ನ್ಯೂಡೆಲ್ಲಿ: ಕಳೆದ ಏಳು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ರೀತಿಯ ಭಾಷಣ ಮಾಡಿ, ಅದೇ ಭರವಸೆ ಕೊಡುತ್ತಾ ಬಂದಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಅವರು ಹೊಸ ಯೋಜನೆಗಳನ್ನು ಘೋಷಿಸುತ್ತಾರೆ. ಆದರೆ, ಜಾರಿಗೆ ತರುವುದಿಲ್ಲ. ಈವರೆಗೂ ಸಣ್ಣ ರೈತರು, ನೊಂದ ವರ್ಗಗಳಿಗೆ ಏನೂ ಕೆಲಸ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿದ್ದಾಗ ರೈತರಿಗಾಗಿ ನೀರಾವರಿ ಯೋಜನೆ ಸೇರಿದಂತೆ ಹಲವರು ಕೆಲಸಗಳನ್ನು ಮಾಡಿದೆ. ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರು ಯುಪಿಎ ಆಡಳಿತಾವಧಿಯಲ್ಲಿ ರೈತರ ಸಾಲವನ್ನೂ ಮನ್ನಾ ಮಾಡಿದ್ದರು ಎಂದು ತಿಳಿಸಿದ್ದಾರೆ.
ಪ್ರಧಾನಿ ಅವರ 2019ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣಕ್ಕೆ ಸಂಬಂಧಿಸಿದ ಸುದ್ದಿಯೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ, ʻಮೂಲಸೌಕರ್ಯ ವಲಯದ ಅಭಿವೃದ್ಧಿಗಾಗಿ ಪ್ರಧಾನಿ ಅವರು ಎರಡು ವರ್ಷಗಳ ಹಿಂದೆಯೂ 100 ಲಕ್ಷ ಕೋಟಿ ರೂ. ಘೋಷಿಸಿದ್ದರು. ಈಗ ಕನಿಷ್ಠ 100 ಲಕ್ಷ ಕೋಟಿಯ ಸಂಖ್ಯೆಯನ್ನಾದರೂ ಬದಲಿಸಬೇಕಾಗಿತ್ತುʼ ಎಂದು ಕುಟುಕಿದ್ದಾರೆ.
सच कहा – जुमले छोड़ने में क्या जाता है !
पर..
अब तो जुमले भी पुराने छोड़ने पड़ रहे हैं । pic.twitter.com/P9aAWHrwox— Randeep Singh Surjewala (@rssurjewala) August 15, 2021