NEWSನಮ್ಮಜಿಲ್ಲೆ

ಬೆಂಗಳೂರಿನಲ್ಲಿ ಕಂಟೈನ್‌ಮೆಂಟ್‌ ಪ್ರದೇಶಗಳ ಸಂಖ್ಯೆ 113ಕ್ಕೆ ಏರಿಕೆ

ಇಂದು ಒಂದೇದಿನ 22 ವಾರ್ಡ್ ಗ‌ಳಲ್ಲಿ 28 ಹೊಸ ಕಂಟೈನ್‌ಮೆಂಟ್‌ ವಲಯಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ನಿಯಂತ್ರಿತ ಕಂಟೈನ್‌ಮೆಂಟ್‌ ಪ್ರದೇಶದ ಸಂಖ್ಯೆ 113ಕ್ಕೆ  ಏರಿಕೆ ಆಗಿದೆ.

ಗುರುವಾರ ಒಟ್ಟು 22 ವಾರ್ಡ್‌ ಗಳಲ್ಲಿ 28 ಹೊಸ ಕಂಟೈನ್ಮೆಂಟ್ ಪ್ರದೇಶಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ ಕಾವಲ್ ಭೈರಸಂದ್ರ, ಕೋಣನಕುಂಟೆ, ಹೂಡಿ, ಬೆಳ್ಳಂದೂರು, ವಸಂತಪುರ, ಅರಕೆರೆ, ಬಾಗಲಕುಂಟೆ, ದೇವಸಂದ್ರ, ವಿವಿಪುರ, ಗಂಗಾನಗರ, ಸಂಪಂಗಿ ರಾಮನಗರ, ಕುಶಾಲನಗರ, ಚಾಮರಾಜಪೇಟೆ, ರಾಯಪುರ, ಧರ್ಮರಾಯಸ್ವಾಮಿ ನಗರ, ಚಿಕ್ಕಪೇಟೆ, ಕಮ್ಮನಹಳ್ಳಿ, ಹನುಮಂತ ನಗರ, ವಸಂತನಗರ ವಾರ್ಡ್ ಗಳಲ್ಲಿ ತಲಾ ಒಂದೊಂದು.

ಗರುಡಾಚಾರ್ಪಾಳ್ಯ, ಸಿಂಗಸಂದ್ರ ಮತ್ತು ಎಸ್‌ಕೆ ಗಾರ್ಡನ್ ವಾರ್ಡ್ ಗಳಲ್ಲಿ ತಲಾ ಎರಡು ಕಂಟೈನ್ಮೆಂಟ್ ಪ್ರದೇಶಗಳನ್ನು ಹೊಸದಾಗಿ ಗುರುತಿಸಲಾಗಿದೆ.

ಇದುವರೆಗೆ ಪಾಲಿಕೆಯ 198 ವಾರ್ಡ್ಗಳಲ್ಲಿ 109 ವಾರ್ಡ್ಗಳನ್ನು ಕೊರೊನಾ  ಸೋಂಕು ಪತ್ತೆಯಾಗಿದೆ ಎಂದು ಗುರುತಿಸಲಾಗಿದೆ. ನಿನ್ನೆ ( ಬುಧವಾರ) ವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ 85 ಕಂಟೈನ್ಮೆಂಟ್ ಪ್ರದೇಶಗಳಿದ್ದವು. ಇಂದು 109ಕ್ಕೆ ಏರಿಕೆಯಾಗಿದೆ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

mgid.com, 613802, DIRECT, d4c29acad76ce94f
mgid.com, 613802, DIRECT, d4c29acad76ce94f

Leave a Reply

error: Content is protected !!