NEWSಕೃಷಿನಮ್ಮರಾಜ್ಯ

ಮರಭೂಮಿ ಮಿಡತೆ  ತಡೆಗೆ  ಸಜ್ಜಾಗಿ

ವಿಜಯಪಥ ಸಮಗ್ರ ಸುದ್ದಿ

ಗದಗ: ಮರಭೂಮಿ ಮಿಡತೆ ಹಾವಳಿ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಹರಡುತ್ತಿರುವುದರಿಂದ ಮುಂದುವರೆದು ಗದಗ ಜಿಲ್ಲೆಯಲ್ಲಿ ಆಗಬಹುದಾದ ಮಿಡತೆಗಳ ದಾಳಿಯನ್ನು ನಿಯಂತ್ರಿಸಲು  ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಮರಭೂಮಿ ಮಿಡತೆ ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಿಡತೆ ಹಾವಳಿ ನಿರ್ವಹಣೆಗೆ ಈಗಾಗಲೇ ರಚಿಸಲಾಗಿರುವ ಸಮಿತಿಯು ಸರ್ವೇಕ್ಷಣೆ ನಡೆಸಿ ಕೀಟದ ಹಾವಳಿ ಕಂಡುಬಂದಲ್ಲಿ ಅಗತ್ಯದ ಕ್ರಮ ಕೈಗೊಳ್ಳಬೇಕು. ಜಿಲ್ಲೆಗೆ ಸಧ್ಯಕ್ಕೆ ಮಿಡತೆ ತೊಂದರೆ ಇಲ್ಲದಿರುವುದರಿಂದ ರೈತರು ಆತಂಕಕ್ಕೆ ಒಳಗಾಗಬಾರದು ಆದರೆ ಈ ಕುರಿತಂತೆ ರೈತರಿಗೆ ಜಾಗೃತಿ ಮೂಡಿಸಬೇಕು. ಇವುಗಳ ಹಾವಳಿ ತಡೆಗಾಗಿ ರೈತರು ಕೈಗೊಳ್ಳಬೇಕಾದ ನಿಯಂತ್ರಣ ಕ್ರಮಗಳ ಕುರಿತು ಜಾಗೃತಿ ಮೂಡಿಸಲು ತಿಳಿಸಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಮಾತನಾಡಿ ಕೃಷಿ ವಿಜ್ಞಾನಿಗಳ ಸರ್ವೇಕ್ಷಣೆ ರೀತ್ಯ ಜಿಲ್ಲೆಗೆ ಮರಭೂಮಿ ಮಿಡತೆಗಳು ದಾಳಿ  ಸಂಭವ ಕಡಿಮೆ ಇದೆ. ಆದರೂ ಕೂಡಾ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯದ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ., ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ತೋಟಗಾರಿಕೆ ಉಪನಿರ್ದೇಶಕ ಶೈಲೇಂದ್ರ ಬಿರಾದಾರ, ರೇಷ್ಮೆ ಉಪನಿರ್ದೇಶಕ ಎನ್.ಮಹೇಶಯ್ಯ ಎಲ್ಲ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ವಿಜ್ಞಾನಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಮುಂಜಾಗ್ರತಾ ನಿರ್ವಹಣಾ ಕ್ರಮಗಳು
ಕೀಟವು ಬೆಳೆಗಳಲ್ಲಿ ಕಂಡು ಬಂದಲ್ಲಿ ಡ್ರಮ್, ಪಾತ್ರೆ ಅಥವಾ ಫಲಕಗಳನ್ನು ಬಡಿಯುವುದರ ಮೂಲಕ ಹೆಚ್ಚಾಗಿ ಶಬ್ದವನ್ನು ಮಾಡಿ ಮಿಡತೆ ಸಮೂಹವನ್ನು ಇತರೆಡೆಗೆ ಓಡಿಸುವುದು. ಬೇವಿನ ಮೂಲದ ಕೀಟನಾಶಕವನ್ನು (ಅಜಾಡಿರೆಕ್ಟಿನ್ 0.15% ಇ.ಸಿ @ 3 ಎಂ.ಎಲ್/ಲೀ) ಬೆಳೆಗಳಲ್ಲಿ ಸಿಂಪಡಿಸುವುದು.

ಕೀಟ ಬಾಧಿತ ಪ್ರದೇಶದಲ್ಲಿ ಹೊಗೆ ಮತ್ತು ಬೆಂಕಿಯನ್ನು ಹಾಕುವುದರಿಂದ ಮಂಕಾಗಿಸುವುದು ಮತ್ತು ಕೊಲ್ಲುವುದು ಅಥವಾ ಬೇರೆಡಗೆ ಓಡಿಸುವುದು. ಕೀಟವು ಮರಿಹುಳುವಾಗಿದ್ದಲ್ಲಿ ಬಾಧಿತ ಪ್ರದೇಶದಲ್ಲಿ ಕನಿಷ್ಟ 2 ಅಡಿ ಆಳ ಮತ್ತು 3 ಅಡಿ ಅಗಲದ ಗುಂಡಿಗಳನ್ನು ನಿರ್ಮಿಸಿ ಮರಿಹುಳುಗಳನ್ನು ಸೆರೆ ಹಿಡಿದು ನಾಶಪಡಿಸುವುದು.ಯಂತ್ರಗಳ ಸಹಾಯದಿಂದ ಮಿಡತೆ ಬರುವ ದಿಕ್ಕಿನ ಕಡೆಗೆ ಜ್ವಾಲೆ ಎಸೆಯುವುದು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಬೆಳೆಯ ಅಥವಾ ಮರಗಳ ಮೇಲೆ ಮರುಭೂಮಿ ಮಿಡತೆ ಕಂಡುಬಂದಲ್ಲಿ ಕ್ಲೊರೋಪೈರಿಪಾಸ್ 20% ಇ.ಸಿ 1.2 ಲೀ. ಪ್ರತಿ ಹೆಕ್ಟೇರ್ಗೆ, ಕ್ಲೊರೋಪೈರಿಪಾಸ್ 50% ಇ.ಸಿ 480 ಎಂ.ಎಲ್ ಪ್ರತಿ ಹೆಕ್ಟೇರ್ಗೆ, ಲಾಮ್ಡಾಸಹಲೋಥ್ರಿನ್ 5.0% ಇ.ಸಿ 400 ಎಂ.ಎಲ್ ಪ್ರತಿ ಹೆಕ್ಟೇರ್ಗೆ, ಡೆಲ್ಟಮೆಥ್ರಿನ್ 2.8% ಇ.ಸಿ 450 ಎಂ.ಎಲ್ ಪ್ರತಿ ಹೆಕ್ಟೇರ್ಗೆ, ಮೆಲಾಥಿಯಾನ್ 50% ಇ.ಸಿ 1.85 ಲೀ. ಪ್ರತಿ ಹೆಕ್ಟೇರ್ಗೆ ಮತ್ತು ಮೆಲಾಥಿಯಾನ್ 25% ಡಬ್ಲ್ಯೂಪಿ 3.7 ಕೆ.ಜಿ ಪ್ರತಿ ಹೆಕ್ಟೇರ್ಗೆ ಕೀಟನಾಶಕ ಸಿಂಪರಣೆ ಮಾಡುವುದು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