NEWSನಮ್ಮಜಿಲ್ಲೆ

ಕೊರೊನಾ ತಡೆಗೆ 284 ಕೋಟಿ ರೂ. ಬಿಡುಗಡೆ

ರಾಮನಗರದಲ್ಲಿ ಕಂದಾಯ ಸಚಿವ  ಆರ್. ಅಶೋಕ್‌ ಹೇಳಿಕೆ

ವಿಜಯಪಥ ಸಮಗ್ರ ಸುದ್ದಿ

ರಾಮನಗರ: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಎಸ್ ಡಿ ಆರ್ ಎಫ್ ಅನುದಾನದಿಂದ 284 ಕೋಟಿ ರೂ. ಅನುದಾನವನ್ನು ನೀಡಲಾಗಿದೆ ಎಂದು ಕಂದಾಯ ಸಚಿವ  ಆರ್. ಅಶೋಕ ತಿಳಿಸಿದರು

ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆ ನಂತರ  ಸುದ್ದಿಗಾರರೊಂದಿಗೆ ಮಾತನಾಡಿದರು. ಎಸ್.ಡಿ.ಆರ್.ಎಫ್ ಪೊಲೀಸ್ ಇಲಾಖೆಗೆ 10 ಕೋಟಿ ರೂ. ಆರೋಗ್ಯ ಇಲಾಖೆಗೆ 70 ಕೋಟಿ ರೂ. ಜಿಲ್ಲಾಧಿಕಾರಿಗಳ ಕಚೇರಿಗಳಿಗೆ 152 ಕೋಟಿ ರೂ. ಕಾರಾಗೃಹ ಇಲಾಖೆಗೆ 2 ಕೋಟಿ ರೂ. ಹಾಗೂ ಬಿಬಿಎಂಪಿ ಗೆ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ರಾಮನಗರ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರಿಗೆ ತಾತ್ಕಾಲಿಕವಾದ ಶೆಡ್ ನಿರ್ಮಾಣಕ್ಕಾಗಿ 30 ಲಕ್ಷ ರೂ. ಕ್ವಾರಂಟೈನ್‌  ಪರೀಕ್ಷೆಗಾಗಿ 50 ಲಕ್ಷ ರೂ. ಹಾಗೂ ಕೋವಿಡ್ ಟೆಸ್ಟ್ ಲ್ಯಾಬ್‌ಗಾಗಿ 2.62 ಕೋಟಿ ರೂ. ಅನುದಾನ ನೀಡಲಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ಟೆಸ್ಟ್ ಲ್ಯಾಬ್ ಪ್ರಾರಂಭವಾಗಿಲಿದೆ. ಇದಲ್ಲದೇ ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ 13.50 ಕೋಟಿ ರೂ. ಇದ್ದು, ಅನುದಾನದ ಕೊರತೆ ಇಲ್ಲ ಎಂದು ತಿಳಿಸಿದರು.

2019-20ನೇ ಸಾಲಿನಲ್ಲಿ 49 ತಾಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಪರಿಗಣಿಸಲಾಗಿದ್ದು, ಇನ್ನೂ 1 ತಿಂಗಳು ವಿಸ್ತರಿಸಿ, 112 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪ್ರವಾಹ ಪರಿಹಾರಕ್ಕಾಗಿ 6108 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಬೆಳೆಹಾನಿಗಾಗಿ 6,45,100 ರೈತರಿಗೆ ಒಟ್ಟು 1185.41 ಕೋಟಿ ರೂ. ಪರಿಹಾರ ವಿತರಣೆ ಮಾಡಲಾಗಿದೆ ಎಂದರು.

ರಾಮನಗರ ಜಿಲ್ಲೆಯ ಕಂದಾಯ ಇಲಾಖೆಯಿಂದ ಮಾಗಡಿ ತಾಲೂಕಿನ ಡಾ. ಅಂಬೇಡ್ಕರ್ ವಸತಿ ನಿಲಯ, ಕಸ ವಿಲೇವಾರಿ ಘಟಕ, ಕೃಷಿ ಸಹಕಾರ ಪರಿಷತ್ತಿಗೆ ಸೇರಿದಂತೆ ಒಟ್ಟು 21 ಎಕರೆ ಭೂಮಿ ನೀಡಲಾಗಿದೆ ಎಂದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

mgid.com, 613802, DIRECT, d4c29acad76ce94f
mgid.com, 613802, DIRECT, d4c29acad76ce94f

Leave a Reply

error: Content is protected !!