ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಶನಿವಾರ ರಾತ್ರಿ ರಸ್ತೆ ಅಪಘಾಕ್ಕೀಡಾಗಿದ್ದರಿಂದ ಮೆದುಳು ನಿಷ್ಕ್ರಿಯಗೊಂಡು ನಿಧನರಾಗಿರುವ ಸ್ಯಾಂಡಲ್ ವುಡ್ ನಟ ಸಂಚಾರಿ ವಿಜಯ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಹಲವರ ಜೀವನಕ್ಕೆ ಬೆಳಕಾಗಿದ್ದಾರೆ.
ಸೋಮವಾರ ರಾತ್ರಿ 9.30 ಗಂಟೆಯಿಂದ ಮಧ್ಯರಾತ್ರಿ 12 ಗಂಟೆ ಸುಮಾರಿನವರೆಗೆ ವೈದ್ಯರೂ ಸಂಚಾರಿ ವಿಜಯ್ ಅವರ ಅಂಗಾಂಗಗಳನ್ನು ಬೇರ್ಪಡಿಸಿದರು. ಬಳಿಕ ಅಂಗಾಂಗ ಕಸಿಗಾಗಿ ಜೀವನ್ಮರಣ ನಡುವೆ ಹೋರಾಟ ಮಾಡುತ್ತಿರುವ ಅದೇ ರಕ್ತದ ಗುಂಪಿನ ವ್ಯಕ್ತಿಗಳಿಗೆ ಕಸಿ ಮಾಡಲು ಕಳುಹಿಸಿದ್ದಾರೆ.
ಯಕೃತ್ 1, ಕಿಡ್ನಿ 2, ಎರಡು ಕಣ್ಣು, ಶ್ವಾಸಕೋಶ ಹಾಗೂ ಹೃದಯ ಕವಾಟುಗಳನ್ನು ಬೇರೆಯವರಿಗೆ ಕಸಿ ಮಾಡಲಾಗಿದೆ.
ಈ ಬಗ್ಗೆ ಜೀವನ ಸಾರ್ಥಕತೆ ಸಂಸ್ಥೆಯ ಡಾ.ನೌಷಾದ್ ಪಾಷಾ ಪ್ರತಿಕ್ರಿಯೆ ನೀಡಿದ್ದು, ಸಂಚಾರಿ ವಿಜಯ್ ಅವರ ಕುಟುಂಬ ಸದಸ್ಯರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದರು. ಹೀಗಾಗಿ ಫಾರಂ10 ಹಾಗೂ ಫಾರಂ 8ರಲ್ಲಿ ಸಹಿ ಪಡೆದು ಕಾನೂನಾತ್ಮಕವಾಗಿ ಅಂಗಾಂಗ ಬೇರ್ಪಡಿಸಿ ಸಂಸ್ಥೆಯಲ್ಲಿ ನೋಂದಾವಣಿ ಮಾಡಿ ಕಾಯುತ್ತಿದ್ದವರಿಗಾಗಿ ಕಳುಹಿಸಲಾಗಿದೆ. ಮಂಗಳವಾರ ಬೆಳಗ್ಗೆ ಆಸ್ಪತ್ರೆ ಪ್ರಕ್ರಿಯೆ ಮುಗಿದ ಬಳಿಕ ಅಪಘಾತ ನಡೆದ ಠಾಣೆಯಲ್ಲಿ ಮಾಹಿತಿ ನೀಡಿ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದರು.