Please assign a menu to the primary menu location under menu

CrimeNEWSದೇಶ-ವಿದೇಶನಮ್ಮರಾಜ್ಯ

ಅಂತಾರಾಜ್ಯ ಚಡ್ಡಿಗ್ಯಾಂಗ್‌ ಕಳ್ಳರ ಸೆರೆಗೆ ಸಾಥ್‌ ನೀಡಿದ KSRTC ಸಿಬ್ಬಂದಿಗಳಿಗೆ ಪೊಲೀಸ್‌ ಅಧಿಕಾರಿಗಳ ಸೆಲ್ಯೂಟ್

ವಿಜಯಪಥ ಸಮಗ್ರ ಸುದ್ದಿ

ಮಂಗಳೂರು: ಅಂತಾರಾಜ್ಯ ಚಡ್ಡಿಗ್ಯಾಂಗ್‌ನ ನಾಲ್ವರನ್ನು ಬಂಧಿಸಲು ನಿಖರ ಮಾಹಿತಿ ನೀಡಿದ KSRTC ಮಂಗಳೂರು 3 ನೇ ಘಟಕದ ಸಿಬ್ಬಂದಿಗಳಿಗೆ ಪೊಲೀಸ್‌ ಇಲಾಖೆ, ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಮಂಗಳೂರು 3 ನೇ ಘಟಕದ ಚಾಲಕ ಬಸವರಾಜ್ ಅಳ್ಳಪ್ಪ (ಬಿಲ್ಲೆ 652) ಹಾಗೂ ಚಾಲಕ ಕಂ ನಿರ್ವಾಹಕ ಹನುಮಂತ ಅಟಗಲ್ಲು (ಬಿಲ್ಲೆ 3746) ಹಾಗೂ ಖಾಸಾಗಿ ಚಾಲಕ (W124) ಮಹೇಶ್ ಹಾಗೂ ನಿರ್ವಹಕ ಸೀನಪ್ಪ (ಬಿಲ್ಲೆ 4358) ಅವರಿಗೆ ಎಲ್ಲರ ಪರವಾಗಿ ಘಟದ ವ್ಯವಸ್ಥಾಪಕರು ಕೂಡ ಅಭಿನಂದನೆ ಸಲ್ಲಿಸಿದ್ದಾರೆ.

ಘಟನೆ : ಜುಲೈ 9ರಂದು ಅಂದರೆ ಮಂಗಳವಾರವಾ ನಿನ್ನೆ ಬೆಳಗಿನ ಜಾವ ಇದೆ ಚಡ್ಡಿಗ್ಯಾಂಗ್ ದರೋಡೆ ಕೋರರು ಮಂಗಳೂರಿನ ಒಂದು ಮನೆಯಲ್ಲಿ ದರೋಡೆ ಮಾಡಿ ವೃದ್ಧ ದಂಪತಿ ಮೇಲೆ ಹಲ್ಲೆ ಮಾಡಿ ಬಳಿಕ ಆ ಮನೆಯವರ ಕಾರಿನಲ್ಲೇ ಮೂಲ್ಕಿಗೆ ತೆರಳಿ ಅನಂತರ KSRTC ಬಸ್ಸು ಹತ್ತಿದ್ದರು.

ಈ ಮಾಹಿತಿ ಅನ್ವಯ ಪೊಲೀಸರು KSRTC ಮಂಗಳೂರು 3 ನೇ ಘಟಕಕ್ಕೆ ಬಂದು ವಿಚಾರಿಸಿ ವಿಡಿಯೋ ತೋರಿಸಿದಾಗ ಚಾಲಕ ಬಸವರಾಜ್ ಬಸ್ಸಿನ ವಿಡಿಯೋ ನೋಡಿ ಇದು ನಮ್ಮ ಘಟಕದ ಕಬ್ಬರಗಿ ಮಂಗಳೂರು ನಡುವೆ ಸಂಚರಿಸುವ ಬಸ್‌ ಎಂದು ತಿಳಿಸಿದರು.

ಆ ಬಸ್‌ ಚಾಲಕ ಕಂ ನಿರ್ವಾಕರಾದ ಹನುಮಂತ ಅಟಗಲ್ಲು ಅವರನ್ನು ವಿಚಾರಿಸಿದಾಗ ಹೌದ್ ಅವರು 4 ಜನ ಅಪರಿಚಿತರು ಮೂಲ್ಕಿ ಬಸ್ಟ್ಯಾಂಡ್‌ನಲ್ಲಿ ನಮ್ಮ ಬಸ್‌ ಹತ್ತಿದ್ದು ಆಮೇಲೆ ಮಂಗಳೂರಿನಲ್ಲಿ ಇಳಿದು ನಮ್ಮದೇ ಅಂದರೆ ಮಂಗಳೂರು 3 ನೇ ಘಟಕದ ಬೆಳಗ್ಗೆ 5.30 ಹೊರಡುವ ಮಂಗಳೂರು ಬೆಂಗಳೂರು ಸಾರಿಗೆ ಬಸ್‌ನಲ್ಲಿ ಪ್ರಯಾಣಿಸಿದ್ದರು ಎಂದು ನಿಖರ ಮಾಹಿತಿ ನೀಡಿದರು.

ತದನಂತರ ತೀವ್ರ ಶೋಧಕ್ಕೆ ಇಳಿದ ಪೊಲೀಸರು ಬೆಂಗಳೂರು ಚಾಲಕರ ಮತ್ತು ನಿರ್ವಾಹಕರನ್ನು ವಿಚಾರಿಸಿದಾಗ ದರೋಡೆಕೋರ ಚಂಡಿಗ್ಯಾಂಗ್‌ ಇರುವಿಕೆ ಬಗ್ಗೆ ಖಚಿತ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧಾರದ ಮೇರೆಗೆ ಸಕಲೇಶಪುರ ಪೊಲೀಸರು ಈ ಚಡ್ಡಿಗ್ಯಾಂಗ್ ದರೋಡೆ ಕೋರರನ್ನು ಬಂಧಿಸಲು ಯಶಸ್ವಿಯಾದರು.

ಇತ್ತ ಚಂಡಿಗ್ಯಾಂಗ್‌ ಬಂಧಿಸಲು ಕೂಡಲೇ ಜಾಗ್ರತರಾದ ಪೊಲೀಸರ ಕಾರ್ಯಕ್ಕೆ ಎಲ್ಲರ ಕಡೆಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಈ ನಡುವೆ ಚಂಡಿಗ್ಯಾಂಗ್‌ ಹಿಡಿಯಲು ಪೊಲೀಸರಿಗೆ ಸಾಥ್‌ ನೀಡಿದ KSRTC ಸಿಬ್ಬಂದಿಗಳಿಗೆ ಪೊಲೀಸ್‌ ಅಧಿಕಾರಿಗಳು ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

error: Content is protected !!
LATEST
Kho Kho World Cup 2025: ತಿ.ನರಸೀಪುರದ ಚೈತ್ರಾ ನಾಡು, ದೇಶದ ಕೀರ್ತಿಯ ಮುಗಿಲೆತ್ತೆಕ್ಕೆ ಹಾರಿಸಿದ ಅಪ್ಪಟ ಗ್ರಾಮೀಣ ಪ... ಜಗಜಿತ್ ದಲೈವಾಲ 53 ದಿನಗಳ ಉಪವಾಸ ಕೈ ಬಿಟ್ಟು ಚಿಕಿತ್ಸೆಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ: ಕುರುಬೂರ್ ಶಾಂತಕುಮಾರ್ KSRTC ಬಸ್‌ ಬ್ರೇಕ್‌ ವೈಫಲ್ಯಗೊಂಡು ಪಲ್ಟಿ: 30ಕ್ಕೂ ಹೆಚ್ಚು ಮಂದಿಗೆ ಗಾಯ BMTC ಎಲೆಕ್ಟ್ರಿಕ್ ಬಸ್ ಬ್ರೇಕ್ ವೈಫಲ್ಯ: ಡಾಬಾ, ಬೀಡಾ ಅಂಗಡಿಗೆ ಡಿಕ್ಕಿ KSRTC: ಅಧಿಕಾರಿಗಳು, ಸಿಬ್ಬಂದಿಗಳಿಗೂ ಕಿರುಕುಳ ನೀಡುತ್ತಿದ್ದ ಸಂಚಾರಿ ನಿರೀಕ್ಷಕ ಉಮೇಶ್‌  ವಜಾ- ಸಿಟಿಎಂ ಆದೇಶ ಬೆಂಗಳೂರಿನಲ್ಲಿ ಶಾಲೆ ಕಲಿತ ಆ ದಿನಗಳ ಕನ್ನಡದಲ್ಲೇ ಬ್ಯಾಂಕಾಕ್‌ನಲ್ಲಿ ಮೆಲುಕುಹಾಕಿದ ಸೂಪರ್‌ಸ್ಟಾರ್‌ ರಜನಿಕಾಂತ್ KSRTC ನೌಕರರಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ ಅಂಥ ಆಸ್ಪತ್ರೆಗಳು ಹೊರಕ್ಕೆ: ಅಧಿಕಾರಿಗಳ ಎಚ್ಚರಿಕೆ KSRTC: ನೌಕರರಿಗೆ ಸರಿ ಸಮಾನ ವೇತನ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ-ಬೈರೇಗೌಡ KSRTC: ಗೊಂದಲದ ನಡುವೆಯೂ 1280 ಸಿಬ್ಬಂದಿಗಳಿಗೆ ಆರೋಗ್ಯ ಸೇವೆ ಮದುವೆಗೆ ಒಪ್ಪಿ ಬಳಿಕ ತಿರಸ್ಕರಿಸಿದ ಪ್ರಿಯತಮೆ: ಕೋಪಗೊಂಡು ಇರಿದ ಪ್ರಿಯತಮ