NEWSನಮ್ಮರಾಜ್ಯ

ಗ್ರಾಪಂ ಚುನಾವಣೆ ನೆಪದಲ್ಲಿ ಹೊಸ ಕಾರು ಖರೀದಿಗೆ ಮುಂದಾದ ಚುನಾವಣ ಆಯೋಗ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಜೂನ್‌ನಲ್ಲಿ ಮುಗಿಯಲಿರುವ  ಗ್ರಾಮ ಪಂಚಾಯಿತಿಗಳಿಗೆ ನೂತನ ಸದಸ್ಯರ ಆಯ್ಕೆ ಮಾಡುವುದಕ್ಕೆ  ಚುನಾವಣೆ ಯಾವಾಗ ನಡೆಯಲಿದೆ ಎಂಬುದರ ಬಗ್ಗೆ ಸರ್ಕಾರಕ್ಕೇ ಇನ್ನೂ ಮಾಹಿತಿ ಪಕ್ಕವಾಗಿಲ್ಲ. ಹೀಗಿರುವಾಗಲೇ  ಚುನಾವಣಾ ಆಯೋಗದ ಗ್ರಾಪಂ ಚುನಾವಣೆಯಲ್ಲಿ ಓಡಾಡುವುದಕ್ಕಾಗಿ ನೂತನ ಹೈಎಂಡ್ ಮಲ್ಟಿ- ಯುಟಿಲಿಟಿ ಕಾರು ಖರೀದಿಗೆ ಮುಂದಾಗಿದೆ.

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು ಈ ಸಮಯದಲ್ಲಿ ಆರ್ಥಿಕ ಸಮಸ್ಯೆ ತಲೆದೂರಿದೆ. ಇಂತಹ ಸಮಯದಲ್ಲಿ ಹೊಸ ಕಾರು ಖರೀದಿಗೆ ಚುನಾವಣೆ ಆಯೋಗ ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದಲ್ಲಿರುವ ಒಟ್ಟು 6,083 ಗ್ರಾಮ ಪಂಚಾಯಿತಿಗಳಲ್ಲಿ ಪ್ರಸ್ತುತ 5,850 ಗ್ರಾಪಂಗಳ ಅಧಿಕಾರ ಅವಧಿ ಜೂನ್‌ನಲ್ಲಿ ಮುಗಿಯಲಿದೆ. ನಿಯಮದ ಪ್ರಕಾರ ಅಧಿಕಾರವಧಿ ಕೊನೆಗೊಳ್ಳುವ ಮುನ್ನವೇ ಚುನಾವಣೆ ನಡೆಸಬೇಕು, ಆದರೆ, ಕೋವಿಡ್‌ ಹಿನ್ನೆಲೆಯಲ್ಲಿ ವಿನಾಯಿತಿ ನೀಡಲು ಬರುತ್ತದೆ. ಹೀಗಾಗಿ ರಾಜ್ಯ ಚುನಾವಣಾ ಆಯೋಗ ಇನ್ನೂ ದಿನಾಂಕ ನಿಗದಿ ಮಾಡಿಲ್ಲ.ಆದರೆ ಕಾರು ಖರೀದಿಗೆ ಉತ್ಸುಕವಾಗಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಕಳೆದ ವರ್ಷದ ಜುಲೈನಲ್ಲಿ ಟಾಟಾ ಇಂಡಿಗೋ ಕಾರು ಹರಾಜು ಹಾಕಿದ್ದ ಚುನಾವಣಾ ಆಯೋಗ ಟೊಯೋಟಾ ಇನ್ನೋವಾ ಕ್ರಿಸ್ಟಾ ಕಾರಿಗಾಗಿ ಸರ್ಕಾರಕ್ಕೆ ಮನವಿ ಮಾಡಿತ್ತು.   ಈಗ 2020 ಮತ್ತು 2021 ರ  ಗ್ರಾಪಂ ಮತ್ತು ತಾಪಂ ಚುನಾವಣೆಗಳಿಗಾಗಿ ಚುನಾವಣಾ ಆಯೋಗ ರಾಜ್ಯಾದ್ಯಂತ ಸಂಚರಿಸುವ ಅವಶ್ಯಕತೆಯಿದೆ.ಹೀಗಾಗಿ ಸದ್ಯ ರಾಜ್ಯ ಚುನಾವಣಾ ಆಯೋಗವು 2019ರ ನವೆಂಬರ್‌ನಲ್ಲಿ ಲಭ್ಯವಿರುವ 78 ಲಕ್ಷ ರೂ. ಅನುದಾನ ಬಳಸಿಕೊಂಡು 14 ಲಕ್ಷ ರೂ.ಗಳ ವೆಚ್ಚದಲ್ಲಿ ಟೊಯೋಟಾ ಕೊರೊಲಾ ಕಾರು ಖರೀದಿಸಲು ಹಣಕಾಸು ಇಲಾಖೆ ಅನುಮೋದನೆ ನೀಡಿದೆ.

ನಾವು ಹಲವು ವರ್ಷಗಳಿಂದ ಹಳೇಯ ಕಾರು ಉಪಯೋಗಿಸುತ್ತಿದ್ದೆವು, ರಾಜ್ಯದ್ಯಂತ ಸಂಚಾರ ಮಾಡುವ ಅಗತ್ಯವಿರುವ ಕಾರಣ ನಮಗೆ ಹೊಸ ಕಾರಿನ ಅವಶ್ಯಕತೆಯಿದೆ ಅಲ್ಲದೆ ರಾಜ್ಯ ಚುನಾವಣಾ ಆಯುಕ್ತರ ಹುದ್ದೆಯು ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗೆ ಸಮನಾಗಿರುತ್ತದೆ, ಹೀಗಾಗಿ ಸೌಲಭ್ಯಗಳನ್ನು ಸಮನಾಗಿ ಒದಗಿಸಬೇಕು ಎಂದು ಚುನಾವಣಾ ಆಯೋಗ ಹೇಳಿತ್ತು. ಜತೆಗೆ ಟೊಯೋಟಾ ಇನ್ನೋವಾ ಕ್ರಿಸ್ಟಾ ಕಾರು ಖರೀದಿಸಬೇಕು ಎಂದು ಹೇಳಿತ್ತು.

ಈ ಹಿನ್ನೆಲೆಯಲ್ಲಿ ಇದೇ ಜೂನ್ 1 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 22 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಾಹನ ಖರೀದಿಗೆ ಅನುಮೋದನೆ ನೀಡಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಿ. ಬಸವರಾಜ್ ತಿಳಿಸಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

mgid.com, 613802, DIRECT, d4c29acad76ce94f
mgid.com, 613802, DIRECT, d4c29acad76ce94f

Leave a Reply

error: Content is protected !!