NEWSಆರೋಗ್ಯದೇಶ-ವಿದೇಶ

ಕೊರೊನಾ ಪೀಡಿತರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್‌ ಔಷಧ ನೀಡುವುದಕ್ಕೆ WHOನಿಂದ ತಡೆ

ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದಿಂದ ಕೊರೊನಾ ಸೋಂಕು ನಾಶಕ್ಕಿಂತ ರೋಗಿಗಳು ಮೃತರಾಗುವ ಭಯ

ವಿಜಯಪಥ ಸಮಗ್ರ ಸುದ್ದಿ

ಜಿನೆವಾವಿಶ್ವಮಾರಿ ಕೊರೊನಾ ವೈರಸ್‌ ಕೊಲ್ಲುವ ಔಷಧವಾಗಿ ಉಪಯೋಗಿಸುತ್ತಿರುವ ಹೈಡ್ರಾಕ್ಸಿಕ್ಲೋರೋಕ್ವಿನ್‌ನ  ವೈದ್ಯಕೀಯ ಪ್ರಯೋಗ ಮಾಡದಂತೆ ವಿಶ್ವ ಆರೋಗ್ಯ ಸಂಸ್ಥೆ ತಡೆ ನೀಡಿದೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದಿಂದ ಕೊರೊನಾ ಸೋಂಕು ಇರುವವರು ಗುಣಮುಖರಾಗುವುದಕ್ಕಿಂತ ಅಸುನೀಗುವ ಅಪಾಯವೇ ಹೆಚ್ಚು ಎಂದು  ವೈದ್ಯಕೀಯ ವರದಿಯ ಬಂದ ಹಿನ್ನೆಲೆಯಲ್ಲಿ WHO ಮುನ್ನೆಚ್ಚರಿಕಾ ಕ್ರಮವಾಗಿ ಈ ತಡೆ ನೀಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್‌ ತಿಳಿಸಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

ಈ ಕುರಿತು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,   ಮುನ್ನೆಚ್ಚರಿಕೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಶ್ವಾದ್ಯಂತ ಸಾವಿರಾರು ಆಸ್ಪತ್ರೆಗಳು ಕ್ಲಿನಿಕಲ್‌ ಟ್ರಯಲ್‌ಗಾಗಿ ರೋಗಿಗಳನ್ನು ಆರೋಗ್ಯ  ಸಂಸ್ಥೆಯ ಕಾರ್ಯನಿರ್ವಾಹಕ ಗುಂಪಿನ  ಸಾಲಿಡಾರಿಟಿ ಟ್ರಯಲ್‌ನಲ್ಲಿ (ಒಗ್ಗಟ್ಟಿನ ಪ್ರಯೋಗ) ನೊಂದಾಯಿಸಿವೆ ಆದರೆ ಈ ಔಷಧ ಪ್ರಯೋಗದಿಂದ ಕೊರೊನಾ ವೈರಸ್‌ ಸಾಯುತ್ತಿಲ್ಲ ಬದಲಿಗೆ ರೋಗಿಗಳೆ ಮೃತಪಟ್ಟುವ ಆತಂಕವಿದೆ ಎಂದು ಹೇಳಿದ್ದಾರೆ.

ಹೀಗಾಗಿ ಈ ಕ್ಲಿನಿಕಲ್‌ ಪ್ರಯೋಗದಲ್ಲಿ ಮಲೇರಿಯಾ ನಿರೋಧಕ ಹೈಡ್ರಾಕ್ಸಿಕ್ಲೋರೋಕ್ವಿನ್‌ನ ಬಳಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇನ್ನುಳಿದ ಎಲ್ಲ ಪ್ರಯೋಗಗಳು ಎಂದಿನಂತೇ ನಡೆಯಲಿವೆ ಎಂದು ಹೇಳಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

‘ಮಲೇರಿಯಾ ರೋಗಿಗಳಿಗೆ ನೀಡುವ ಹೈಡ್ರೊಕ್ಲೋರೊಕ್ವಿನ್ ಮತ್ತು ಕ್ಲೋರೊಕ್ವಿನ್ ಮಾತ್ರೆಗಳ ಸೇವನೆಯಿಂದ ಕೋವಿಡ್–19  ರೋಗಿಗಳಿಗೆ ಯಾವುದೇ ಉಪಯೋಗವಿಲ್ಲ. ಬದಲಿಗೆ ಕೋವಿಡ್ ರೋಗಿಗಳು ಸಾವನ್ನಪ್ಪುವ ಅಪಾಯವನ್ನು ಈ ಮಾತ್ರೆಗಳು ಹೆಚ್ಚಿಸುತ್ತವೆ ಎಂದು ಖ್ಯಾತ ಆರೋಗ್ಯ ನಿಯತಕಾಲಿಕೆ ‘ದಿ ಲಾನ್ಸೆಟ್’ ನಲ್ಲಿ ವರದಿಯಾಗಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.

ಇನ್ನು ವಿಶ್ವಾದ್ಯಂತ ಲಕ್ಷಾಂತರ ಮಂದಿಯನ್ನು ಬಲಿಪಡೆದಿರುವ ಕೊರೊನಾ ವೈರಸ್‌ ಮಟ್ಟಹಾಕಲೇ ಬೇಕು ಎಂದು ಶ್ರಮಿಸುತ್ತಿರುವ ನೂರಾರು ಔಷಧ ತಯಾರಕ ಸಂಸ್ಥೆಗಳು ಈ ನಿಟ್ಟಿನಲ್ಲಿ ಸಂಶೋಧನೆ ನಡೆಸುತ್ತಿವೆ. ಹೀಗಾಗಿ ಕೊರೊನಾ ಸೋಂಕು ಇರುವ ವ್ಯಕ್ತಿಗಳನ್ನು ಪ್ರಯೋಗಕ್ಕೆ ಬಳಸಿಕೊಳ್ಳುತ್ತಿವೆ. ಇದರಿಂದ ಮುಂದೆ ಜೀವಹಾನಿ ಆಗಬಹುದು ಎಂಬ ದೃಷ್ಟಿಯಿಂದ  ವಿಶ್ವ ಆರೋಗ್ಯ ಸಂಸ್ಥೆ ಈ ಕಠಿಣ ಕ್ರಮ ಕೈಗೊಂಡಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

mgid.com, 613802, DIRECT, d4c29acad76ce94f
mgid.com, 613802, DIRECT, d4c29acad76ce94f

Leave a Reply

error: Content is protected !!