CrimeNEWSನಮ್ಮಜಿಲ್ಲೆ

ಕಟಾವಿಗೆ ಬಂದ ಬಾಳೆಗಿಡ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿ

ವಿಜಯಪಥ ಸಮಗ್ರ ಸುದ್ದಿ

ರಾಮನಗರ: ಬಾಳೆ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು 300ಕ್ಕೂ ಅಧಿಕ ಬಾಳೆ ಗಿಡಗಳನ್ನು ಕತ್ತರಿಸಿ ನಾಶ ಮಾಡಿ ವಿಕೃತಿ ಮೆರೆದಿದೆ.

ರಾಮನಗರದ ಕೂಟಗಲ್ ಹೋಬಳಿಯ ತಿಮ್ಮಸಂದ್ರ ಗ್ರಾಮದ ಪಟೇಲ್ ರಾಜಣ್ಣ ಎಂಬುವರ ತೋಟಕ್ಕೆ ತಡರಾತ್ರಿ  ನುಗ್ಗಿದ ಕಿಡಿಗೇಡಿಗಳು  ಕಟಾವಿಗೆ ಬಂದಿದ್ದ ಬಾಳೆಗಿಡಗಳನ್ನ ನಾಶ ಮಾಡಿ ಪರಾರಿಯಾಗಿದ್ದಾರೆ.

ಪಟೇಲ್ ರಾಜಣ್ಣ  ತಮ್ಮ ಆರು ಎಕರೆ ಅಡಿಕೆ‌ ತೋಟದಲ್ಲಿ ಬಾಳೆ ಗಿಡಗಳನ್ನು ಬೆಳೆಸಿದ್ದರು, ಗಿಡಗಳಲ್ಲಿ ಬಾಳೆ‌ ಗೊನೆಗಳು ಕಟಾವು ಮಾಡುವ ಹಂತಕ್ಕೆ‌ ಬಂದಿದ್ದವು. ಆದರೆ ಇದನ್ನು  ಸಹಿಸಿಕೊಳ್ಳಲಾಗದ ಕಿಡಿಗೇಡಿಗಳು ಗಿಡಗಳನ್ನು ನಾಶ ಮಾಡಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ತೋಟದ ಒಂದು ಭಾಗದಲ್ಲಿ 300ಕ್ಕೂ ಅಧಿಕ‌ ಗಿಡಗಳನ್ನು ನಾಶ ಪಡಿಸಿ ಪರಾರಿಯಾಗಿದ್ದು,  ಬೆಳಗ್ಗೆ ತೋಟಕ್ಕೆ‌ ಬಂದವೇಳೆ ದುಷ್ಕರ್ಮಿಗಳ ಕೃತ್ಯ ಗೊತ್ತಾಯಿತು ಎಂದು ಬೆಳೆ ಕಳೆದುಕೊಂಡ ರೈತ  ರಾಜಣ್ಣ ಅಳಲು ತೋಡಿಕೊಂಡಿದ್ದಾರೆ.

ಈ ಸಬಂಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೂರ್ವಪರ ದ್ವೇಷದಿಂದ ಈ ರೀತಿ ಮಾಡಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

mgid.com, 613802, DIRECT, d4c29acad76ce94f
mgid.com, 613802, DIRECT, d4c29acad76ce94f

1 Comment

Leave a Reply

error: Content is protected !!