NEWSದೇಶ-ವಿದೇಶ

ಭಾರಿ ಮೊತ್ತದ ಕಾರು ಖರೀದಿಸಲು ತಾಯಿ ಕಾರು ಚಲಾಯಿಸಿಕೊಂಡು ಬಂದ ಐದರ ಬಾಲಕ

ರಸ್ತೆಯಲ್ಲಿ ಅಡ್ಡಾದಿಡ್ಡಿ ಚಾಲನೆ ನೋಡಿ ತಡೆದ ಪೊಲೀಸರೇ ದಂಗಾಗಿ ನಿಂತರು

ವಿಜಯಪಥ ಸಮಗ್ರ ಸುದ್ದಿ

ನ್ಯೂಯಾರ್ಕ್: ಐದು ವರ್ಷದ ಬಾಲಕನೊಬ್ಬ ಕೇವಲ 3 ಡಾಲರ್‌ಅನ್ನು ಜೇಬಿನಲ್ಲಿ ಇಟ್ಟುಕೊಂಡು ಸುಮಾರು 1.40ಕೋಟಿ ರೂ. ಕಾರನ್ನು ಖರೀದಿಸಲು ಹೋಗುತ್ತಿದ್ದನ್ನು ನೋಡಿ ಪೊಲೀಸರೆ ದಂಗಾದ ಘಟನೆಯೊಂದು ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಿ: https://play.google.com/store/apps/detail

ಬಾಲಕ ಕಾರು ಖರೀದಿಸಲು ಹೋಗುತ್ತಿದ್ದರೆ ಪೊಲೀಸರೇಕೆ ದಂಗಾದರು ಎಂದು ಅಚ್ಚರಿಪಡುತ್ತಿದ್ದೀರ ಇಲ್ಲೇ ಇರೋದು ಸ್ವಾರಸ್ಯಕರ ಸಂಗತಿ. ಅದೇನಪ್ಪ ಅಂದ್ರೆ, ಕರ್ತವ್ಯ ನಿರತ ಪೊಲೀಸರು ಅಡ್ಡಾದಿಡ್ಡಿ ಚಲಾಯಿಸಿಕೊಂಡು ಬರುತ್ತಿದ್ದ ಕಾರೊಂದನ್ನು ನೋಡಿ ಓಡಿಹೋಗಿ ಅಡ್ಡಗಟ್ಟಿದ್ದಾರೆ. ಆದರೆ ಆ ಕಾರಿನಲ್ಲಿ ಇದ್ದದ್ದು 18 ವರ್ಷ ತುಂಬಿದವರಲ್ಲ ಬದಲಿಗೆ ಈ ಐದು ವರರ್ಷದ ಬಾಲಕ.

ಇದೇನಪ್ಪ ಈತ ಕಾರು ಚಲಾಯಿಸಿಕೊಂಡು ಬಂದನೇ ಎಂದು ಮತ್ತೆ ಉಬ್ಬುಯೇರಿಸಬೇಡಿ. ಹೌದು ಈತನೆ ಕಾರು ಚಲಾಯಿಸಿಕೊಂಡು ಬಂದಿದ್ದು, ಕಾರಣ ಏನಪ್ಪ ಅಂದ್ರೆ ಬಾಲಕ ತನ್ನ ತಾಯಿ ಬಳಿ ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಕಾರು ಬೇಕೆಂದು ಹಠಹಿಡಿದಿದ್ದಾನೆ. ಅದಕ್ಕೆ ಒಪ್ಪದಿದ್ದಾಗ. ತನ್ನ ಬಳಿ ಇದ್ದ 3 ಡಾಲರ್‌ನಲ್ಲೇ ಆ ಲ್ಯಾಂಬೋರ್ಗಿನಿ ಕಾರು ಖರೀದಿಸಲು ತನ್ನ ತಾಯಿಯ ಕಾರನ್ನು ಚಲಾಯಿಸಿಕೊಂಡು ಬಂದಿದ್ದಾನೆ. ಅದನ್ನು ನೋಡಿದ ಪೊಲೀಸು ತಡೆದಾಗ ಅದಲ್ಲಿದ್ದದ್ದು ಬಾಲಕ ಎಂದು ತಿಳಿದು ಬಂದಿದೆ.

ಅಂದಹಾಗೆ ಈ ಘಟನೆ ನಡೆದಿರುವುದು ಅಮೆರಿಕದ ಉತಾಹ್ ರಾಜ್ಯದಲ್ಲಿ. ಅಡ್ಡಾದಿಡ್ಡಿ ಹೋಗುತ್ತಿದ್ದ ಕಾರನ್ನು ಗಮನಿಸಿದ ಪೊಲೀಸರು  ಯಾರೋ ಮದ್ಯದ ಅಮಲಿನಲ್ಲಿ ಕಾರು ಓಡಿಸುತ್ತಿರಬೇಕೆಂದು ಭಾವಿಸಿದ್ದರು. ಆದರೆ  ಡ್ರೈವಿಂಗ್ ಸೀಟ್ ನಲ್ಲಿದ್ದ ಬಾಲಕನನ್ನು  ಕಂಡು  ಕೆಲಕಾಲ ಆಶ್ಚರ್ಯಕ್ಕೀಡಾದರು. ಇನ್ನು ಹೊಸ ಲ್ಯಾಂಬೋರ್ಗಿನಿ ಕಾರಿನ ಬೆಲೆ ಸುಮಾರು 2 ಲಕ್ಷ ಡಾಲರ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರಿ ಅನಾಹುತವೇ ಆಗಿಹೋಗುತ್ತಿತ್ತು
ಹೆದ್ದಾರಿಯಲ್ಲಿ ಕಾರು ಮನಬಂದಂತೆ ಚಲಾಯಿಸುತ್ತಿದ್ದ ಕೂಡಲೇ ಪೊಲೀಸರು ತಡೆದಿದ್ದಾರೆ. ಇಲ್ಲದಿದ್ದರೇ ಭಾರಿ ಅನಾಹುತವೇ ಆಗಿಹೋಗುತ್ತಿತ್ತು.  ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ. ಇನ್ನು ಬಾಲಕನ ಪಾಲಕರ ವಿರುದ್ಧ ಪ್ರಕರಣ ದಾಖಲಿಸುವ ಸಂಬಂಧ ಸರ್ಕಾರಿ ವಕೀಲರು ನಿರ್ಧರಿಸಲಿದ್ದಾರೆ ಎಂದು ಪೊಲೀಸ್ ಅಧಿಕಾರಿ ರಿಕ್ ಮಾರ್ಗನ್ ಹೇಳಿದ್ದಾರೆ.

ನಮ್ಮ ಮಗ ಇದೇ ಮೊದಲು ಈ ರೀತಿ ಮಾಡಿದ್ದಾನೆ. ಆತ ಕಾರು ತೆಗೆದುಕೊಂಡು ಬಂದ ವೇಳೆ ನಾವು ಇರಲಿಲ್ಲ. ಅದನ್ನೇ ನೋಡಿಕೊಂಡು ಕಾರು ಚಲಾಯಿಸಿಕೊಂಡು ಹೋಗಿದ್ದಾನೆ ಎಂದು ಪಾಲಕರು ಹೇಳುತ್ತಿದ್ದಾರೆ. ಅದೇನೇ ಇರಲಿ ಸ್ವಲ್ಪ ಯಾಮಾರಿದರೂ ಎಂಥ ಅನಾಹುತವಾಗುತ್ತಿತ್ತು ಎಂಬುದನ್ನು  ನೆನಸಿಕೊಂಡರೇನೆ ಮೈ ರೋಮಗಳು ಸೆಟೆದು ನಿಲ್ಲುತ್ತವೆ. ಇಂಥ ವಿಷಯದ ಬಗ್ಗೆ ಪಾಲಕರು ಭಾರಿ ಜಾಗರೂಕರಾಗಿರಬೇಕಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಿ: https://play.google.com/store/apps/detail

mgid.com, 613802, DIRECT, d4c29acad76ce94f
mgid.com, 613802, DIRECT, d4c29acad76ce94f

Leave a Reply

error: Content is protected !!