ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸವನ್ನು ಇಂದು ಮುಂದುವರಿಸಿದ್ದು 378 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದೆ.ಜತೆಗೆ ಇಂದು ಇಬ್ಬರು ಕೊರೊನಾಗೆ ಬಲಿಯಾಗಿದ್ದು ಈವರೆಗೆ 61 ಮಂದಿ ಮೃತಪಟ್ಟಿದ್ದಾರೆ. ( ಅನ್ಯಕಾರಣದಿಂದ ಇಬ್ಬರ ಸಾವು).
ಇಂದು ಹೊಸದಾಗಿ ಪತ್ತೆಯಾದ 378 ಪ್ರಕರಣಗಳಲ್ಲಿ 333 ಅಂತಾರಾಜ್ಯ ಪ್ರಯಾಣದ ಇತಿಹಾಸ ಹೊಂದಿದ್ದು, ಉಡುಪಿಯಲ್ಲಿ ಅತಿ ಹೆಚ್ಚು ಅಂದರೆ 121 ಕೊರೊನಾ ಪ್ರಕರಣ ಇಂದು ದೃಢಪಟ್ಟಿದೆ..
ಇನ್ನು ಯಾದಗಿರಿ 103, ಕಲಬುರಗಿ 69, ದಕ್ಷಿಣ ಕನ್ನಡ 24, ಬೆಂಗಳೂರು ನಗರ 18, ವಿಜಯಪುರ 6, ದಾವಣೆಗೆರೆ 6, ಬೆಳಗಾವಿ 5, ಗದಗದಲ್ಲಿ4, ಮಂಡ್ಯ 3, ಹಾಸನ 3, ಧಾರವಾಡ 3, ರಾಯಚೂರು 2, ಚಿಕ್ಕಬಳ್ಳಾಪುರ 2 ಹಾಗೂ ಉತ್ತರ ಕನ್ನಡದಲ್ಲಿ 2, ತುಮಕೂರು, ಕೊಪ್ಪಳ, ಬೀದರ್ 1, ಸೇರಿದಂತೆ ರಾಜ್ಯದಲ್ಲಿ ಒಟ್ಟು 378 ಪ್ರಕರಣಗಳು ಪತ್ತೆಯಾಗಿವೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇನ್ನು ರಾಜ್ಯದಲ್ಲಿ 5213 ಮಂದಿಗೆ ಈವರೆಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಅದರಲ್ಲಿ 1968 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. 3,184 ಕೊರೊನಾ ಸೋಂಕಿತರಿಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಇಂದು ಬೀದರ್ ಮತ್ತು ವಿಜಯಪುರದಲ್ಲಿ ತಲಾ ಒಬ್ಬರು ಮೃತಪಟ್ಟಿರುವುದು ಸೇರಿ ಈವರೆಗೆ 61 ಮಂದಿ ಈ ವಿಶ್ವಮಾರಿಗೆ ಬಲಿಯಾಗಿದ್ದಾರೆ.
ದೇಶದಲ್ಲಿ 237,788 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 237,788 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 6,651 ಮಂದಿ ಮೃತಪಟ್ಟಿದ್ದಾರೆ. 114,073 ಮಂದಿ ರೋಗಮುಕ್ತರಾಗಿದ್ದಾರೆ. ಪ್ರಪಂಚಾದ್ಯಂತ ಈವರೆಗೆ 6,883,079 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 398,979 ಜನರು ಮೃತಪಟ್ಟಿದ್ದಾರೆ 3,371,312 ಮಂದಿ ರೋಗದಿಂದ ಮುಕ್ತಗೊಂಡಿದ್ದಾರೆ. view by country
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail