Vijayapatha - ವಿಜಯಪಥ > NEWS > ನಮ್ಮರಾಜ್ಯ > ನಾಳೆಯಿಂದ ತುರ್ತು ಪ್ರಕರಣಗಳ ವಿಚಾರಣೆಗಷ್ಟೆ ಅವಕಾಶ

ಬೆಂಗಳೂರು: ಕೊರೊನಾ ಸೋಂಕು ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯ ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ ತುರ್ತು ಪ್ರಕರಣಗಳ ವಿಚಾರಣೆಗೆ ನಿಗದಿಪಡಿಸಿರುವ ಮಾರ್ಗಸೂಚಿಯನ್ನು ಜೂನದದ 15 ರಿಂದ ಜಾರಿಗೆ ಬರುವಂತೆ ಮಾರ್ಪಾಡು ಮಾಡಿರುವುದಾಗಿ ಹೈ ಕೋರ್ಟ್ ತಿಳಿಸಿದೆ.

ಇದೇ 15 ರಿಂದ ಎರಡು ವಾರಗಳ ಅವಧಿಗೆ ಮಾತ್ರ ಒಂದು ಕೋರ್ಟ್ ನಲ್ಲಿ ದಿನಕ್ಕೆ ಬೆಳಗಿನ ಅವಧಿಯಲ್ಲಿ 10 ಮತ್ತು ಮಧ್ಯಾಹ್ನದ ಅವಧಿಯಲ್ಲಿ 10 ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲು ಕೈಗೆತ್ತಿಕೊಳ್ಳುವಂತೆ ಮಾರ್ಗಸೂಚಿಯಲ್ಲಿ ವಿವರಿಸಿದೆ.
ಒಂದು ವೇಳೆ ವಕೀಲರು ವಾದ ಮಂಡನೆಗೆ ಇಚ್ಛಿಸಿದರೆ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಕಲ್ಪಿಸಲಾಗುವುದು. ನ್ಯಾಯಾಲಯದ ಆವರಣಕ್ಕೆ ವಾದ ಮಂಡಿಸಲಿರುವ ವಕೀಲರನ್ನು ಹೊರತುಪಡಿಸಿ ಇತರರಿಗೆ ಪ್ರವೇಶವಿಲ್ಲ ಎಂದು ತಿಳಿಸಲಾಗಿದೆ.
ಇನ್ನು ಮುಂದಿನ ಎರಡು ವಾರಗಳ ಪರಿಸ್ಥಿತಿ ಅವಲೋಕಿಸಿ ಮಾರ್ಗಸೂಚಿ ಮಾರ್ಪಾಡು ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಉಚ್ಚ ನ್ಯಾಯಾಲಯ ಪ್ರಕಟಣೆ ಹೊರಡಿಸಿದೆ.
Related posts
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ- ಅನುಷ್ಠಾನದ ಪ್ರಕ್ರಿಯೆ ಬಗ್ಗೆ ವಿವರ ನೀಡದೆ ಮೌನವೇಕೆ : ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು: ಪರಿಶಿಷ್ಟ ಜಾತಿ ಮತ...
NEWS
ವಜಾ, ವರ್ಗಾವಣೆಗೊಂಡ ಸಾರಿಗೆ ನೌಕರರಿಗೆ ನಾಳೆ (ಸೆ.16) ಸಾರಿಗೆ ಸಚಿವರಿಂದ ಸಿಹಿಸುದ್ದಿ ಸಿಗುವುದು ಬಹುತೇಕ ಖಚಿತ !
ಬೆಂಗಳೂರು: ಮುಷ್ಕರ ಸಂದರ್ಭದಲ್...
NEWS
ಚಿರಂಜೀವಿ ಸರ್ಜಾ- ಜಗ್ಗೇಶ್ ಒಡನಾಟ
ಬೆಂಗಳೂರು: ಚಿರಂಜೀವಿ ಸರ್ಜಾ ಇ...
NEWS
Editordev
Leave a reply