Search By Date & Category

NEWSನಮ್ಮರಾಜ್ಯ

ಪ್ಯಾನ್- ಆಧಾರ್ ಕಾರ್ಡ್ ಲಿಂಕ್ ಅವಧಿ ಜೂನ್‌ 30ರ ವರೆಗೆ ವಿಸ್ತರಣೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ನೀಡಿದ್ದ ಇದೇ 2023ರ ಮಾ.31ರ ಅವಧಿಯನ್ನ ಮತ್ತೆ ವಿಸ್ತರಣೆ ಮಾಡಲಾಗಿದೆ.

ಪ್ಯಾನ್ ಕಾರ್ಡ್ ಹಾಗೂ ಆಧಾರ್‌ ಕಾರ್ಡ್​ ಲಿಂಕ್ ಮಾಡಲು ಮಾ.31 ಕೊನೆಯ ದಿನವಾಗಿತ್ತು. ಇದೀಗ ಕೇಂದ್ರ ಸರ್ಕಾರ ಪ್ಯಾನ್ ಹಾಗೂ ಆಧಾರ್ ಕಾರ್ಡ್​ ಲಿಂಕ್ ಮಾಡುವ ಗಡುವನ್ನು ಜೂ. 30ರವರೆಗೆ ವಿಸ್ತರಿಸಲಾಗಿದೆ.

ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವ ಗಡುವು ಹತ್ತಿರ ಬಂದಿತ್ತು, ಈ ಹಿಂದೆ ಮಾ.​ 31 ಕೊನೆಯ ದಿನಾಂಕವೆಂದು ಹೇಳಲಾಗಿತ್ತು. ಆದರೆ ಇದೀಗ ಜೂ. 30ರವರೆಗೂ ಗಡುವು ವಿಸ್ತರಿಸಲಾಗಿದೆ. ಆಧಾರ್, ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಲು ಸೈಬರ್​ ಸೆಂಟರ್​ಗಳಲ್ಲಿ ಜನ ಮುಗಿಬಿದ್ದಿದ್ದಾರೆ. ಫೈನ್ ಕಟ್ಟುವ ಭೀತಿಯಲ್ಲಿ ಕ್ಯೂನಲ್ಲಿ ನಿಂತು ಲಿಂಕ್​​ ಮಾಡಿಸುತ್ತಿದ್ದಾರೆ.

Leave a Reply

error: Content is protected !!