NEWSನಮ್ಮರಾಜ್ಯ

ಬಸ್‌ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಪ್ರಯಾಣಿಕರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೊರೊನಾ ಮಹಾಮಾರಿಯಿಂದ ಇಷ್ಟುದಿನ ಲಾಕ್‌ಡೌನ್‌ನಿಂದ ರಾಜ್ಯಾದ್ಯಂತ ನಿಲ್ಲಿಸಿದ್ದ  ಬಸ್‌ಗಳ ಓಡಾಟಕ್ಕೆ ಸರ್ಕಾರ ಇಂದಿನಿಂದ ಅನುಮಾಡಿಕೊಟ್ಟಿದೆ. ಆದರೆ ಸರ್ಕಾರ ಮಾಡಿರುವ ನಿಯಮವನ್ನು ಪ್ರಯಾಣಿಕರು ಪಾಲಿಸುತ್ತಿಲ್ಲ. ಇದರಿಂದ ಸಾರಿಗೆ ಸಿಬ್ಬಂದಿಗೆ ತುಂಬಾ ತೊಂದರೆ ಯಾಗುತ್ತಿದೆ.

ಮೆಜೆಸ್ಟಿಕ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೂಕು ನುಗ್ಗಲಿನಿಂದಲೇ ಬಸ್‌ ಹತ್ತುತ್ತಿದ್ದಾರೆ. ಜತೆಗೆ ಈಗಾಗಲೇ ವೃದ್ಧರು, ಮಕ್ಕಳನ್ನು ಕರೆದುಕೊಂಡು ಬಂದಿದ್ದಾರೆ. ಇದರಿಂದ ಸಾರಿಗೆ ಸಿಬ್ಬಂದಿ ಇವರನ್ನು ಕರೆದುಕೊಂಡು ಹೋಗಬೇಕೇ ಬೇಡವೆ ಎಂಬ ಗೊಂದಲದಲ್ಲಿ ಇದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಲು ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಬಂದಿರುವ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬದಲು ನೂಕು ನುಗ್ಗಲಿನಿಂದಲೇ ಹೋಗುತ್ತಿದ್ದಾರೆ. ಇನ್ನು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾರೆ ಜತೆಗೆ ವಯಸ್ಸಾದವರು ಇದ್ದಾರೆ. ಹೀಗಾದರೆ ಕೊರೊನಾ ಮಹಾಮಾರಿ ಇನ್ನು ಎಷ್ಟು ಜನ ತುತ್ತಾಗುತ್ತಾರೋ ಎಂಬ ಭಯ  ಕಾಡುತ್ತಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

Leave a Reply