ಬೆಂಗಳೂರು: ನಗರದಲ್ಲಿರುವ ಶಿಥಿಲಗೊಂಡಿರುವ ಮರಗಳನ್ನು ತೆರವುಗೊಳಿಸದಿದ್ದಲ್ಲಿ ಮುಂದಿನ ದಿನಗಳು ಬೆಂಗಳೂರಿನಲ್ಲಿ ಹೆಚ್ಚಿನ ಸಾವು ನೋವುಗಳಾಗುವ ಸಾಧ್ಯತೆ ಇದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದ೦ ಆತಂಕ ವ್ಯಕ್ತಪಡಿಸಿದ್ದಾರೆ.
ಮೂರು ದಿವಸಗಳಿಂದ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ಮಲ್ಲೇಶ್ವರ, ಶೇಷಾದ್ರಿಪುರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ನೂರಾರು ವರ್ಷಗಳ ಹಳೆಯ ಮರಗಳು ಮರಗಳು ಬಿದ್ದು ಕಷ್ಟ – ನಷ್ಟಗಳು ಉಂಟಾಗಿದೆ.ಬೇಗೂರಿನಲ್ಲಿ ಮರ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಹಾಗಾಗಿ ಕೂಡಲೇ ಬಿಬಿಎಂಪಿ ಆಡಳಿತ ವರ್ಗ ಕೂಡಲೇ ಸಮರೋಪಾದಿಯಲ್ಲಿ ಆಯಾ ವಲಯಗಳಲ್ಲಿ ತಂಡಗಳನ್ನು ಮಾಡಿಕೊಂಡು ಶಿಥಿಲಗೊಂಡಿರುವ ಮರಗಳನ್ನು ಗುರುತಿಸಿ ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಇಲ್ಲದಿದ್ದ ಪಕ್ಷದಲ್ಲಿ ಯಾವುದೇ ಹಾನಿಗಳಿಗೆ ಕಮಿಷನರ್ ಹಾಗೂ ಮೇಯರ್ ಅವರೇ ನೇರವಾಗಿ ಹೊಣೆಗಾರರಾಗುಗುವ ಮೂಲಕ ನಿರ್ಲಕ್ಷ್ಯ, ಬೇಜವಾಬ್ದಾರಿ, ಅಧಿಕಾರ ದುರ್ಬಳಕೆ ಇನ್ನೂ ಮುಂತಾದ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಬೇಕಾದ ಸಂದರ್ಭವೂ ಬರುತ್ತದೆಂದು ಎಂದು ಎಚ್ಚರಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail