NEWSದೇಶ-ವಿದೇಶ

54 ದಿನದ ನಂತರವೂ ದೇಶದಲ್ಲಿ ಮತ್ತೆ 14ದಿನ ಲಾಕ್‌ಡೌನ್‌ ಮುಂದುವರಿಕೆ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ದೇಶದಲ್ಲಿ 54 ದಿನಗಳಿಂದ ಜಾರಿಯಲ್ಲಿದ್ದ ಲಾಕ್‌ಡೌನ್‌ಅನ್ನು ಕೇಂದ್ರ ಸರ್ಕಾರ ಇನ್ನೂ 2 ವಾರಗಳ ಕಾಲ ಅಂದರೆ ಮೇ18 ರಿಂದ 31ರವರೆಗೆ ವಿಸ್ತರಿಸಿದೆ. ಇದರಂತೆ ಸೋಮವಾರದಿಂದ ಲಾಕ್‌ಡೌನ್ 4.0 ಜಾರಿಯಾಗಿ ಬಂದಿದೆ.ಆದರೆ ರಾಜ್ಯದಲ್ಲಿ ನಾಳೆಯಿಂದ ಜಾರಿಗೆ ಬರಲಿದೆ. 

ಲಾಕ್‌ಡೌನ್ 4.0 ಸಂಬಂಧ ಕೇಂದ್ರ ಗೃಹ ಸಚಿವಾಲಯ ವಿಸ್ತೃತ ಮಾರ್ಗಸೂಚಿಗಳನ್ನು ಹೊರಡಿಸಿದ್ದು, 54 ದಿನಗಳಿಂದ ಇದ್ದ ಹಲವು ನಿರ್ಬಂಧಗಳನ್ನು ಸಡಿಗೊಳಿಸಿದೆ. 

ಪ್ರೇಕ್ಷಕರಿಲ್ಲದೆ ಕ್ರೀಡಾಂಗಣ ತೆರೆಯಲು ಹಾಗೂ ಕೆಂಪು ವಲಯದಲ್ಲೂ ಫ್ಲಿಪ್ ಕಾರ್ಜ್, ಅಮೆಜಾನ್ ನಂತರ ಇ ಕಾಮರ್ಸ್ ಕಂಪನಿಗಳು ವ್ಯವಹರಿಸಲು, ಬಸ್, ಓಲಾ, ಉಬರ್ ನಂತಹ ಕ್ಯಾಬ್, ಟ್ಯಾಕ್ಸಿ, ಆಟೋ ಸಂಚಾರ, ಸಲೂನ್‌, ಕ್ಲಿನಿಕ್ ಆಸ್ಪತ್ರೆಗಳಲ್ಲಿ ಒಪಿಡಿಗೆ ಅನುಮತಿ ನೀಡಿದೆ. ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail 

ಈಗಾಗಲೇ ಚಲಿಸುತ್ತಿರುವ ಶ್ರಮಿಕ ಸ್ಫೆಷಲ್, ರಾಜಧಾನಿ ಎಕ್ಸ್’ಪ್ರೆಸ್, ಸರಕು ಸಾಗಣೆ ರೈಲು ಹಾಗೂ ಕರೆತರಲು ಕಾರ್ಯಾಚರಿಸುತ್ತಿರುವ ವಿಮಾನ, ಸರಕು ಸಾಗಣೆ ವಿಮಾನ ಹಾಗೂ ಏರ್ ಆಂಬುಲೆನ್ಸ್ ಗಳಿಗೆ ನಿರ್ಬಂಧ ಇಲ್ಲ. ಆದರೆ, ರೈಲು ಹಾಗೂ ವಿಮಾನಗಳ ಸೇವೆಗಳ ಮೇಲಿನ ನಿರ್ಬಂಧವನ್ನು ಎಂದಿನಂತೆ ಮುಂದುವರಿಸಿದೆ. 

ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ ಉಳಿದ ಕಾರಣಗಳಿಗೆ ಜನರು ಕಂಟೈನ್ಮೆಂಟ್ ವಲಯಗಳಿಂದ ಹೊರಗೆ ಸಂಚರಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಅಂದರೆ ಕೆಂಪು ವಲಯದಲ್ಲಿನ ಕಂಟೈನ್ಮೆಟ್ ಪ್ರದೇಶಗಳಲ್ಲಿ ಲಾಕ್‌ಡೌನ್ ನಿರ್ಬಂಧಗಳು ಹಿಂದಿನಂತೆಯೇ ಮುಂದುವರಿಯಲಿದ್ದು, ಜನರ ಅಗತ್ಯ ಚಟುವಟಿಕೆಗಳಿಗಷ್ಟೇ ಅವಕಾಶ ಕಲ್ಪಿಸಲಾಗಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

65 ವರ್ಷ ಮೇಲ್ಪಟ್ಟವರು, ರೋಗ ಲಕ್ಷಣ ಇರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷದ ಒಳಗಿನ ಮಕ್ಕಳು ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ವೇಳೆ ಮನೆಯಿಂದ ಹೊರಬಂದು ಓಡಾಡುವುದಕ್ಕೆ ಅವಕಾಶ ಇಲ್ಲ ಎಂದು ಮಾರ್ಗಸೂಚಿಯಲ್ಲಿಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ. 

ಇನ್ನು ರಾತ್ರಿ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಜನರ ಅನಗತ್ಯ ಓಡಾಟವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿದೆ.

ರಾಜ್ಯದಲ್ಲಿ ಇಂದು ಕೂಡ 3.0 ಲಾಕ್‌ಡೌನ್‌ ನಿಯಮಗಳೆ ಮುಂದುವರಿಯಲಿದ್ದು, ಸಿಎಂ ಸಭೆಯಲ್ಲಿ ಇಂದು ತೆಗೆದುಕೊಳ್ಳುವ ನಿರ್ಧಾರದ ನಂತರ ಏನು ಇರಲಿದೆ ಎಂಬುವುದು ತಿಳಿಯಲಿದೆ. 

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

Leave a Reply