NWKRTC: ನಿರ್ವಾಹಕನಿಗೆ ಕಾಲಿನಿಂದ ಒದ್ದು ಬಸ್‌ನಿಂದ ಹೊರ ದಬ್ಬಿದ ಮಹಿಳಾ ಮಣಿಗಳು
ಬೆಳಗಾವಿ: ಸರ್ಕಾರ ಮಹಿಳೆಯರಿಗೆ ರಾಜ್ಯದ ಎಲ್ಲ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಎಲ್ಲಿಂದ ಎಲ್ಲಿಯವರೆಗೂ ಬೇಕಾದರೂ ಉಚಿತವಾಗಿ ಪ್ರಯಾಣಿಸುವುದಕ್ಕೆ ಅವಕಾಶ ಕಲ್ಪಿಸಿದೆ. ಆದರೆ, ಇದರ ಸದುಪಯೋಗ ಪಡೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ಸಾರಿಗೆ ನೌಕರರ ಮೇಲೆ ದೌರ್ಜನ್ಯ ಎಸಗುವವರೆ ಹೆಚ್ಚಾಗುತ್ತಿದ್ದಾರೆ.
ಹೌದು! ಸಾರಿಗೆ ನಿಗಮಗಳ ಚಾಲನಾ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದು, ಅವಾಚ್ಯವಾಗಿ ನಿಂದಿಸುವುದು, ಬಸ್ ಡೋರ್‌ಗಳನ್ನು ಮುರಿಯುವುದು ಇತ್ತೀಚೆಗೆ ಹೆಚ್ಚಾಗಿಯೇ ನಡೆಯುತ್ತಿದೆ. ಆದರೆ, ಪ್ರಯಾಣಿಕ ಮಹಿಳೆಯರಿಗೆ ಅರಿವು ಮೂಡಿಸಬೇಕಿರುವ ನಿಗಮಗಳ ಅಧಿಕಾರಿಗಳು ಆ ಕೆಲಸ ಮಾಡದೆ ಸಿಬ್ಬಂದಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡುತ್ತಿದ್ದಾರೆ.
ತಪ್ಪು ಮಾಡಿದವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆ ನೀಡಲಾಗುತ್ತದೆ ಎಂದು ಸರ್ಕಾರ ಮತ್ತು ನಿಗಮಗಳ ಅಧಿಕಾರಿಗಳು ಪ್ರಯಾಣಿಕರಿಗೂ ಎಚ್ಚರಿಕೆ ನೀಡಬೇಕು. ಆದರೆ ಇಲ್ಲಿ ಪ್ರಯಾಣಿಕರೆ ತಪ್ಪು ಮಾಡಿದರೂ ಶಿಕ್ಷೆ ಮಾತ್ರ ಸಾರಿಗೆ ನೌಕರರಿಗೆ ಕೊಡಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ. ಇದರಿಂದ ನಾವು ಸರಿಯಾಗಿ ಡ್ಯೂಟಿ ಮಾಡುವುದಕ್ಕೂ ಆಗುತ್ತಿಲ್ಲ ಎಂದು ನೌಕರರು ಅಲವತ್ತುಕೊಳ್ಳುತ್ತಿದ್ದಾರೆ.
ಇನ್ನು ನಿನ್ನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ನಿರ್ವಾಹಕರ ಮೇಲೆ ಮಹಿಳಾ ಪ್ರಯಾಣಿಕರ ಗುಂಪೊಂದು ಹಲ್ಲೆ ಮಾಡುತ್ತಿದೆ. ಅವಾಚ್ಯ ಶಬ್ದ ಪ್ರಯೋಗವನ್ನು ಮಾಡಿದೆ. ಅಲ್ಲದೆ ನಿರ್ವಾಹಕರಿಗೆ ಕಾಲಿನಿಂದ ಒದ್ದು ಬಸ್ ಫುಟ್‌ಬೋರ್ಡ್‌ನಿಂದ ಬೀಳಿಸಿದ್ದಾರೆ.
