NEWSದೇಶ-ವಿದೇಶವಿಜ್ಞಾನ

ಮತ್ತೆ ಕದನವಿರಾಮ ಉಲ್ಲಂಘಿಸಿದ ಪಾಕಿನಿಂದ ಅಪ್ರಚೋದಿತ ಗುಂಡಿನ ದಾಳಿ

ವಿಜಯಪಥ ಸಮಗ್ರ ಸುದ್ದಿ

ಶ್ರೀನಗರ: ಪಾಕಿಸ್ತಾನ ಪಡೆಗಳು ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಮತ್ತೊಮ್ಮೆ ಕದನ ವಿರಾಮ  ಉಲ್ಲಂಘಿಸಿದ್ದು ಶನಿವಾರ ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಪಾಕಿಸ್ತಾನಿ ಪಡೆಗಳು ಇಂದು ಬೆಳಗ್ಗೆ 9.20 ರ ಸುಮಾರಿಗೆ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಪ್ರದೇಶ ಕಮಲ್ ಕೋಟ್‌ ಸೆಕ್ಟರ್ ಮೇಲೆ ಅಪ್ರಚೋದಿ ಗುಂಡಿನ ದಾಳಿ ನಡೆಸಿದ್ದು ಈಗಲೂ ಅದು ಮುಂದುವರಿದಿದೆ. ಆದಕ್ಕೆ ಉತ್ತರವಾಗಿ ಭಾರತೀಯ ಸೇನೆಯೂ ಪ್ರತಿದಾಳಿ ನಡೆಸುವ ಮೂಲಕ ಸೂಕ್ತ ಪ್ರತಿಕ್ರಿಯೆ ನೀಡುತ್ತಿದೆ ಎಂದು ತಿಳಿಸಿದ್ದಾರೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಶುಕ್ರವಾರವೂ ಕೂಡಾ ಪಾಕ್ ಪಡೆಗಳು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಶೆಲ್ ದಾಳಿಗೆ ರಾಂಪುರ ಸೆಕ್ಟರ್‌ನಲ್ಲಿ 48 ವರ್ಷದ ಅಖ್ತರ್ ಬೇಗಂ ಎಂಬುವರು ಅವರ ಮನೆಯಲ್ಲಿ ಮೃತಪಟ್ಟಿದ್ದರು. ಇನ್ನು 23 ವರ್ಷದ ಯುವತಿ ಈ ದಾಳಿಯಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಾಕ್ ಪಡೆಗಳ ಈ ಅಪ್ರಚೋದಿತ ಗುಂಡಿನ ದಾಳಿಯಿಂದ ನಾಲ್ಕು ಮನೆಗಳು ಮತ್ತು ಒಂದು ಮಸೀದಿಗೆ ಹಾನಿ ಉಂಟಾಗಿದ್ದು, ಅಲ್ಲಿನ ಹಲವು ಕುಟುಂಬಗಳನ್ನು ಜೀವ ರಕ್ಷಣೆ ಮಾಡುವ ಹಿನ್ನೆಲೆಯಲ್ಲಿ  ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

mgid.com, 613802, DIRECT, d4c29acad76ce94f
mgid.com, 613802, DIRECT, d4c29acad76ce94f

Leave a Reply

error: Content is protected !!