NEWSದೇಶ-ವಿದೇಶ

ರಾಜಸ್ಥಾನದ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ  ಯತ್ನ

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗಂಭೀರ ಆರೋಪ

ವಿಜಯಪಥ ಸಮಗ್ರ ಸುದ್ದಿ

ಜೈಪುರ:  ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ನಮ್ಮ ಶಾಸಕರಿಗೆ 25 ಕೋಟಿ ರೂ. ಆಮಿಷ ಒಡ್ಡುತ್ತಿದೆ ಎಂದು  ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.

ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನೆಲ್ಲ ಶಾಸಕರನ್ನು ಜೈಪುರದ ರೆಸಾರ್ಟ್ ಒಂದಕ್ಕೆ ಕರೆಸಿಕೊಂಡು ಸಭೆ ನಡೆಸಿದ ನಂತರ ಮಾತನಾಡಿದ ಸಿಎಂ ಬಿಜೆಪಿ ವಿರುದ್ಧ ವಾಗ್ದಾಳಿ ಮಧ್ಯಪ್ರದೇಶದಲ್ಲಿ ಮಾಡಿದ ರೀತಿಯಲ್ಲೇ ರಾಜಸ್ಥಾನದಲ್ಲೂ ಮಾಡಲು ಬಿಜೆಪಿ ಹೊರಟಿದೆ ಎಂದು ಕಿಡಿಕಾರಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಕಾಂಗ್ರೆಸ್ ಶಾಸಕರಿಗೆ 25 ಕೋಟಿ ರು.ಗಳ ಆಮಿಷ ಒಡ್ಡಲಾಗುತ್ತಿದೆ 10 ಕೋಟಿ ರೂ ಗಳನ್ನು  ಮುಂಗಡವಾಗಿ ನೀಡುವುದಾಗಿ ನಂಬಿಸುತ್ತಿದೆ. ಅಷ್ಟೇ ಅಲ್ಲದೇ  ಜೈಪುರಕ್ಕೆ ದೊಡ್ಡ ಮಟ್ಟದ ಹಣ ರವಾನೆಯಾಗಿದೆ ಎಂದು  ಗೆಹ್ಲೋಟ್ ಆರೋಪಿಸಿದ್ದಾರೆ

ನಮ್ಮ ಕಾಂಗ್ರೆಸ್ ಶಾಸಕರು ಒಟ್ಟಾಗಿದ್ದು, ಬಿಜೆಪಿಯ ಈ ಪ್ರಯತ್ನ ಫಲಿಸುವುದಿಲ್ಲ ಎಂದು ಹೇಳಿದ ಸಿಎಂ ಈ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಾಯಕರ ಪಾಡು ಈಗ ಏನಾಗಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹಾಗಾಗಿ ಅಂತ ಪ್ರಯತ್ನಕ್ಕೆ ನಮ್ಮ ಶಾಸಕರು ಕೈ ಹಾಕುವುದಿಲ್ಲ. ಜತೆಗೆ ನಾವೆಲ್ಲ ಇಗ್ಗಟ್ಟಿನಿಂದ ಇದ್ದೇವೆ ಎಂದು ಪುನರ್‌ ಉಚ್ಚರಿಸಿದರು.

ರಾಜ್ಯಸಭೆಯನ್ನು ಗೆಲ್ಲುವ ಸಲುವಾಗಿ ಬಿಜೆಪಿ  ಶಾಸಕರನ್ನು ಖರೀದಿಸಲು ಮುಂದಾಗಿತ್ತು. ಆದರೆ ಶಾಸಕರು ಖರೀದಿಗೆ ಸಿಗದೇ ಹೋದಾಗ ಅದು ಚುನಾವಣೆಯನ್ನೇ ಮುಂದೂಡಿತ್ತು ಎಂದು ಇದೇ ವೇಳೆ ಪ್ರಧಾನಿ ಮೋದಿ  ಅವರ ವಿರುದ್ದವು ಗೆಹ್ಲೋಟ್ ಕಿಡಿಕಾರಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

Leave a Reply