Breaking NewsNEWSನಮ್ಮರಾಜ್ಯ

ಬಿಎಂಟಿಸಿ ಬಸ್‌ ಚಾಲಕ, ನಿರ್ವಾಹಕರ ಅಮಾನತಿಗೆ ನೌಕರರ ಆಕ್ರೋಶ

ಹೆಚ್ಚಿನ ಜನರು ಬಸ್‌ನಲ್ಲಿ ಪ್ರಯಾಣಿಸಲು ಚಾಲಕ, ನಿರ್ವಾಹಕರಷ್ಟೇ ಕಾರಣನಾ?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಬುಧವಾರ ನಿಗದಿಪಡಿಸಿದ  ಆಸನ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ದ ಬಸ್‌ನ ಚಾಲಕ ಮತ್ತು ನಿರ್ವಾಹಕರನ್ನು ಅಮಾನತು ಮಾಡಲಾಗಿದೆ.

ಅಧಿಕಾರಿಗಳ ಪ್ರಕಾರ, ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಯಲಹಂಕಕ್ಕೆ ಹೊರಡುವ ಕೊನೆಯ ಬಸ್ ಇದಾಗಿದ್ದರಿಂದ ಆ ಮಾರ್ಗಕ್ಕೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಆ ಬಸ್‌ ಬರುವುದನ್ನೇ ಕಾಯುತ್ತಿದ್ದ ಜನರು ಬಂದ ಕೂಡಲೇ ನೂಕುನುಗ್ಗಲಿನಿಂದ ಬಸ್‌ ಹತ್ತಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

ಆದರೆ, ಪ್ರಯಾಣಿಕರಿಗೆ ಬೇಡಿಕೆಗೆ ತಕ್ಕಷ್ಟು ಬಸ್‌ ಸೇವೆ ನೀಡಲು ಬಿಎಂಟಿಸಿ ಅಧಿಕಾರಿಗಳು ವಿಫಲವಾದ್ದರಿಂದ ಇನ್ನು ಕೊನೆ ಎಂದು ಜನರು, ಇದ್ದ ಆ ಬಸ್‌ ಒಂದರಲ್ಲೇ ಪ್ರಯಾಣಿಸಿದ್ದಾರೆ. ಇದರಿಂದ ಚಾಲಕ ಮತ್ತು ನಿರ್ವಾಹಕರ ತಲೆ ದಂಡವಾಗಿದೆ. ಇದು ಸರಿಯಾದ ಕ್ರಮವಲ್ಲ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಬಸ್‌ನಲ್ಲಿ ಪ್ರಯಾಣಿಸುವವರಿಗೆ ಟಿಕೆಟ್‌ ನೀಡುವುದಿಲ್ಲ. ಬದಲಿಗೆ ದಿನದ, ವಾರದ, ತಿಂಗಳ ಪಾಸ್‌ ನೀಡಲಾಗಿತ್ತು. ಪಾಸ್‌ ಇದ್ದ ಜನರಷ್ಟೆ ಬಸ್‌ ಹತ್ತಿದ್ದಾರೆ. ಅದಕ್ಕೆ  ನಿಲ್ದಾಣದಲ್ಲಿದ್ದ ಸಂಚಾರ ನಿರೀಕ್ಷರು, ನಿಲ್ದಾಣ ಅಧಿಕಾರಿ ಸೇರಿ ಇತರ ಉನ್ನತ ಅಧಿಕಾರಿಗಳು ಬಸ್‌ಹತ್ತಲು ಪ್ರಯಾಣಿಕರಿಗೆ ಅನುವು ಮಾಡಿಕೊಟ್ಟಿದ್ದಾರೆ. ಅದನ್ನು ಪರಿಗಣಿಸದೆ ಕೇವಲ ಚಾಲಕ ಮತ್ತು ನಿರ್ವಾಹಕರನ್ನಷ್ಟೇ ಅಮಾನತು ಮಾಡುವುದು ಯಾವನ್ಯಾಯ ಎಂದು ನೌಕರರು ಕಿಡಿಕಾರಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

ಕೊನೆಯ ಬಸ್‌ ಆಗಿದ್ದರಿಂದ ಪ್ರಯಾಣಿಕರು ಬಸ್‌ ಮಿಸ್‌ ಆಗಲಿದೆ ಎಂಬ ಆತಂಕದಲ್ಲಿ ಹತ್ತಿದ್ದಾರೆ. ಆದರೆ ಸ್ಥಳದಲ್ಲಿದ್ದ ಸಂಚಾರ ನಿರೀಕ್ಷರು ಮತ್ತು  ನಿಲ್ದಾಣ ಅಧಿಕಾರಿ ಮತ್ತೊಂದು ಬಸ್‌ ವ್ಯವಸ್ಥೆ ಮಾಡುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುವು ಮಾಡಿಕೊಡಬೇಕಿತ್ತು. ಅದನ್ನು ಬಿಟ್ಟು ಎಲ್ಲರೂ ಪ್ರಯಾಣಿಸುವಂತೆ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಸಹಕರಿಸಿ ಈಗ ಚಾಲಕ ನಿರ್ವಾಹಕರನ್ನು ಅಮಾನತು ಮಾಡಿದರೆ ಹೇಗೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಉಳಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂಬುವುದು ಸಂಸ್ಥೆಯ ಎಲ್ಲಾ ಚಾಲಕರು ಮತ್ತು ನಿರ್ವಾಹಕರ ಒತ್ತಾಯವಾಗಿದೆ.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ವಿಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

mgid.com, 613802, DIRECT, d4c29acad76ce94f
mgid.com, 613802, DIRECT, d4c29acad76ce94f

1 Comment

Leave a Reply

error: Content is protected !!