NEWSನಮ್ಮರಾಜ್ಯ

ನಿತ್ಯ ಮುಂಜಾನೆ 5ರಿಂದಲೇ ಬಿಎಂಟಿಸಿ ಬಸ್‌ಗಳ ಸಂಚಾರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಮೇ 31ರವರೆಗೆ ಇದ್ದ ಲಾಕ್‌ಡೌನ್‌ ಜತೆಗೆ ಕರ್ಫ್ಯೂವನ್ನು ಸಡಿಲಿಸಿರುವುದರಿಂದ ಇನ್ನು ನಿತ್ಯ ಬೆಳಗ್ಗೆ 5ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಬಿಎಂಟಿಸ್‌ ಬಸ್‌ಗಳು ಸಂಚರಿಸಲಿವೆ.

ಇಂದಿನಿಂದಲೇ (ಜೂ.1) ಹೊಸ ನಿಯಮ ಜಾರಿಗೆ ಬಂದಿದ್ದು, ಇನ್ನು ಮುಂದೆ ಮುಂಜಾನೆಯೇ ಬಸ್‌ ಸಂಚಾರ ಆರಂಭವಾಗಲಿದೆ. ಹೀಗಾಗಿ ಕಂಪನಿಗಳಲ್ಲಿ  ಮೊದಲ ಪಾಳಿ ಕೆಲಸಕ್ಕೆ ಹೋಗುವವರಿಗೆ ಅನುಕೂಲವಾಗಲಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಇಂದಿನಿಂದ 4 ಸಾವಿರ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಿದ್ದು, ಬಹುತೇಕ ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ. ಅಲ್ಲದೇ ಸರಿಯಾದ ಸಮಯಕ್ಕೆ ಸಾರ್ವಜನಿಕರು ತಲುಪಬೇಕಾದ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸಲು ನಮ್ಮ ಸಿಬ್ಬಂದಿ ಸಿದ್ಧರಿದ್ದಾರೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ (ಬಿಎಂಟಿಸಿ ಎಂಡಿ) ಶಿಖಾ ತಿಳಿಸಿದ್ದಾರೆ.

ಬಹುತೇಕ ಎಲ್ಲಾ ಮಾರ್ಗಗಳಲ್ಲೂ ಸಾಮಾನ್ಯವಾಗಿ ಬಸ್‌ಗಳ ಸಂಚಾರವಿದೆ. ಇದರ ಜತೆಗೆ ಖಾಸಗಿ ಬಸ್‌ಗಳು ಕೂಡ ರಸ್ತೆಗಿಳಿದಿದ್ದು, ಸ್ಯಾನಿಟೈಸ್‌ ವ್ಯವಸ್ಥೆಯನ್ನು ಪ್ರಯಾಣಿಕರಿಗಾಗಿ ಮಾಡಿಕೊಳ್ಳಲಾಗಿದೆ ಎಂದು ಬಸ್‌ ಮಾಲೀಕರು ತಿಳಿಸಿದ್ದಾರೆ.

ಸ್ವಯಂ ನಿರ್ಬಂಧ  ಹಾಕಿಕೊಳ್ಳಿ
ಇನ್ನು ನಿತ್ಯ ಏರಿಕೆ ಹಾದಿಯಲ್ಲಿ ಸಾಗುತ್ತಿರುವ ಕೊರೊನಾ ಬಗ್ಗೆಯೂ ಜನರು ಎಚ್ಚರ ವಹಿಸಿ ಮುಂದೆ ಆಗಬಹುದಾದ ಅನಾಹುತವನ್ನು ತಡೆಯುವಲ್ಲಿ ಸ್ವಯಂ ನಿರ್ಬಂಧವನ್ನು ಹಾಕಿಕೊಳ್ಳಲು ಮುಂದಾಗಬೇಕಿದೆ. ಒಂದುವೇಳೆ ನಿರ್ಲಕ್ಷ್ಯತೋರಿದರೆ ಜೀವಹಾನಿಯಾಗುವ ಸಂಭವ ಹೆಚ್ಚಿರುವುದರಿಂದ ಸ್ವಯಂ ನಿರ್ಬಂಧಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

Leave a Reply