Vijayapatha - ವಿಜಯಪಥ > NEWS > Crime > ಬನ್ನೂರು: ಚರಂಡಿಗೆ ಬಿದ್ದು ಪೌರಕಾರ್ಮಿಕ ಸಾವು
ಬನ್ನೂರು: ಚರಂಡಿಗೆ ಬಿದ್ದು ಪೌರಕಾರ್ಮಿಕ ಸಾವು
ಹನುಮನಾಳು ಗ್ರಾಪಂ ಪಿಡಿಒ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲು
Editordev08/06/2020
ಮೈಸೂರು: ಬನ್ನೂರು ಹೋಬಳಿಯ ಹನುಮನಾಳು ಗ್ರಾಮ ಪಂಚಾಯಿತಿ ಪೌರಕಾರ್ಮಿಕನೊಬ್ಬ ಚರಂಡಿ ಸ್ವಚ್ಛಗೊಳಿಸುವ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಮುರುಗಾನ್ (40) ಮೃತ ಪೌರಕಾರ್ಮಿಕ, ಈತ ಶನಿವಾರ ಗ್ರಾಪಂ ವ್ಯಾಪ್ತಿಯ ಮಾರಗೌಡನಹಳ್ಳಿಯಲ್ಲಿ ಚರಂಡಿ ಸ್ವಚ್ಛಗೊಳಿಸುತ್ತಿದ್ದವೇಳೆ ಚರಂಡಿಗೇ ಬಿದ್ದು ಮೃತಪಟ್ಟಿದ್ದಾನೆ.
ವಿಷಯ ತಿಳಿದ ಬನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತನ ಪತ್ನಿ ಪ್ರಿಯಾ ದೂರು ನೀಡಿದ್ದು, ಗ್ರಾಪಂ ಪಿಡಿಒ ವಿರುದ್ಧ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಪ್ರಕರಣ ದಾಖಲಾಗಿದೆ ಎಂದು ಸಬ್‌ಇನ್ಸ್‌ಪೆಕ್ಟರ್ ಪುನೀತ್ ತಿಳಿಸಿದ್ದಾರೆ.
ಬನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
Related posts
Editordev
Leave a reply