NEWSಶಿಕ್ಷಣ-

ಕನ್ನಡ ಶಾಲೆ ಉಳಿಸಲು ಹಾಸನಕ್ಕೆ ಬಂದ ಸಚಿವರು

ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಿ ಪರೀಕ್ಷೆ l ಸಚಿವ ಸುರೇಶ್ ಕುಮಾರ್

ವಿಜಯಪಥ ಸಮಗ್ರ ಸುದ್ದಿ

ಹಾಸನ: ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು  ಸರ್ಕಾರ ಎಸ್.ಎಸ್ ಎಲ್.ಸಿ ಪರೀಕ್ಷೆಯನ್ನು ಅತ್ಯಂತ ಕಾಳಜಿಯಿಂದ ನಡೆಸಲಾಗುವುದು  ಎಂದು ಶಿಕ್ಷಣ ಸಚಿವ  ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶತಮಾನದ ಸರ್ಕಾರಿ ಶಾಲೆಯ ಕಟ್ಟಡ ಸಮಸ್ಯೆಗೆ  ಸಿಲುಕಿದ ಕುರಿತು  ವಾಟ್ಸ್‌ಆಪ್‌ ಸಂದೇಶ ನೋಡಿ ಸಕಲೇಶಪುರ ತಾಲೂಕು ದೇವಾಲಕೆರೆ ಗ್ರಾಮಕ್ಕೆ  ಆಗಮಿಸಿದ ಸಚಿವರು ಸ್ಥಳೀಯರೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಕೋವಿದ್ 19  ಹಿನ್ನಲೆಯಲ್ಲಿ ಸುಮಾರು ಎರಡು ತಿಂಗಳ ಲಾಕ್ ಡೌನ್ ನಂತರ  ವೇಳಾ ಪಟ್ಟಿ ಪ್ರಕಟಿಸಲಾಗಿದೆ . ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸಲಾಗುವುದು. ಎಲ್ಲಾ ವಿದ್ಯಾರ್ಥಿಗಳಿಗೆ ಅವರು ಇರುವ ಊರುಗಳ ಪರೀಕ್ಷಾ ಕೇಂದ್ರಗಳಲ್ಲಿಯೇ  ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ . ಪರೀಕ್ಷೆ ಬರೆಯಲಿರುವ ಎಲ್ಲಾ ‌8.5ಲಕ್ಷ  ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ‌ಸಂಸ್ಥೆ ವತಿಯಿಂದ ತಲಾ ಎರಡು ಮಾಸ್ಕ್ ನೀಡಲಾಗುತ್ತಿದ್ದು ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಹಾಕುವುದು , ಜಾಗೃತಿ ಮೂಡಿಸುವ ಕಾರ್ಯವನ್ನು ಈ‌ ಸಂಸ್ಥೆ ವತಿಯಿಂದ ಮಾಡಲಾಗುತ್ತದೆ. ಇನ್ನೂ ಅನೇಕ ಸಂಘ ಸಂಸ್ಥೆಗಳು ಇದರಲ್ಲಿ ಕೈ ಜೋಡಿಸುತ್ತಿವೆ ಎಂದು ಹೇಳಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

ಎಸ್ .ಎಸ್ .ಎಲ್.ಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೋಡಿ ಕೆಸ್.ಎಸ್‌.ಆರ್.ಟಿ.ಸಿ   ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲು ಸಾರಿಗೆ ಸಚಿವರಲ್ಲಿ ಮಾನವಿ ಮಾಡಲಾಗುವುದು . ಪ್ರಯಾಣಿಕರ ಏರಿಕೆ ಅನುಸಾರ ಮುಂದಿನ‌ ದಿನಗಳಲ್ಲಿ  ಬಸ್‌ಗಳ ಓಡಾಟವೂ  ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಯಾವುದೇ ಆತಂಕ ಇಲ್ಲದೆ ಪರೀಕ್ಷೆ ಬರೆಯಬೇಕು ಎಂದು  ಕರೆ ನೀಡಿದರು.

ಪರೀಕ್ಷಾ ಸಂದರ್ಭದಲ್ಲಿ  ಕಂಟೋನ್ಮೆಂಟ್ ವಲಯಗಳಲ್ಲಿ ಇರುವವರಿಗೆ  ಪೂರಕ ಪರೀಕ್ಷೆಗೆ ಅವಕಾಶ ನೀಡಿ ಅದನ್ನೂ ಈ ಸಾಮಾನ್ಯ ಪರೀಕ್ಷೆ ಯಂತೆ ಪರಿಗಣಿಸಲಾಗುವುದು. ಸರ್ಕಾರದ ಸೂಚನೆ ಬರುವ ವರೆಗೂ ಖಾಸಗಿ ಶಾಲೆಗಳು ದಾಖಲಾತಿ ಪ್ರಾರಂಭಿಸಬಾರದು, ಈ ವರ್ಷ ಶುಲ್ಕ ಏರಿಸಬಾರದು ಎಂಬ ಸೂಚನೆ ನೀಡಲಾಗಿದೆ ಎಂದ  ಸಚಿವರು ಎಲ್ ಕೆ.ಜಿ,ಯು.ಕೆ.ಜಿ ಒಂದನೇ ತರಗತಿಗೂ ಆನ್ ಲೈನ್ ಕ್ಲಾಸ್ ನಡೆಸಲಾಗಿತ್ತಿದೆ ಇದು ಸರಿಯಲ್ಲ.ಇದರಿಂದ ಮಕ್ಕಳ ಮೇಲಾಗುವ ಪರಿಣಾಮದ ಬಗ್ಗೆ  ನಿಮಾನ್ಸ್ ನಿಂದ‌ ವರದಿ ಕೇಳಲಾಗಿದೆ.  ವರದಿ ಬಂದ ನಂತರ ಅದಕ್ಕೆ ಅನುಸಾರ ಕ್ರಮ ವಹಸಿಲಾಗುವುದು  ಎಂದು ಸುರೇಶ್ ಕುಮಾರ್ ಹೇಳಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

ಸಕಲೇಶಪುರ ತಾಲೂಕಿನ ದೇವಲಕೆರೆ ಶಾಲೆ ಕಟ್ಟಡ ಸಮಸ್ಯೆ ಗಮನಿಸಲಾಗಿದೆ ಗ್ರಮದ ಶಿಕ್ಷಣದ ಏಳಿಗೆಗೆ ನೂರು ವರ್ಷಗಳ ಹಿಂದೆಯೇ ದಾನವಾಗಿ ಪಡೆದ ಜಮೀನಿನ ಬಗ್ಗೆ ಇರುವ ತಕರಾರನ್ನು ಶೀಘ್ರವಾಗಿ ನ್ಯಾಯ ಸಮ್ಮತವಾಗಿ ಬಗೆಹರಿಸಲಾಗುವುದು  .ವಾಟ್ಸ್‌ಆಪ್ ಸಂದೇಶ ಗಮನಿಸಿ ತಾವು ಇಲ್ಲಿಗೆ ಆಗಮಿಸಿದ್ದಾಗಿ  ಸಚಿವರು ಹೇಳಿದರು.

ಶಾಸಕ  ಎಚ್.ಕೆ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ  ಹೆಚ್.ಎಂ ವಿಶ್ವನಾಥ್  ಈ ಸಂದರ್ಭದಲ್ಲಿ ಮಾತನಾಡಿ ಶಿಕ್ಷಣ ಸಚಿವರೇ ದೇವಾಲಕೆರೆಗೆ ಅಗಮಿಸಿರುವುದು ಪ್ರಶಂಸನೀಯ ಅವರ ಸೇವಾ ನಿಷ್ಠೆ ,ಬದ್ದತೆ ಅನುಕರಣೀಯ . ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಗ್ರಾಮಾದ ಶಾಲೆ ಕಟ್ಟಡದ ಬಳಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

Leave a Reply