NEWSನಮ್ಮಜಿಲ್ಲೆನಮ್ಮರಾಜ್ಯ

ಬಂಡಾಯ ಕುರಿತ ಸಭೆ ನಡೆದಿಲ್ಲ ಎಂದ ಕತ್ತಿ

ಉತ್ತರ ಕರ್ನಾಟಕದ ಊಟ ಸವಿಯಲ್ಲಷ್ಟೇ ಸೇರಿದ್ದೆವು ಎಂದ ಶಾಸಕರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೊರೊನಾದಿಂದ ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ತೊಂದರೆ ಆಗಿದೆ ಹೀಗಾಗಿ ಈ ಕುರಿತು ಚರ್ಚೆ ನಡೆಸಿದ್ದೇವೆಯೇ ವಿನಃ ಬೇರೆ ಯಾವುದೆ ವಿಷಯ ಕುರಿತು ಚರ್ಚೆ ಆಗಿಲ್ಲ ಎಂದು ಶಾಸಕ ಉಮೇಶ್‌ ಕತ್ತಿ ಬಂಡಾಯ ಎದ್ದಿರುವುದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಗುರುವಾರ ರಾತ್ರಿ ನಮ್ಮ ಮನೆಯಲ್ಲಿ ಉತ್ತರ ಕರ್ನಾಟಕದ ಊಟ ಸವಿಯಲ್ಲಷ್ಟೇ ನಾವು 25ಕ್ಕೂ ಹೆಚ್ಚು ಶಾಸಕರು ಸೇರಿದ್ದೆವು. ಇದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಗೊತ್ತು ಎಂದು ಕತ್ತಿ ಹೇಳಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

ಇನ್ನು ನಮ್ಮ ಪಕ್ಷದಲ್ಲಿ ಯಾವುದೇ ಬಂಡಾಯವಿಲ್ಲ. ಯಾವುದೇ ಸಭೆಯನ್ನು ಸೇರಿಲ್ಲ. ಬಂಡಾಯ ಚರ್ಚೆಯೂ ಆಗಿಲ್ಲ. ಆದರೆ ಕೊರೊನಾದಿಂದ ನಮ್ಮ ಭಾಗದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬ ಬಗ್ಗೆ ಒಟ್ಟಿಗೆ ಸೇರಿ ಮಾತನಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ಸರ್ಕಾರ ರಾಜ್ಯದಲ್ಲಿ ಸುಭದ್ರವಾಗಿರಲಿದೆ. ಉಳಿದ ಮೂರು ವರ್ಷಗಳು ಬಿಜೆಪಿ ಸರ್ಕಾರ ಇರಲಿದೆ. ಬೀಳಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

ಇನ್ನು ಬಸನಗೌಡ ಯತ್ನಾಳ್‌ ಮಾತನಾಡಿ, ಬಿ.ಎಸ್‌. ಯಡಿಯೂರಪ್ಪ ಅವರು ನಮ್ಮ ನಾಯಕರಲ್ಲ, ಅವರು ಮುಖ್ಯಮಂತ್ರಿ ಅಷ್ಟೇ ನಮ್ಮ ನಾಯಕರು ಜೆ.ಪಿ.ನಡ್ಡಾ ಮತ್ತು ಮೋದಿ ಅವರು ಎಂದು ಹೇಳಿದ್ದಾರೆ. ಜತೆಗೆ ನಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಸ್ಪಂದಿಸುತ್ತಿಲ್ಲ ಎಂಬ ಆರೋಪವನ್ನು ಮಾಡಿದ್ದಾರೆ.

ನಾನು ಯಡಿಯೂರಪ್ಪ ಸಿಎಂ ಆಗಿರುವವರೆಗೂ ಯಾವುದೇ ಸ್ಥಾನಕೊಡಿ ಎಂದು ಕೇಳುವುದಿಲ್ಲ. ಅಲ್ಲದೇ ಈ ಹಿಂದೆಯೂ ಕೇಳಿಲ್ಲ ಎಂದು ಅಸಮಾಧಾನದ ಮಾತನ್ನು ಆಡಿದ್ದಾರೆ.

ಇನ್ನು ಬಿಜೆಪಿಯ ಮತ್ತೊಬ್ಬ ಹಿರಿಯ ಶಾಸಕ ತಿಪ್ಪಾರೆಡ್ಡಿ ಅವರು ಸಿಎಂ ಯಡಿಯೂರಪ್ಪ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದಲ್ಲಿ ಹಿರಿಯ ಶಾಸಕರಿಗೆ ಸರಿಯಾದ ಸ್ಥಾನಮಾನ ಕೊಡುವಲ್ಲಿ ಸಿಎಂ ವಿಫಲವಾಗಿದ್ದಾರೆ. ಅವರ ನಡೆ ಪಕ್ಷದ ಹಲವು ಹಿರಿಯ ಶಾಸಕರಿಗೆ ಇರಿಸುಮುರಿಸು ಉಂಟು ಮಾಡಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

Leave a Reply