NEWSನಮ್ಮಜಿಲ್ಲೆ

ಇಲ್ಲಿವರೆಗೆ ಗ್ರೀನ್‌ ಜೋನ್‌ ಇದ್ದ ರಾಮನಗರಕ್ಕೂ ಒಕ್ಕರಿಸಿದ ಕೊರೊನಾ?

ವಿಜಯಪಥ ಸಮಗ್ರ ಸುದ್ದಿ

ರಾಮನಗರ: ಜಿಲ್ಲೆ ಇಲ್ಲಿವರೆಗೂ ಗ್ರೀನ್‌ ವಲಯವಾಗಿಯೇ ಇತ್ತು ಆದರೆ, ಇಂದು ಕೊರೊನಾ ಪಾಸಿಟಿವ್‌ ಪ್ರಕರಣ ಪತ್ತೆಯಾಗುವ ಮೂಲಕ ಜಿಲ್ಲೆಯೂ ಮಹಾಮಾರಿಯಿಂದ ದೂರ ಉಳಿಯಲು ಸಾದ್ಯವಾಗಲಿಲ್ಲ.

ಕೆಎಸ್‍ಆರ್‌ಟಿಸಿ ಬಸ್‌ ಚಾಲಕ ಸೇರಿ  ಎರಡೂವರೆ ವರ್ಷದ ಮಗುವಿಗೆ ಕೊರೊನಾ ಶಂಕೆ ವ್ಯಕ್ತವಾಗಿದ್ದು, ಜಿಲ್ಲೆಯ ಜನರ ಆತಂಕಕ್ಕೆ ಒಳಗಾಗಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

ತುಮಕೂರಿನ ಬೆಳ್ಳಾವಿಯ  ಮಾಗಡಿ ಕೆಎಸ್‍ಆರ್‌ಟಿಸಿ  ಡಿಪೋದ  ಚಾಲಕನಿಗೆ ಕೊರೊನಾ ದೃಢವಾಗಿದ್ದು, ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಇವರು ಐದು ದಿನಗಳ ಹಿಂದಷ್ಟೇ  ಕರ್ತವ್ಯಕ್ಕೆ ಹಾಜರಾಗಿದ್ದರು. ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ತಪಾಸಣೆ ನಡೆಸಲಾಗಿತ್ತು. ಕೊರೊನಾ ವರದಿ ಬರುವ ಮುನ್ನವೇ ಡಿಪೋ ವ್ಯವಸ್ಥಾಪಕರು ಚಾಲಕನಿಗೆ ಡ್ಯೂಟಿ ನೀಡಿದ್ದರು.

ಚಾಲಕ ಮೂರು ದಿನ ಮಾಗಡಿ-ಬೆಂಗಳೂರು  ಮಾರ್ಗವಾಗಿ ಡ್ಯೂಟಿ ಮಾಡಿದ್ದ.  ಈವೇಳೆ ಸಹ ಸಿಬ್ಬಂದಿ ಜತೆ ಊಟ-ತಿಂಡಿ ಕೂಡ ಮಾಡಿದ್ದ. ಇದರಿಂದ ಮಾಗಡಿ ಕೆಎಸ್‍ಆರ್‌ಟಿಸಿ  ಡಿಪೋದಲ್ಲಿ ಆತಂಕ ಶುರುವಾಗಿದೆ. ಕೊರೊನಾ ಶಂಕಿತ ಚಲಾಯಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರ ಮೇಲೂ ನಿಗಾ ಇರಿಸಲಾಗಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

ಮತ್ತೊಂದೆಡೆ ಮಾಗಡಿ ತಾಲೂಕಿನಲ್ಲೇ ಮಗುವಿಗೂ ಕೊರೊನಾ ದೃಢವಾಗಿದೆ. ಕುದೂರು ಬಳಿಯ ಮಾರಸಂದ್ರ ಗ್ರಾಮದ ಮಗುವಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಎರಡೂವರೆ ವರ್ಷದ ಮಗುವನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ  ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಈ ಮಗುವಿನ ಕುಟುಂಬ ತಮಿಳುನಾಡಿನ ಚೆನ್ನೈನಿಂದ ಬಂದಿದ್ದು, ಕ್ವಾರಂಟೈನ್ ಮಾಡಲಾಗಿತ್ತು. ಈ ಗ್ರಾಮದಲ್ಲಿ 80 ಮನೆಗಳಿವೆ. ಹೀಗಾಗಿ ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಜಿಲ್ಲಾಡಳಿತದಿಂದ ಸ್ಪಷ್ಟನೆ ಬರಬೇಕಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

mgid.com, 613802, DIRECT, d4c29acad76ce94f
mgid.com, 613802, DIRECT, d4c29acad76ce94f

Leave a Reply

error: Content is protected !!