ಪೊಲೀಸ್ ಕಾನ್ಸ್ ಟೇಬಲ್ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ
ಹಾಸನ: 2020-21ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ ಟೇಬಲ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸ್ತುತ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಈ ಹಿಂದೆ ನಿಗದಿಪಡಿಸಲಾಗಿದ್ದ ಅರ್ಜಿ ಅಹ್ವಾನದ ದಿನಾಂಕಗಳನ್ನು ಮಾತ್ರ ವಿಸ್ತರಿಸಲಾಗಿರುತ್ತದೆ. ಅರ್ಹತಾ ಷರತ್ತುಗಳಲ್ಲಿ (ವಯೋಮಿತಿ ಸೇರಿದಂತೆ) ಯಾವುದೇ ಬದಲಾವಣೆಗಳಿಲ್ಲ.
ಸಿ.ಪಿ.ಸಿ (ಪುರುಷ ಮತ್ತು ಮಹಿಳಾ) (ಕಲ್ಯಾಣ ಕರ್ನಾಟಕ) 558 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಮರು ನಿಗದಿಪಡಿಸಿದ್ದು, ಜುಲೈ9 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೂ ಶುಲ್ಕ ಪಾವತಿಸಲು ಜುಲೈ.13 ಕೊನೆಯ ದಿನವಾಗಿರುತ್ತದೆ. ಎ.ಪಿ.ಸಿ (ಪುರುಷ) (ಸಿ.ಎ.ಆರ್/ಡಿ.ಎ.ಆರ್) (ಕಲ್ಯಾಣ ಕರ್ನಾಟಕ) 444 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ.9 ಮತ್ತು ಶುಲ್ಕ ಪಾವತಿಸಲು ಜುಲೈ.13 ಕೊನೆಯ ದಿನವಾಗಿದೆ.
ಸಿ.ಪಿ.ಸಿ (ಪುರುಷ ಮತ್ತು ಮಹಿಳಾ) 2007 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ.13 ಹಾಗೂ ಶುಲ್ಕ ಪಾವತಿಸಲು ಜುಲೈ.15 ಕೊನೆಯ ದಿನವಾಗಿದೆ.
ಎ.ಪಿ.ಸಿ (ಪುರುಷ) (ಸಿ.ಎ.ಆರ್/ಡಿ.ಎ.ಆರ್) 1005 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ.13 ಹಾಗೂ ಶುಲ್ಕ ಪಾವತಿಸಲು ಜುಲೈ.15 ಕೊನೆಯ ದಿನವಾಗಿದೆ.
ಸಿಆರ್.ಪಿ.ಸಿ(ಪುರುಷ ಮತ್ತು ಮಹಿಳಾ) (ಕೆ.ಎಸ್.ಆರ್.ಪಿ ಮತ್ತು ಐ.ಆರ್.ಬಿ) 2420 ಹುದ್ದೆಗಳು ಮತ್ತು ಸ್ಪೇ.ಆರ್.ಪಿ.ಸಿ (ಪುರುಷ) (ಬ್ಯಾಂಡ್ಸ್‍ಮನ್) (ಕೆ.ಎಸ್.ಆರ್.ಪಿ ಮತ್ತು ಐ.ಆರ್.ಬಿ) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ.6 ಹಾಗೂ ಶುಲ್ಕ ಪಾವತಿಸಲು ಜುಲೈ.8 ಕೊನೆಯ ದಿನಾಂಕವಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.