ವಾಷಿಂಗ್ಟನ್: ಭಾರತದಲ್ಲಿ ಚೀನಾ ಆಪ್ ಟಿಕ್ ಟಾಕ್ ಬ್ಯಾನ್ ಮಾಡುರುವಂತೆ ನಮ್ಮಲ್ಲೂ ಮಾಡಬೇಕು ಎಂದು ಅಮೆರಿಕ ಕಾಂಗ್ರೆಸ್ನ 26 ಸದಸ್ಯರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರ ಬರೆದಿರುವ ಅವರು ರಾಷ್ಟ್ರೀಯ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಟಿಕ್ ಟಾಕ್ ಸೇರಿ ಚೀನಾದ ಹಲವು ಆಪ್ ಗಳನ್ನು ಬ್ಯಾನ್ ಮಾಡುವಂತಹ ಮಹತ್ವದ ನಿರ್ಧಾರವನ್ನು ಭಾರತ ಇತ್ತೀಚೇಗೆ ತೆಗೆದುಕೊಂಡಿತ್ತು. ಅದರಂತೆ ಅಮೆರಿಕದ ಜನತೆಯ ಡಾಟಾ, ಖಾಸಗಿತನ ಅಥವಾ ಭದ್ರತೆಯನ್ನು ಟಿಕ್ ಟಾಕ್ ನಂತಹ ಚೀನಾ ಆಪ್ ಗಳು ಸುರಕ್ಷಿತವಾಗಿ ಇಡಲಿವೆ ಎಂಬ ನಂಬಿಕೆ ಇಲ್ಲ, ಹೀಗಾಗಿ ನಮ್ಮ ದೇಶದ ಸುರಕ್ಷತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಈ ವಾರದೊಳಗೆ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶ್ವೇತಭವನದ ಮುಖ್ಯಸ್ಥ ಮಾರ್ಕ್ ಮೆಡೋಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.