ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಮೈಸೂರಿನಲ್ಲಿ ದಿನೇದಿನೆ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಇಂದಿನಿಂದ ಜೂನ್ 7ರವೆಗೆ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗುತ್ತಿದೆ. ಜಿಲ್ಲಾಡಳಿತ ಜಿಲ್ಲೆಯಲ್ಲಿ ಲಾಕ್‌ಡೌನ್ ಅನ್ನು ಮೇ29ಬೆಳಗ್ಗೆ 6 ರಿಂದ ಜಾರಿಗೊಳಿಸಿದೆ.
ವಾರದಲ್ಲಿ ಎರಡು ದಿನ ಸೋಮವಾರ ಮತ್ತು ಗುರುವಾರ ಮಾತ್ರ ಅಗತ್ಯ ವಸ್ತುಗಳ ಸೇವೆಗೆ ಅವಕಾಶ ನೀಡಿದೆ. ಈ ರಡು ದಿನಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಖರೀದಿ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಬ್ಯಾಂಕ್ ಹಾಗೂ ಎಲ್‌ಐಸಿ ವ್ಯವಹಾರಗಳಿಗೂ ಈ ದಿನಗಳಂದು ಮಾತ್ರ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ಅವಕಾಶ ನೀಡಲಾಗಿದೆ.
ಯಾವೆಲ್ಲ ಸೇವೆ ಲಭ್ಯ?
* ಪ್ರತ್ಯೇಕ ಹಾಲಿನ ಬೂತ್‌ಗಳು.
*ಮೆಡಿಕಲ್‌ಗಳು ಮತ್ತು ವೈದ್ಯಕೀಯ ಸೇವೆಗಳು.
*ಹಾಪ್‌ಕಾಮ್ಸ್ ಅಡಿಯಲ್ಲಿ ಬರುವ ತರಕಾರಿ ಮತ್ತು ಹಣ್ಣಿನ ಅಂಗಡಿಗಳು.
*ನ್ಯಾಯಬೆಲೆ ಅಂಗಡಿಗಳು.
*ಹೋಟೆಲ್ ಪಾರ್ಸೆಲ್ ಸೇವೆ, ಪುಡ್ ಡಿಲುವರಿ ಮಾಡುವ ಸ್ವಿಗ್ಗಿ ಮತ್ತು ಜುಮೋಟೋ ಸಂಚಾರ.
*ತಳ್ಳುವ ಗಾಡಿಗಳಲ್ಲಿ ಮನೆ ಮನೆ ಬಳಿ ತರಕಾರಿ ಮಾರಾಟ ಮಾಡಲು.
*ಸರಕು ಸಾಗಾಣೆ ವಾಹನಗಳಿಗೆ ಅವಕಾಶ.
* ಪೆಟ್ರೋಲ್ ಬಂಕ್ ಇದೆ.
ಸೋಮವಾರ ಮತ್ತು ಗುರುವಾರ ಅವಕಾಶ
* ದಿನಸಿಅಂಗಡಿಗಳು ತೆರೆಯಬಹುದು.
*ಮಾರುಕಟ್ಟೆ ರಸ್ತೆ ಬದಿಯಲ್ಲಿ ತರಕಾರಿ, ಹಣ್ಣು ಮಾರಾಟ.
* ಚಿಕನ್ ಮತ್ತು ಮಟನ್ ಸ್ಟಾಲ್‌ಗಳು.
* ಮದ್ಯದ ಅಂಗಡಿಗಳಿಗೆ ಅವಕಾಶ
* ಬ್ಯಾಂಕ್ ಮತ್ತು ಎಲ್‌ಐಸಿ ಚಟುವಟಿಕೆ.
ಮನೆ ಬಳಿಗೆ ತರಕಾರಿ
ಮೇ 29 ರಿಂದ ಜೂನ್ 7ರವರೆಗೆ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಹಾಗೂ ತೋಟಗಾರಿಕೆ ಇಲಾಖೆಯು ಜಿಲ್ಲಾ ಹಾಪ್‌ಕಾಮ್ಸ್ ವತಿಯಿಂದ ನಗರದ ಜನತೆಗೆ ಅವರವರ ಮನೆಯ ಬಾಗಿಲಿಗೆ ಹಣ್ಣು ಮತ್ತು ತರಕಾರಿಗಳನ್ನು ವಾಹನಗಳ ಮೂಲಕ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಕಠಿಣ ಕ್ರಮದ ಎಚ್ಚರಿಕೆ ನೀಡಿದ ಡಿಸಿಪಿ ಡಾ. ಪ್ರಕಾಶ್ ಗೌಡ
ವೈದ್ಯಕೀಯ ತುರ್ತು ವಾಹನಗಳು ಮತ್ತು ಸರಕು ಸಾಗಾಟ ವಾಹನಗಳನ್ನು ಹೊರತುಪಡಿಸಿ ಉಳಿದ ಯಾವುದೇ ವಾಹನಗಳ ಸಂಚಾರ, ವ್ಯಕ್ತಿಗಳ ಓಡಾಟಕ್ಕೆ ಅವಕಾಶವಿಲ್ಲ. ಅಂತಹ ಓಡಾಟ ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಅಲ್ಲದೇ, ವಾಹನ ವಶಪಡಿಸಿಕೊಳ್ಳಲಾಗುವುದು ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ತಿಳಿಸಿದ್ದಾರೆ.