NEWSಕೃಷಿನಮ್ಮರಾಜ್ಯ

ನರೇಗಾದಡಿ ರೈತರು ತಮ್ಮ ಭೂಮಿಯಲ್ಲಿಯೇ ದುಡಿಮೆ ಮಾಡಿ ಹಣಗಳಿಸಬಹುದು

ಈ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ಕೊಡಿ l ಅಧಿಕಾರಿಗಳಿಗೆ  ಸಚಿವ ಈಶ್ವರಪ್ಪ ಸೂಚನೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು:  ಮತ್ತೊಂದು ಮಳೆ ಬೀಳುವ ಮುನ್ನ ಕೆರೆ ಹೂಳೆತ್ತುವ ಕೆಲಸ ಮುಗಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ  ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಅಂತರ್ಜಲ ಉಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ನರೇಗಾ ಕಾಮಗಾರಿಗಳನ್ನು ತತ್ವರಿತವಾಗಿ ಪೂರ್ಣಗೊಳಿಸಿ, ಪ್ರಧಾನಿ ನರೇಂದ್ರಮೋದಿ ಆಶಯ ಸಫಲಗೊಳಿಸಿ ಎಂದು ತಿಳಿಸಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ
https://play.google.com/store/apps/detail

ಸರ್ಕಾರ ಅಂತರ್ಜಲ ಹೆಚ್ಚಿಸಲು ಪೂರಕವಾಗಿ ಅಂತರ್ಜಲ ಚೇತನ ವಿಶೇಷ ಯೋಜನೆ ರೂಪಿಸಿದೆ. ರಾಜ್ಯದಲ್ಲಿ 9.70 ಲಕ್ಷಕ್ಕೂ ಹೆಚ್ಚು ಕೂಲಿ ಕಾರ್ಮಿಕರಿದ್ದು, ಅವರಿಗೆ ಉದ್ಯೋಗ ದೊರಕಿಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬಳಸಿಕೊಳ್ಳಲಾಗುತ್ತಿದೆ. ಅಂತರ್ಜಲ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ ಎಂದರು.

ಮೈಸೂರು ತಾಲೂಕಿನಲ್ಲಿ 136 ಕೆರೆಗಳಿವೆ. ಈ ಪೈಕಿ 49 ಕೆರೆಗಳ ಕಾಮಗಾರಿಯನ್ನು ತೆಗೆದುಕೊಳ್ಳಲಾಗಿದೆ. ಅವುಗಳಲ್ಲಿ 17 ಕೆರೆಗಳ ಹೂಳೆತ್ತುವ ಕೆಲಸ ನಡೆಯುತ್ತಿದೆ. ಕೆ.ಆರ್.ನಗರದ 73ರಲ್ಲಿ 29 ಕೆರೆ, ನಂಜನಗೂಡಿನಲ್ಲಿ 54ರಲ್ಲಿ 28 ಕೆರೆ, ಎಚ್.ಡಿ.ಕೋಟೆಯಲ್ಲಿ 41ರಲ್ಲಿ 15 ಕೆರೆ, ತಿ.ನರಸೀಪುರದಲ್ಲಿ 79 ಕೆರೆ, ಪಿರಿಯಾಪಟ್ಣಣದಲ್ಲಿ 42 ರಲ್ಲಿ 24 ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಂಡಿರುವುದಾಗಿ ಆಯಾ ತಾಲ್ಲೂಕುಗಳ ಇಓಗಳು ಮಾಹಿತಿ ನೀಡಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ
https://play.google.com/store/apps/detail

ಯಾವ್ಯಾವ ಬೆಳೆಗೆ ಮನ್ರೇಗಾ ಅನುದಾನ ನೀಡಬಹುದೆಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಡಿ. ಮನ್ರೇಗಾದಡಿಯಲ್ಲಿ ರೈತರು ಅವರ ಭೂಮಿಯಲ್ಲಿಯೇ ದುಡಿಮೆ ಮಾಡಿ ಹಣಗಳಿಸಬಹುದೆಂಬುದನ್ನು ತಿಳಿಸಿಕೊಟ್ಟು ಕೂಲಿ ಮಾಡಿಸುವ ಕೆಲಸ ಮಾಡಿ ಎಂದು ಈಶ್ವರಪ್ಪ ಹೇಳಿದರು.

