NEWSನಮ್ಮಜಿಲ್ಲೆರಾಜಕೀಯ

ಬೆಳ್ಳಂದೂರು ವಾರ್ಡ್ ನಲ್ಲಿ ಪ್ರಭಾವಿಗಳಿಂದ ರಾಜಕಾಲುವೆ ಒತ್ತುವರಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಗರದ ಬೆಳ್ಳಂದೂರು ವಾರ್ಡಿನಲ್ಲಿ ಪ್ರಭಾವಿಗಳಿಂದ ರಾಜಕಾಲುವೆ ಒತ್ತುವರಿಯಾಗಿ ಜುನ್ನಸಂದ್ರ ಹಾಗೂ ಹಾಲನಯಕನಹಳ್ಳಿ ಜನಗಳು ಕೊಳಚೆ ನೀರಲ್ಲಿ ಬದುಕಬೇಕಾದ ಸಂದರ್ಭ ಬಂದೊದಗಿದೆ.

ಜುನ್ನಸಂದ್ರದ ಗ್ರೀನ್‌ ವಿಲ್ಲೇ ಲೇಔಟ್ ಕಡೆಗೆ ಹೋಗುವ 40 ಅಡಿ ರಸ್ತೆ ಈಗ ಒಂದು ಕೊಳಚೆ ಈಜುಕೊಳವಾಗಿ ಮಾರ್ಪಟ್ಟಿದೆ. ಈ ಪರಿಸರದ ಕೊಳಚೆ ಹರಿದು ಹೋಗಲು ಒಂದು. ರಾಜಕಾಲುವೆ ಇದ್ದು ಮುಖ್ಯ ಕಾಲುವೆಯನ್ನು ಸೇರುತ್ತದೆ.

ಈ ರಾಜಕಾಲುವೆ ರೈನ್‌ಬೋ ಡ್ರೈವ್ ವಿಲ್ಲೇ ಮೂಲಕ ಹಾದುಹೋಗುತ್ತದೆ. ಈ ವಿಲ್ಲಾದ ಬಿಲ್ಡರ್ ಈ ರಾಜಕಾಲುವೆಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಹೀಗಾಗಿ ಈ ನೀರು ಸರಾಗವಾಗಿ ಹೋಗುತ್ತಿಲ್ಲ. ಇದಕ್ಕೆಲ್ಲ ಬಿಬಿಎಂಪಿ ಹಾಗೂ ಶಾಸಕ ಆರವಿಂದ ಲಿಂಬಾವಳಿ ಅವರ ನಿರ್ಲಕ್ಷ್ಯವೇ ಕಾರಣ ಎಂದು ಆಮ್ ಆದ್ಮಿ ಪಕ್ಷದ ಮಹಾದೇವಪುರ ಕ್ಷೇತ್ರದ ಅಧ್ಯಕ್ಷ ಅಶೋಕ್ ಮೃತ್ಯುಂಜಯ ಅಪಾದಿಸಿದ್ದಾರೆ.

ಈ ಕಾರಣಕ್ಕೆ ಕಳೆದ ಏಳು ವರ್ಷಳಿಂದ ಮಳೆಗಾಲದಲ್ಲಿ ರಸ್ತೆಗಳಲ್ಲಿ ಕನಿಷ್ಠ 2-3 ಅಡಿ ನೀರು ನಿಲ್ಲುತ್ತಿದೆ. ಈ ಕಾರಣದಿಂದಾಗಿ ಮಕ್ಕಳಿಗೆ ಹೊರಗಡೆ ಆಟವಾಡಲು, ಹಿರಿಯರಿಗೆ ನಡೆದು ಹೋಗಲು ಕಷ್ಟವಾಗುತ್ತಿದೆ. ನೀರು ನಿಂತ ಪರಿಣಾಮ ಡೆಂಗ್ಯೂ, ಮಲೇರಿಯಾ ಹರಡುತ್ತಿದೆ.

ಸ್ಮಶಾನದ ತನಕ ಈ ಕೊಳಚೆ ನೀರು ಬಂದು ಸತ್ತವರಿಗೂ ಮರಣದ ನಂತರ ಕಾಟ ಕೊಡುತ್ತಿದ್ದಾರೆ. ಹಾಲನಯಕನಹಳ್ಳಿ ಸ್ಥಳೀಯ ಸ್ಥಳೀಯರಾದ ಅಂಬರೀಷ ರೆಡ್ಡಿ ಅವರು ಈ ವಿಷಯದ ಬಗ್ಗೆ, ಎಸಿ, ಡಿಸಿ , ತಹಸೀಲ್ದಾರ್‌ ಹಾಗೂ ಶಾಸಕ ಅರವಿಂದ ಲಿಂಬಾವಳಿ ಅವರನ್ನು ಭೇಟಿಯಾಗಿ ಒತ್ತುವರಿ ತೆರವುಗೊಳಿಸುವುದಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೂ ಏನು ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.