ಇಷ್ಟು ಮಾತ್ರಕ್ಕೆ ಸುಮ್ಮನಿರದ ಆ ಮಹಿಳೆಯರು ಮತ್ತೆ ನಿರ್ವಾಹಕನನ್ನು ಮೇಲೆಕ್ಕೆ ಎಳೆದುಕೊಂಡು ಥಳಿಸಿದ್ದಾರೆ. ಜತೆಗೆ ಕುತ್ತಿಗೆ ಪಟ್ಟಿಯನ್ನು ಹಿಡಿದು ಹೊಡೆಯುತ್ತಿದ್ದಾರೆ. ಹೀಗೆ ಪ್ರಯಾಣಿಕರು ನಡೆದುಕೊಂಡರೆ ಸಾರಿಗೆ ಸಿಬ್ಬಂದಿ ಡ್ಯೂಟಿ ಮಾಡುವುದಾದರೂ ಹೇಗೆ ಎಂದು ಭಯದಲ್ಲೇ ಅಮಾಯಕ ನೌಕರರು ಕೇಳುತ್ತಿದ್ದಾರೆ.
ಇನ್ನು ಈ ರೀತಿಯ ದೌರ್ಜನ್ಯದಿಂದ ನಿರ್ವಾಹಕರು ಮತ್ತು ಚಾಲಕರು ಕರ್ತವ್ಯ ನಿರ್ವಹಿಸುವುದು ತುಂಬಾ ಕಷ್ಟವಾಗುತ್ತಿದೆ. ಸೌಜನ್ಯಯುತವಾಗಿ ನಡೆದುಕೊಳ್ಳುವ ಸಲುವಾಗಿ ಆ ನಿರ್ವಾಹಕ ತಾಳ್ಮೆಯಿಂದಲೇ ವರ್ತಿಸಿದ್ದಾರೆ. ಆದರೂ ಕೂಡ ಮಹಿಳೆಯರು ಈ ರೀತಿ ವರ್ತಿಸಿದರೆ ಹೇಗೆ?
ಇನ್ನು ಸಾರಿಗೆ ನಿಗಮಗಳು ಮತ್ತು ಸಾರಿಗೆ ಸಚಿವರು ಮಹಿಳೆಯರಿಗೆ ಯಾವುದೇ ಗೈಡ್ಲೈನ್ಸ್ ನೀಡಿಲ್ಲ. ಆದರೆ ಸಾರಿಗೆ ಸಿಬ್ಬಂದಿಗಳಿಗೆ ಗೈಡ್ಲೈನ್ಸ್ ನೀಡಿದ್ದಾರೆ. ಹೀಗಾದರೆ ಹೇಗೆ? ಇದು ಹೀಗೆ ಮುಂದುವರಿದರೆ ನಿರ್ವಾಹಕರು ಮತ್ತು ಚಾಲಕರು ಪ್ರತಿಭಟನೆ ಮಾಡಬೇಕಾಗುತ್ತದೆ.
ಇಲ್ಲ ಸಾಮೂಹಿಕ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹೇಳುತ್ತಿರುವ ನೌಕರರು ಪ್ರಯಾಣದ ವೇಳೆ ಮಹಿಳೆಯರು ಡ್ಯೂಟಿ ನಿರತ ಸಾರಿಗೆ ಸಿಬ್ಬಂದಿಯೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಕರಪತ್ರ ನೀಡುವ ಮೂಲಕ ಅರಿವು ಮೂಡಿಸಿ ಎಂದು ಆಗ್ರಹಿಸಿದ್ದಾರೆ.
Related
You Might Also Like
ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಮಂಗಳೂರು: ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಮಂಗಳೂರಿನ ಆರ್ಟಿಒ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇಶದ...
ವ್ಯಾಪಾರ ವಹಿವಾಟು ಹೆಚ್ಚಿಸಿ, ಉತ್ಪಾದನೆ ಉತ್ತೇಜಿಸುವ ಸರ್ಕಾರದ ಬದ್ಧತೆ ಶ್ಲಾಘನೀಯ: ಕಾಸಿಯಾ ಅಧ್ಯಕ್ಷ ರಾಜಗೋಪಾಲ್
ಬೆಂಗಳೂರು: ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಹೊಸದಾಗಿ ಅನಾವರಣಗೊಂಡ ಕೈಗಾರಿಕಾ ನೀತಿ 2025-30 ಅನ್ನು ಸ್ವಾಗತಿಸುತ್ತದೆ. ಈ ನೀತಿಯು ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗ...
ಮೈಕ್ರೊ ಫೈನಾನ್ಸ್ ಸುಗ್ರಿವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ
ಬೆಂಗಳೂರು: ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಮೈಕ್ರೊ ಫೈನಾನ್ಸ್ ಸುಗ್ರಿವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ಸಾಲಗಾರರ ಮೇಲೆ ದೌರ್ಜನ್ಯ ಎಸಗುತ್ತಿರುವ ಮೈಕ್ರೊ ಫೈನಾನ್ಸ್ಗಳ...
ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕರಡಿಗೆ ನಾಗರೀಕರಿಂದ ಬರುವ ಸಲಹೆಗಳ ಸೇರಿಸಿ ಅಂತಿಮ: ರಿಜ್ವಾನ್ ಹರ್ಷದ್
ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕರಡಿಗೆ ನಾಗರೀಕರಿಂದ ಬರುವ ಸಲಹೆಗಳನ್ನು ಸೇರಿಸಿ ಅಂತಿಮಗೊಳಿಸಲಾಗುವುದೆಂದು ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷ ರಿಜ್ವಾನ್ ಹರ್ಷದ್...
ಎಸ್ಸಿಎಸ್‌ಪಿ, ಟಿಎಸ್ಪಿ ವಿಶೇಷ ಯೋಜನೆ ಫೆ. ಅಂತ್ಯದೊಳಗೆ ಶೇ.100 ರಷ್ಟು ಪ್ರಗತಿ ಸಾಧಿಸಿರಬೇಕು: ಅಧಿಕಾರಿಗಳಿಗೆ ಡಿಸಿ ಆದೇಶ
ಬೆಂಗಳೂರು: 2024-25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿಶೇಷ ಯೋಜನೆ (ಎಸ್ಸಿಎಸ್‌ಪಿ, ಟಿಎಸ್ಪಿ ಯೋಜನೆ) ಯಡಿ ಇಲಾಖೆಗಳಿಗೆ ಬಿಡುಗಡೆ ಆಗಿರುವ ಅನುದಾನವನ್ನು ಇದೇ ತಿಂಗಳ ಅಂದರೆ...
ರೈತರ ನಿರಂತರ ಹೋರಾಟಕ್ಕೆ ನಾಳೆಗೆ ವರ್ಷ: ಆದರೂ ಕಿವಿಗೊಡದ ಸರ್ಕಾರ
ನ್ಯೂಡೆಲ್ಲಿ: ಕನೂರಿ ಗಡಿಯ ಹೋರಾಟ ದೇಶದ ರೈತರ ಹಿತರಕ್ಷಣೆಯ ಹೋರಾಟವಾಗಿದ್ದು ಈ ಹೋರಾಟಕ್ಕೆ ನಾಳೆಗೆ ಒಂದು ವರ್ಷವಾಗುತ್ತಿದ್ದು ರೈತರಿಗೆ ದುಃಖದ ವರ್ಷವಾಗಿಯೇ ತುಂಬುತ್ತಿದೆ. ಸಂಯುಕ್ತ ಕಿಸಾನ್ ಮೋರ್ಚಾ...
KSRTC: ಫೇಕ್ ಫೋನ್ ಪೇ/ UPI ಆಪ್‌ಗಳಿಂದ ದಿನನಿತ್ಯ ನಿರ್ವಾಹಕರಿಗೆ ಆರ್ಥಿಕ ಬರೆ!!
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಫೇಕ್ ಫೋನ್ ಪೇ/ UPI ಆಪ್‌ಗಳಿಂದ ದಿನನಿತ್ಯ ನಿರ್ವಾಹಕರು ತಮ್ಮ ಕೈಯಿಂದ ಹಣವನ್ನು ಘಟಕಕ್ಕೆ ಕಟ್ಟಿ ಹೋಗುತ್ತಿದ್ದಾರೆ, ಈ ಬಗ್ಗೆ...
KKRTC ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಕಂಡಕ್ಟರ್‌ನಿಂದ ದೂರು ಹಿಂಪಡೆಯುವಂತೆ ಬೆದರಿಕೆ-ಆರೋಪ
ರಾಯಚೂರು : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ನಿರ್ವಾಹಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ದೂರು ನೀಡಿದ ಮಹಿಳೆ ಸಂಬಂಧಿಕರಿಗೆ...
KSRTC ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ – ಸಿಎಂ ಜತೆ ಸಚಿವ ರಾಮಲಿಂಗಾರೆಡ್ಡಿ ಚರ್ಚೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC) ಸೇರಿದಂತೆ ಪ್ರಮುಖ ಸಾರಿಗೆ ನಿಗಮಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ನೀಡಬೇಕಾದ ಅನುದಾನ, ಬಿಡುಗಡೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅರೊಂದಿಗೆ ಚರ್ಚಿಸಿದ್ದೇನೆ...