡುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಯನ್ನು ಇಲಾಖೆಯ ವೆಬ್ ಸೈಟ್ ವಿಳಾಸ dipr.karnataka.gov.in ವೀಕ್ಷಿಸಬಹುದೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.