ಬೆಂಗಳೂರು: ಕರ್ನಾಟಕದಲ್ಲಿ ಇಂದು ಕೊರೊನಾ ವೈರಸ್ ಸ್ಫೋಟಗೊಂಡಿದ್ದು, ಇಂದು ಒಂದೇದಿನ ಅದು ಮಧ್ಯಾಹ್ನದ ವೇಳೆಗೆ 84 ಸೋಂಕು ಪ್ರಕರಣ ಪತ್ತೆಯಾಗಿದ್ದು, ರಾಜ್ಯದ ಜನರಲ್ಲಿ ಆತಂಕವನ್ನು ಇಮ್ಮಡಿಗೊಳಿಸಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಸೋಮವಾರ ಒಂದೇದಿನ 84 ಮಂದಿಯಲ್ಲಿ ಕೊರೊನಾ ಪಾಸಿಡಟಿವ್ ಕಂಡು ಬಂದಿದ್ದು, ಅದರಲ್ಲಿ ಈ ಹಿಂದೆ 88 ಕೊರೊನಾ ಪಾಸಿಟಿವ್ ಇದ್ದ ಮೈಸೂರು ಸಂರ್ಪೂಣ ಗುಣಮುಖವಾಗಿ ಮುಕ್ತಗೊಂಡಿತ್ತು ಆದರೆ ಇಂದು ಒಂದು ಪಾಸಿಟಿವ್ ಪ್ರಕರಣ ಜಿಲ್ಲೆಯಲ್ಲಿ ದೃಢಪಟಿದ್ದು ಮತ್ತೆ ಮೈಸೂರು ಕೊರೊನಾಗೆ ಸಿಲುಕಿದಂತ್ತಾಗಿದೆ.
ಇನ್ನು ಬೆಂಗಳೂರು 18, ಮಂಡ್ಯ 17,ಉತ್ತರ ಕನ್ನಡ ಜಿಲ್ಲೆ 8, ಕಲಬುರಗಿ ಮತ್ತು ರಾಯಚೂರು ತಲಾ 6, ಗದಗ, ವಿಜಯಪುರ, ಯಾದಗಿರಿ ತಲಾ 5, ಹಾಸನ 4, ಕೊಪ್ಪಳ 3, ಬೀದರ್, ದಾವಣಗೆರೆ, ಬಳ್ಳಾರಿ, ಮೈಸೂರು ಮತ್ತು ಕೊಡಗು ತಲಾ ಒಂದು ಪ್ರಕರಣ ಸೇರಿ ಒಟ್ಟು 84 ಸೋಂಕಿತರು ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತ ಸಂಖ್ಯೆ 1231ಕ್ಕೆ ಏರಿಕೆಯಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail