Please assign a menu to the primary menu location under menu

Search By Date & Category

Latestನಮ್ಮಜಿಲ್ಲೆರಾಜಕೀಯ

ಯಲಹಂಕದ ಬಿಬಿಎಂಪಿ ಕಚೇರಿಯ ಮುಂದೆ ಆಪ್ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಯಲಹಂಕದ ಬಿಬಿಎಂಪಿ ಕಚೇರಿಯ ಎದುರು ಜಮಾಯಿಸಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರ ಅಧ್ಯಕ್ಷ ಮೋಹನ್ ದಾಸರಿ ನೇತೃತ್ವದಲ್ಲಿ ಶಾಸಕ ಎಸ್. ಆರ್. ವಿಶ್ವನಾಥ್ ವಿರುದ್ಧ ಪ್ರತಿಭಟನೆ ನಡೆಸಿದರು.

ಸರ್ಕಾರವು ದುರ್ಬಲ ವರ್ಗಗಳಿಗೆ ಘೋಷಿಸಿರುವ ಕೊರೊನಾ ಪ್ಯಾಕೇಜ್ ಅನ್ನು ಆನ್ ಲೈನ್ ಮೂಲಕ ತಲುಪಿಸುವ ಪಕ್ಷದ ಆಪ್ ಸಹಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತಿದ್ದ ಬಿಜೆಪಿ ಬೆಂಬಲಿಗರು ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿಸದಂ, ರಾಜ್ಯ ಹಿಂದುಳಿದ ವಿಭಾಗದ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ , ಬೆಂಗಳೂರು ನಗರ ಎಸ್ಸಿ ಎಸ್ಟಿ ವಿಭಾಗದ ಅಧ್ಯಕ್ಷ ಜಯಕುಮಾರ್, ಬೆಂಗಳೂರು ರಾಜಕೀಯ ವ್ಯವಹಾರಗಳ ಅಧ್ಯಕ್ಷ ಪಣಿರಾಜ್, ಸುಹಾಸಿನಿ, ಉಷಾ ಮೋಹನ್,ಪ್ರಕಾಶ್ ಹಾಗೂ ಇನ್ನಿತರ ಸ್ಥಳೀಯರು ಭಾಗವಹಿಸಿದ್ದರು.

ಸತ್ಯಪಥ ನಿಮ್ಮ ವಿಜಯಪಥಕ್ಕೆ  ಬಲ ತುಂಬಲು 2ರೂ.ನಿಂದ ನಿಮಗೆ ಅನಿಸಿದಷ್ಟು ದೇಣಿಗೆ (Donation) ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ.   ಈ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವ  ಅಥವಾ 9986160163ಗೆ  ಕಳುಹಿಸುವ ಮೂಲಕ ಮಾರ್ಗದೀಪವಾಗಿರಿ.

Leave a Reply