ವಿಜಯಪುರ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಾಗಲಕೋಟೆ ಘಟಕದ ಚಾಲಕ ಕಂ ನಿರ್ವಾಹಕ ದೊರೇಗೌಡ (43) ಅವರು ಇಂದು ಬೆಳಗ್ಗೆ ಕರ್ತವ್ಯ ನಿರತರಾಗಿದ್ದಾಗಲೇ ಹೃದಯಘಾತದಿಂದ ಮುತೃಪಟ್ಟಿದ್ದಾರೆ.
ಬಾಲಕೋಟೆಯಿಂದ ವಿಜಯಪುರ ಬಸ್ ನಿಲ್ದಾಣಕ್ಕೆ ಬಸ್ ಬರುತ್ತಿದ್ದಂತೆ ಎದೆನೋವು ಕಾಣಿಸಿಕೊಂಡಿದೆ ತಕ್ಷಣ ಸಹೋದ್ಯೋಗಿಗಳು ಆಸ್ಪತ್ರೆಗೆ ಕರೆದುಕೊಂಡ ಹೋಗಲು ಮುಂದಾಗಿದ್ದಾರೆ. ಆದರೆ ಅಷ್ಟರಲೇ ಕುಸಿದುಬಿದ್ದು ಹೃದಯಘಾತದಿಂದ ಮುತೃಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ನಿಗಮದ ನೌಕರರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದ್ದು, ಈ ನಡುವೆ ಡಿಪೋಗಳಲ್ಲಿ ಅಧಿಕಾರಿಗಳ ಕಿರುಕುಳದಿಂದಲೂ ಮಾನಸಿಕವಾಗಿ ನೋವು ಅನುಭವಿಸುತ್ತಿದ್ದಾರೆ. ಒಟ್ಟಾರೆ ಒತ್ತಡದಲ್ಲೇ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿರುವ ಈ ನೌಕರರಿಗೆ ಸರಿಯಾದ ಒಂದು ಆರೋಗ್ಯ ವಿಮೆಯೂ ಕೂಡ ಇಲ್ಲದಿರುವುದು ದುರಂತ.
ಇನ್ನು ನೌಕರರ ಪರ ನಾವಿದ್ದೇವೆ ಎಂದು ಬೊಬ್ಬೆಹೊಡೆದುಕೊಳ್ಳುತ್ತಿರುವ ಸಂಘಟನೆಗಳ ಮುಖಂಡರು ಈವರೆಗೂ ಇಂಥ ದೈಹಿಕ ಮತ್ತು ಮಾನಸಿಕವಾಗಿ ಶ್ರಮವಹಿಸಿ ಕೆಲಸ ನಿರ್ವಾಹಿಸುತ್ತಿರುವ ನೌಕರರಿಗೆ ಸರ್ಕಾರಕ್ಕೆ ಒತ್ತಡ ಹೇರಿ ನೌಕರರ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದಕ್ಕೆ ನಾಚಿಕೆಯಾಗಬೇಕು.
ಇನ್ನು ಇಂಥ ವೇಳೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ನೌಕರರ ಎಷ್ಟೋ ಕುಟುಂಬಗಳು ಮನೆಗೆ ಆಧಾರವಾಗಿರುವವರನ್ನು ಕಳೆದುಕೊಂಡು ಬೀದಿಗೆ ಬಂದಿವೆ ಮತ್ತು ಬರುತ್ತಿರುವುದು ಭಾರಿ ನೋವಿನ ವಿಷಯವಾಗಿದೆ.
ಮೊನ್ನೆ ಶಿವಮೊಗ್ಗದ ಸಾಗರ ಬಸ್‌ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕುಸಿದು ಬಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ನೌಕರ ರವಿ ನಾಗೇಶ್ ನಾಯ್ಕ ಎಂಬುವರಿಗೆ ಆಸ್ಪತ್ರೆಯ ಲಕ್ಷ ಲಕ್ಷ ರೂ.ಗಳ ಖರ್ಚು ಭರಿಸಲಾಗದ ಕುಟುಂಬ ಸಾರ್ವಜನಿಕರಿಂದ ಹಣದ ನೇರವು ಕೇಳುತ್ತಿದೆ. ಒಬ್ಬ ನೌಕರನಿಗೆ ಆರೋಗ್ಯ ಸೇವೆ ಒದಗಿಸಿಕೊಡುವಲ್ಲಿ ವಿಫಲವಾಗಿರುವ ಸರ್ಕಾರ ಮತ್ತು ಸಂಸ್ಥೆಯ ಅಧಿಕಾರಿಗಳ ನಡೆ ನಿಜಕ್ಕೂ ಬೇಸರ ತರಿಸುತ್ತಿದೆ.
ಇನ್ನು ಕರ್ತವ್ಯದ ವೇಳೆ ಅನಾರೋಗ್ಯಕ್ಕೀಡಾದರು ಅವರಿಗೆ ಸಂಸ್ಥೆಯಿಂದ ಕಿಚಿತ್ಸೆ ಕೊಡಿಸುವ ಸೌಲಭ್ಯವಿಲ್ಲ ಎಂದರೆ ಏನು ಹೇಳಬೇಕು. ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಿರುವಂತೆ ಸಾರಿಗೆ ನೌಕರರಿಗೂ ಕಲ್ಪಿಸಬೇಕು ಎಂದು ಕೆಲ ಸಂಘಟನೆಗಳು ಹೋರಾಟ ಮಾಡಿದರೂ ಈ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇದರಿಂದ ಇನ್ನೆಷ್ಟು ನೌಕರರ ಜೀವಗಳು ಈ ರೀತಿ ಹೋಗಬೇಕು ಎಂದು ಸರ್ಕಾರ ಮತ್ತು ಆಡಳಿತ ಮಂಡಳಿ ಬಯಸುತ್ತಿದೆಯೋ ಗೊತ್ತಿಲ್ಲ.