ಬೆಂಗಳೂರು: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ಸಂಸ್ಥೆಗಳ ನೌಕರರ ಮೇ ತಿಂಗಳ ವೇತನಕ್ಕಾಗಿ 325.01 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ
ಕಳೆದ ಮಾರ್ಚ್ 24ರಿಂದ ಲಾಕ್ ಡೌನ್‌ನಿಂದಾಗಿ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿರುವ ಕಾರಣ ವೇತನಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶೇಷ ಅನುದಾನ ನೀಡಿದ್ದಾರೆ ಎಂದು ಹೇಳಿದ್ದಾರೆ.
ಸರ್ಕಾರದಿಂದ ಸದ್ಯ ಅನುದಾನ ಬಿಡುಗಡೆ ಆದೇಶವಾಗಿದ್ದರೂ ಕಡತ ಖಜಾನೆಗೆ ಹೋಗಿ ಬರಲು ಒಂದೆರಡು ದಿನ ಬೇಕಾಗುವುದರಿಂದ ಕಳೆದ ತಿಂಗಳಿನಂತೆ ಬಹುತೇಕ ಜೂನ್ 15ರ ನಂತರ ಸಾರಿಗೆಯ ನಾಲ್ಕು ಸಂಸ್ಥೆಗಳ ನೌಕರರ ಖಾತೆಗೆ ವೇತನ ಜಮೆ ಆಗಲಿದೆ ಎಂದು ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಮಾಹಿತಿ ನೀಡಿದ್ದಾರೆ.