NEWSನಮ್ಮಜಿಲ್ಲೆವಿಜ್ಞಾನ

ಅಣೆಕಟ್ಟೆ ನಿರ್ಮಾಣ  ಎಂದರೆ ಸಣ್ಣ ಕೆಲಸವಲ್ಲ

ಒಡೆಯರ್ ಕಾರ್ಯಕ್ರಮ ಅವಿಸ್ಮರಣೀಯ l ಸಚಿವ  ಸೋಮಶೇಖರ್

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಅಣೆಕಟ್ಟೆ ಕಟ್ಟುವುದು ಎಂದರೆ ಸಣ್ಣ ಕೆಲಸವಲ್ಲ. ಅದರಲ್ಲೂ ಒಡವೆಗಳನ್ನು ಮಾರಿ ಜನರಿಗೆ ಉಪಕಾರ ಮಾಡುವ ದೊಡ್ಡ ಕೆಲಸವನ್ನು ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ  ಎಸ್.ಟಿ.ಸೋಮಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ 136ನೇ ವರ್ಧಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಡೆಯರ್ ಅವರು ಜಾರಿಗೆ ತಂದ ಸಹಕಾರ ಕ್ಷೇತ್ರ ಈಗಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದೆಷ್ಟೋ ಕೋಟ್ಯಾಂತರ ಮಂದಿಗೆ ಬೆಳಕಾಗಿದೆ. ಶಿಕ್ಷಣ, ನೀರಾವರಿ, ಸಹಕಾರ ಹೀಗೆ ಅನೇಕ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಅಪಾರ ಎಂದು ಸಚಿವರು ಶ್ಲಾಘಿಸಿದರು.

ಅರಸು ಸಮುದಾಯದ ಅಭಿವೃದ್ಧಿಗೋಸ್ಕರ ನನಗೆ ಕೊಟ್ಟಿರುವ ಮನವಿ ಪತ್ರವನ್ನು ನಾನು ನಾಳೆಯೇ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ನಾನು ಶಾಸಕರಾದ ರಾಮದಾಸ್ ಹಾಗೂ ನಾಗೇಂದ್ರ ಅವರ ಜೊತೆ ಹೋಗಿ ಸಮುದಾಯಕ್ಕೆ ಬೇಕಾದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

Leave a Reply