NEWSನಮ್ಮರಾಜ್ಯರಾಜಕೀಯ

MLC ಚುನಾವಣೆ: ಜೆಡಿಎಸ್‌ನಿಂದ ಇಂಚರ ಗೋವಿಂದರಾಜು ನಾಮಪತ್ರ ಸಲ್ಲಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಇದೇ ಜೂನ್‌ 29ರಂದು ನಡೆಯಲಿರುವ  ವಿಧಾನ ಪರಿಷತ್  ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಇಂದು ಇಂಚರ ಗೋವಿಂದರಾಜು  ಇಂದು ನಾಮಪತ್ರ ಸಲ್ಲಿಸಿದರು.

ವಿಧಾನ ಸಭಾ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ಅವರಿಗೆ ವಿಧಾನಸೌಧದಲ್ಲಿ   ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಶಾಸಕರಾದ ಶ್ರೀನಿವಾಸ್ ಗೌಡ , ಬಸವರಾಜ್ ಹೊರಟ್ಟಿಯವರು ಹಾಜರಿದ್ದರು.

ನಾಮ ಪತ್ರ ಸಲ್ಲಿಸುವ ಮುನ್ನ ಗೋವಿಂದರಾಜು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ,  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಂದ  ಆಶೀರ್ವಾದ ಪಡೆದ ಬಳಿಕ ಪಕ್ಷದ ಬಿಫಾರಂ ಪಡೆದುಕೊಂಡಿದ್ದರು.

ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪರಿಷತ್ ಅಭ್ಯರ್ಥಿ ಆಯ್ಕೆ ಅಧಿಕಾರವನ್ನು ಗೌಡರಿಗೆ ನೀಡಲಾಗಿತ್ತು. ಪಕ್ಷದ ಶಾಸಕರು ಹಾಗೂ ಮುಖಂಡರೊಂದಿಗೆ ಸಮಾಲೋಚಿಸಿದ ಗೌಡರು ಕೋಲಾರ ಭಾಗದಲ್ಲಿ ಪಕ್ಷದ ಸಂಘಟನೆ ದೃಷ್ಟಿಯಲ್ಲಿ ಗೋವಿಂದರಾಜು ಅವರಿಗೆ ಟಿಕೆಟ್ ನೀಡಿದ್ದಾರೆ.

Leave a Reply