ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಹೊಂದಿರುವ ಆಸ್ತಿಯವ ವಿವರವನ್ನು ಘೋಷಿಸಿಕೊಂಡಿದ್ದಾರೆ. ಅದರಲ್ಲಿ ಬಿಜೆಪಿಯ ಅಶೋಕ್ ಗಸ್ತಿ ತೀರ ಬಡವರಾಗಿದ್ದು, ಮಲ್ಲಿಕಾರ್ಜಿನ ಖರ್ಗೆ ಅವರು ಶ್ರೀಮಂತರು.
ಅಶೋಕ್ ಗಸ್ತಿ
ಬಿಜೆಪಿ ಅಭ್ಯರ್ಥಿ ಅಶೋಕ್ ಗಸ್ತಿ ಸ್ಥಿತಿವಂತರಲ್ಲ ನಾಲ್ವರು ಅಭ್ಯರ್ಥಿಗಳ ಪೈಕಿ ಕನಿಷ್ಠ ಆಸ್ತಿ ಹೊಂದಿದವರಾಗಿದ್ದಾರೆ
ಗಸ್ತಿ ಅವರ ಕುಟುಂಬದ ಒಟ್ಟು ಘೋಷಿತ ಆಸ್ತಿ 19.3 ಲಕ್ಷ ರೂ.ಗಳು ಗಸ್ತಿ ಗಿಂತ ಅವರ ಪತ್ನಿ ಸುಮಾ ಗಸ್ತಿ ಸ್ಥಿತಿಯಂತೆ ಅಶೋಕ್ ಬಳಿ ಎರಡು ಹಳೆಯ ಬಜಾಜ್ ಸ್ಕೂಟರ್ ಮತ್ತು ತುಂಡು ಭೂಮಿ ಇದೆ. ಸುಮಾ ಅವರ ಚರಾಸ್ತಿ ಮತ್ತು ಸ್ಥಿರಾಸ್ತಿ ಮೊತ್ತ 12.45 ಲಕ್ಷ ರೂ. ಅಶೋಕ್ ಅವರ ಚರಾಸ್ತಿ ಮತ್ತು ಸ್ಥಿರಾಸ್ತಿ ಮೊತ್ತ 2.45 ಲಕ್ಷ ರೂ. ನಗದು 1.5 ಲಕ್ಷ ರೂ. ಎಂದು ಪ್ರಮಾಣ ಪತ್ರದಲ್ಲಿ ಘೋಷಿಸಿ ಕೊಂಡಿದ್ದಾರೆ ಬ್ಯಾಂಕ್‌ನಲ್ಲಿ ತಮ್ಮ ಹೆಸರಿನಲ್ಲಿ 6223 , ಪತ್ನಿ ಹೆಸರಿನಲ್ಲಿ 8,006 ರೂ. ಎಲ್ಐಸಿ ಪಾಲಿಸಿ ಮೊತ್ತ ಮೂರು ಲಕ್ಷ ರೂ. ಸ್ವಂತಕ್ಕೆ ಚಿನ್ನಾಭರಣ ಹೊಂದಿಲ್ಲ. 8 ಲಕ್ಷ ಮೌಲ್ಯದ ಸಣ್ಣ ಭೂಮಿ ಹೊಂದಿದ್ದಾರೆ.
ಈರಣ್ಣ ಕಡಾಡಿ
ಇವರು 2.35 ಕೋಟಿ ರೂ. ಒಡೆಯ 2 ಲಕ್ಷ ರೂ ನಗದು, ಪೆಟ್ರೋಲ್ ಬಂಕ್ ಹೊಂದಿದ್ದಾರೆ. ಟೊಯೊಟೊ ಕಾರು ವಿವಿಧ ಬ್ಯಾಂಕ್ ಗಳಲ್ಲಿ 25.91 ಲಕ್ಷ ರೂ. ಠೇವಣಿ , 60 ಗ್ರಾಂನಷ್ಟು ಚಿನ್ನಾಭರಣ ಇದೆ. ದಂಪತಿ ಹೆಸರಿನಲ್ಲಿ 2.3 ಮೂರು ಎಕರೆ ಜಮೀನು ಮಕ್ಕಳ ಹೆಸರಿನಲ್ಲಿ 8.4 ಎಕರೆ ಜಮೀನು ಇದೆ. 60 ಸಾವಿರ ರೂ. ಮೌಲ್ಯದ ರಿವಾಲ್ವರ್ ಇದೆ ಎಂದು ಘೊಷಿಸಿಕೊಂಡಿದ್ದಾರೆ.
ದೊಡ್ಡ ಗೌಡರಿಗಿಂತ ಚೆನ್ನಮ್ಮ ಶ್ರೀಮಂತರು
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ತಮ್ಮ ಪತ್ನಿಗಿಂತ ಕಡಿಮೆ ಆದಾಯ ಹೊಂದಿದ್ದಾರೆ ಓಡಾಟಕ್ಕೆ ಮೂರು ಹಳೇ ಅಂಬಾಸಿಡರ್ ಕಾರು, ಕೃಷಿಗಾಗಿ ಎರಡು ಟ್ರ್ಯಾಕ್ಟರ್ ಗಳನ್ನು ಹೊಂದಿದ್ದಾರೆ ದೇವೇಗೌಡರ ವಾರ್ಷಿಕ ಆದಾಯ 10.25 ಲಕ್ಷ ರೂ.ಗಳು. ಚೆನ್ನಮ್ಮ ಅವರ ಆದಾಯ 20.17 ಲಕ್ಷ ರೂ. ಚೆನ್ನಮ್ಮರಿಗೆ ಕೃಷಿ ಮೂಲದಿಂದ 1,38,360 ರೂ ಆದಾಯ ಬರುತ್ತದೆ. 37. 63 ಲಕ್ಷ, ಚೆನ್ನಮ್ಮ 80.29
ಲಕ್ಷ ನಗದು ಹೊಂದಿದ್ದಾರೆ. ಇದಷ್ಟೇ ಅಲ್ಲದೆ 26.92 ಲಕ್ಷ ಷೇರುಗಳು ಮತ್ತು ಬಾಂಡ್‌ಗಳನ್ನು ಹೊಂದಿದ್ದಾರೆ. ಇದರ ಜತೆಗೆ ಚೆನ್ನಮ್ಮ ಅವರು 97.98 ಲಕ್ಷ ರೂ. ಸಾಲ ಮಾಡಿಕೊಂಡಿದ್ದಾರೆ.
ದೇವೇಗೌಡರ ಆಸ್ತಿ ಮೌಲ್ಯ 2019 ರಲ್ಲಿ 67.56 ಲಕ್ಷ ರೂ ಇದ್ದದ್ದು 72.6 ಲಕ್ಷಕ್ಕೆ ಏರಿಕೆಯಾಗಿದೆ. ಚೆನ್ನಮ್ಮ ಅವರ ಚರ ಆಸ್ತಿ 1.24 ಕೋಟಿಯಿಂದ 2.14 ಕೋಟಿ ರೂ.ಗೂ, ಸ್ಥಿರಾಸ್ತಿ 3.67 ಕೋಟಿ ರೂನಿಂದ 5.38 ಕೋಟಿ ರೂ.ಗಳಿಗೆ ಏರಿಕೆ ಆಗಿದೆ ಎಂದು ಗೌಡರು ಘೋಷಿಸಿಕೊಂಡಿದ್ದಾರೆ.
ಖರ್ಗೆ ಅವರ ಪತ್ನಿಯೇ ಶ್ರೀಮಂತೆ
ಖರ್ಗೆ ಅವರಿಗಿಂತ ಅವರ ಪತ್ನಿ ರಾಧಾಭಾಯಿ ಅವರೇ ಹೆಚ್ಚು ಶ್ರೀಮಂತರೆನಿಸಿದ್ದಾರೆ. ಖರ್ಗೆ ಅವರ ಬಳಿ ಸ್ವಂತ ಜಮೀನು, ಕಾರು ಇಲ್ಲ ಎಂದು 2020ರಲ್ಲಿ ನೀಡಿದ ಅಫಿಡವಿಟ್ ನಂತೆ ಸೂಚಿಸಿದ್ದಾರೆ.
ಖರ್ಗೆ ಅವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲ, ಅವರು ಬಿಎ, ಎಲ್‌ಎಲ್‌ಬಿ ಓದಿದ್ದಾರೆ. ಖರ್ಗೆ ಅವರು 28.39 ಲಕ್ಷ ರೂ. ಷೇರು, ಡಿವಿಡೆಂಡ್‌ಗಳ ಮೇಲೆ ಹೂಡಿದ್ದಾರೆ, ಪತ್ನಿ ಹೆಸರಲ್ಲಿ 2.60 ಲಕ್ಷ ರೂ. ಹೂಡಿಕೆ ಇದೆ. ಖರ್ಗೆ ಹಾಗೂ ಅವರ ಪತ್ನಿ ಬಳಿ ಯಾವುದೇ ಕಾರು ಇಲ್ಲ, ಸಾಲವೂ ಇಲ್ಲ, ಖರ್ಗೆ ಅವರ ಬಳಿ 10.30 ಲಕ್ಷ ರೂ. ಮೌಲ್ಯದ ಚಿನ್ನ-ಬೆಳ್ಳಿ ಇದೆ. ಪತ್ನಿ ಬಳಿ 29.35 ಲಕ್ಷ ಮೌಲ್ಯದ ಚಿನ್ನಾಭರಣಗಳಿವೆ. ಖರ್ಗೆ ಅವರ ಹೆಸರಿನಲ್ಲಿ ಕೃಷಿ ಭೂಮಿ ಇಲ್ಲ, ಪತ್ನಿ ರಮಾಬಾಯಿ ಹೆಸರಲ್ಲಿ 22 ಎಕರೆ ಕೃಷಿ ಜಮೀನಿದೆ, ಇದರ ಈಗಿನ ಮೌಲ್ಯ 44.08 ಲಕ್ಷ ರೂಪಾಯಿ. ಖರ್ಗೆ ಅವರ ಹೆಸರಿನಲ್ಲಿ 1.08 ಎಕರೆ ಕೃಷಿಯೇತರ ಜಮೀನು ಇವೆ. ಇದರ ಮಾರುಕಟ್ಟೆ ಮೌಲ್ಯ 48 ಲಕ್ಷ ರೂ. ಪತ್ನಿ ಹೆಸರಲ್ಲಿ 4.9 ಎಕರೆ ಕೃಷಿಯೇತರ ಜಮೀನಿದೆ ಇದರ ಮೌಲ್ಯ 1.9 ಕೋಟಿ ರುಪಾಯಿ.
ಪತ್ನಿ ಹೆಸರಿನಲ್ಲಿ 1.79 ಕೋಟಿ ಮೌಲ್ಯದ ಒಂದು ಹಾಗೂ 84 ಲಕ್ಷ ಮೌಲ್ಯದ ಒಂದು ವಾಣಿಜ್ಯ ಕಟ್ಟಡ ಇದೆ. ಖರ್ಗೆ ದಂಪತಿಗಳ ಹೆಸರಿನಲ್ಲಿ ಸದಾಶಿವನಗರದಲ್ಲಿ ಮನೆ ಇದ್ದು, ಇದರ ಮಾರುಕಟ್ಟೆ ಮೌಲ್ಯ 1.23 ಕೋಟಿ. ಖರ್ಗೆ ಅವರ ಹೆಸರಿನಲ್ಲಿ ಕಲಬುರಗಿಯಲ್ಲಿ 32 ಲಕ್ಷ ರೂ. ಮೌಲ್ಯದ ವಸತಿ ಕಟ್ಟಡವಿದೆ.
ಆರ್‌ಎಂವಿ ಎರಡನೇ ಹಂತದಲ್ಲಿ 4.64 ಕೋಟಿ ಮೌಲ್ಯದ ವಸತಿ ಕಟ್ಟಡ ಇದೆ. ಪತ್ನಿ ಹೆಸರಲ್ಲಿ 48.16 ಲಕ್ಷದ ಮನೆಯೊಂದಿದೆ. ಒಟ್ಟಾರೆ, 8.7 ಕೋಟಿ ರೂ. ವಸತಿ ಕಟ್ಟಡ, 2 ಕೋಟಿ ರೂ ವಾಣಿಜ್ಯ ಕಟ್ಟಡ, 42 ಲಕ್ಷ ರೂ ಕೃಷಿಯೇತರ ಜಮೀನು, 1 ಕೋಟಿ ರೂ. ಕೃಷಿ ಭೂಮಿ ಸೇರಿ ಸ್ಥಿರಾಸ್ತಿ 13 ಕೋಟಿ ರೂ. ಖರ್ಗೆ ಅವರ ಮೇಲೆ 10 ಲಕ್ಷ ರೂಪಾಯಿ ಸಾಲವಿದೆ. ಪತ್ನಿ ಹೆಸರಿನಲ್ಲಿ 21.22 ಲಕ್ಷ ಸಾಲವಿದೆ. ಒಟ್ಟಾರೆ, 31.22 ಲಕ್ಷ ರೂ. ಸಾಲ ಹೊಂದಿದ್ದಾರೆ. ಖರ್ಗೆ ಅವರ ಒಟ್ಟು ಚರಾಸ್ತಿ ಮೌಲ್ಯ 2.80 ಕೋಟಿ. ಸ್ಥಿರಾಸ್ತಿ ಮೌಲ್ಯ 7 ಕೋಟಿ ರು. ಖರ್ಗೆ ಅವರ ಒಟ್ಟು ಆಸ್ತಿ 9.80 ಕೋಟಿ ಇದೆ. ಖರ್ಗೆ ಅವರ ಪತ್ನಿ ಚರಾಸ್ತಿ, ಹಿಂದು ಅವಿಭಜಿತ ಕುಟುಂಬದ ಸ್ಥಿರಾಸ್ತಿ ಮೌಲ್ಯ ಸೇರಿಸಿದರೆ ಒಟ್ಟಾರೆ 15.80 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.