ರೈತರ ಜಮೀನಿನಲ್ಲ್ಲಿ ಬದು ನಿರ್ಮಾಣಕ್ಕೂ ಮನ್ರೇಗಾ ಯೋಜನೆಯಡಿ ಅವಕಾಶ ಇದೆ. ಮೇ.19ರಿಂದ ಜೂ.19ರವರೆಗೆ ಬದು ನಿರ್ಮಾಣ ಮಾಸಾಚರಣೆ ನಡೆಸಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಹಣ ಕೊರತೆಯಿಲ್ಲ. ಮತ್ತೊಂದು ಮಳೆಗೂ ಮುನ್ನ ಎಲ್ಲಾ ಕೆಲಸಗಳನ್ನು ತ್ವರಿತವಾಗಿ ಮುಗಿಸಬೇಕು. ಸಾಮಾಜಿಕ ಅರಣ್ಯ ಇಲಾಖೆಯಿಂದ ಕೆರೆಗಳ ಸುತ್ತಲೂ ಗಿಡ ನೆಡುವ ಸಂಬಂಧ ಎರಡು ವರ್ಷದ ಗಿಡಗಳನ್ನು ನೆಡಬೇಕು ಎಂದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ
https://play.google.com/store/apps/detail

ದೊಡ್ಡ ಕವಲಂದೆ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆ ಕಳೆದ ಐದು ವರ್ಷದಿಂದ ನಿಷ್ಕ್ರಿಯವಾಗಿದ್ದು, ಈ ಯೋಜನೆ ಸರಿಪಡಿಸಿ ನೀರು ಸರಬರಾಜು ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಈ ಪ್ರಕ್ರಿಯೆ ಐದು ವರ್ಷಗಳಿಂದ ನಿಂತಿರುವುದಕ್ಕೆ ಸಚಿವರು ಬೇಸರಿಸಿದರು. ಅಧಿಕಾರಿಗಳು ಅರ್ಹ ಟೆಂಡರ್‍ದಾರರ ಅರ್ಜಿಯನ್ನು ಪರಿಗಣಿಸದೇ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಬಗ್ಗೆ ಶಾಸಕ ಹರ್ಷವರ್ಧನ್ ಪ್ರಶ್ನಿಸಿದರು. ಶೀಘ್ರ ಇವೆಲ್ಲವನ್ನೂ ಟೆಂಡರ್ ಕರೆಯುವ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ
https://play.google.com/store/apps/detail

ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಹರ್ಷವರ್ಧನ್, ಎನ್.ಅಶ್ವಿನ್‍ಕುಮಾರ್, ಕೆ.ಮಹದೇವ್, ನಿರಂಜನ್‍ಕುಮಾರ್, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ಸಂಸದ ಪ್ರತಾಪಸಿಂಹ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಸಿ.ಪರಿಮಳಾ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಜಿ.ಪಂ. ಸಿಇಓ ಪ್ರಶಾಂತ್‍ಕುಮಾರ್ ಮಿಶ್ರ, ಗ್ರಾಮೀಣ ಕುಡಿಯುವ ನೀರು ಇಲಾಖೆ ಆಯುಕ್ತ ಡಾ.ವಿಶಾಲ್, ಮನ್ರೇಗಾ ಆಯುಕ್ತ ಅನಿರುದ್ಧ್ ಶ್ರವಣ್ ಮತ್ತಿತರರು  ಉಪಸ್ಥಿತರಿದ್ದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ
https://play.google.com/store/apps/detail

mgid.com, 613802, DIRECT, d4c29acad76ce94f
mgid.com, 613802, DIRECT, d4c29acad76ce94f

Leave a Reply

error: Content is protected !!