ಒತ್ತುವರಿ ಮಾಡಿರುವವರು ತುಂಬಾ ಪ್ರಭಾವಿ ವ್ಯಕ್ತಿಗಳು ಅದಕ್ಕಾಗಿ ಯಾವ ಅಧಿಕಾರಿಗಳು ಹಾಗೂ ಶಾಸಕರು ಸರಿಯಾದ ಕ್ರಮತೆಗೆದುಕೊಳ್ಳುತ್ತಿಲ್ಲ ಎಂದು ಆಪಾಸಿದರು. ಈ ಸಮಸ್ಯೆಯ ಬಗ್ಗೆ ಜನತೆ ದನಿ ಎತ್ತಿದ್ದಾರೆ. ಶಾಸಕ ಅರವಿಂದ್ ಲಿಂಬಾವಳಿ ಅವರಿಗೆ ದೂರನ್ನೂ ನೀಡಿದ್ದಾರೆ. ಆದರೆ ಈ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ.

ಈ ಎಲ್ಲಾ ಸಮಸ್ಯೆಗಳ ಮಧ್ಯೆ ಕಸದ ರಾಶಿ ಕೂಡ ಬೆಳೆದಿದೆ. ಜುನ್ನಸಂದ್ರ ಗ್ರಾಮದ ಜನತೆ ಈ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ. ನೆಮ್ಮದಿಯಿಂದ ರಸ್ತೆಯಲ್ಲಿ ನಡೆಯಲು ಸಾಧ್ಯವಾಗದೆ ಆಡಳಿತ ವ್ಯವಸ್ಥೆಯ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಸ್ಥಳೀಯರು ಡಾಕ್ಟರ್ಸ್, ಇಂಜಿನಿಯರ್‌ಗಳು ಈ ಲೇಔಟ್ ನಲ್ಲಿ ವಾಸವಾಗಿದ್ದು ಅವರು ತಮಗೆ ಸಿಗಬೇಕಾದ ಮೂಲ ಭೂತ ಸೌಕರ್ಯಗಳನ್ನು ಕೊಡದೆ ಬಿಬಿಎಂಪಿ ಹಾಗೂ ಶಾಸಕರು ಅವಮಾನ ಮಾಡುತ್ತಿದ್ದಾರೆ.

ಶಾಸಕ ಅರವಿಂದ್ ಲಿಂಬಾವಳಿ ಅವರೇ, ನಿಮ್ಮ ಮನೆಯ ಮುಂದೆ ಈ ರೀತಿ ನೀರು, ಕಸ ನಿಂತರೆ ನೀವು ನಿಮಿಷದ ಒಳಗೆ ಸರಿಪಡಿಸುತ್ತೀರ. ನಿಮ್ಮನ್ನು ಚುನಾಯಿಸಿದ ಜನತೆಗೆ ಸಂಕಷ್ಟವನ್ನು ಕೇಳುವ ಜವಾಬ್ದಾರಿ ನಿಮ್ಮಲ್ಲಿ ಇಲ್ಲವೇ? ನೀವು ಜನತೆಯ ನೋವನ್ನು ಅಲಿಸದೆ ದ್ರೋಹ ಬಗೆಯಬೇಡಿ. ನಿಮ್ಮನ್ನು ಜನತೆ ಯಾವತ್ತೂ ಕ್ಷಮಿಸುವುದಿಲ್ಲ ಎಂದು ಸ್ಥಳೀಯ ಜನತೆ ಸ್ಥಳೀಯ ಜನತೆ ಹಿಡಿಶಾಪ ಹಾಕುತ್ತಿದ್ದರು.

ಅಶೋಕ್ ಮೃತ್ಯುಂಜಯ ಕೊನೆಯಲ್ಲಿ ಮಾತನಾಡಿ, ಇನ್ನೂ 15 ದಿನಗಳಲ್ಲಿ ಜುನ್ನಸಂದ್ರ ಜನಗಳ ಸಮಸ್ಯೆಗೆ ಪರಿಹಾರ ಕೊಡದೆ ಹೋದರೆ ಜುನ್ನಸಂದ್ರ ಗ್ರಾಮದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮದ ಜನರು ಸೇರಿ ಉಗ್ರ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು