NEWSನಮ್ಮಜಿಲ್ಲೆನಮ್ಮರಾಜ್ಯ

ಬೇಡಿಕೆ ಈಡೇರ ಬೇಕೆಂದರೆ ಒತ್ತಡ ಹೇರಬೇಕು: ಇಪಿಎಸ್ ಪಿಂಚಣಿದಾರರ ಸಭೆಯಲ್ಲಿ ಒಮ್ಮತದ ನಿರ್ಧಾರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಇಪಿಎಸ್ ಪಿಂಚಣಿದಾರರ 77ನೇ ಮಾಸಿಕ ಸಭೆ ಇಂದು ಜೂನ್ 2ರ ಭಾನುವಾರ ಲಾಲ್ ಬಾಗ್ ಆವರಣದಲ್ಲಿ ಜರುಗಿತು. ಸಭೆಗೆ ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ಕ್ಷೇಮಾಭಿವೃದ್ಧಿ ಸಂಘ, ಗದಗ್ ಕೆಎಸ್‌ಆರ್‌ಟಿಸಿ ನಿವೃತ್ತರ ಸಂಘದ ಸದಸ್ಯರು ಪದಾಧಿಕಾರಿಗಳು ಸೇರಿದಂತೆ ನೂರಾರು ನಿವೃತ್ತರು ಆಗಮಿಸಿದ್ದರು.

ಲಾಲ್ ಬಾಗ್‌ನ ಸುಂದರ ಉದ್ಯಾನವನದಲ್ಲಿ ಬೆಳಗಿನ ವಾಯುವಿಹಾರ ನಡೆಸುವುದೇ ಮೈ ಸೊಬಗು, ನಮ್ಮ ಮನಸ್ಸಿನ ಎಲ್ಲ ದುಃಖ ದುಮ್ಮಾನಗಳು ಮರೆಯಾಗಿ ತನ್ನ ಹಳೆಯ ಸ್ನೇಹಿತರನ್ನು ಕಂಡೊಡನೆ, ಆದಮ್ಯ ಚೇತನ ಹುಕ್ಕಿ ಬರುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ಇಂದು ನಿವೃತ್ತ ನೌಕರರಿಂದ ಲಾಲ್‌ಬಾಗ್‌ ಕಂಗೊಳಿಸುತ್ತಿತ್ತು ಎಂದು ಸಭೆಗೆ ಬಂದಿದ್ದ 60 ವರ್ಷ ದಾಟಿ ನಿವೃತ್ತರಾಗಿರುವ ಮುಸಂಜೆಯಲ್ಲಿರುವ ನೌಕರರ ಕುರಿತು ಬಿಎಂಟಿಸಿ & ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ಬಣ್ಣಿಸಿದರು.

ಸರ್ವೋಚ್ಚ ನ್ಯಾಯಾಲಯವು ನವಂಬರ್ 4, 2022 ರಂದು ಇಪಿಎಸ್ ನಿವೃತ್ತರ ಪರವಾಗಿ ನೀಡಿರುವ ತೀರ್ಪನ್ನು ಈ ವರವಿಗೂ ಅನುಷ್ಠಾನಗೊಳಿಸದೆ ಇಪಿಎಫ್ಒ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ನಮ್ಮ ಹೋರಾಟವನ್ನು ತೀವ್ರಗೊಳಿಸಿ, ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹೇರಬೇಕೆಂಬ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ತಿಳಿಸಿದರು.

ಅಶಕ್ತ ಇಪಿಎಸ್ ನಿವೃತ್ತರಿಗೆ ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆ ₹7,500 + ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯ ಇದನ್ನು ಕೂಡಲೇ ಅನುಷ್ಠಾನಗೊಳಿಸಿ, ನೀಡಬೇಕೆಂದು ಆಗ್ರಸಲು ಎಲ್ಲ ನಿವೃತ್ತ ನೌಕರರು ಸಭೆಯಲ್ಲಿ ಒಮ್ಮತದಿಂದ ನಿರ್ಣಯ ತೆಗೆದುಕೊಂಡೆವು ಎಂದು ಹೇಳಿದರು.

ರಾಷ್ಟ್ರೀಯ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ ಮಾತನಾಡಿ, ನಿವೃತ್ತರು ಸಮರ್ಪಣಾ ಭಾವದಿಂದ ಈ ದೇಶಕ್ಕೆ ಸೇವೆ ಸಲ್ಲಿಸಿದ್ದು, ಅದನ್ನು ಮನ ಗಂಡು ಕೇಂದ್ರ ಸರ್ಕಾರ ಎಷ್ಟೊತ್ತಿಗೆ ನಮ್ಮ ಎಲ್ಲ ನಿವೃತ್ತರ ವೇದಿಕೆಗಳನ್ನು ಈಡೇರಿಸಬೇಕಾಗಿತ್ತು. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ರಾಜ್ಯದ ಪ್ರತಿಯೊಬ್ಬ ಸಂಸದರನ್ನು ಭೇಟಿ ಮಾಡಿ, ಮನವಿ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳೋಣ ಎಂದು ಸಲಹೆ ನೀಡಿದರು.

ಜೂನ್ 6, 2024 ರಂದು ರಾಷ್ಟ್ರೀಯ ಸಂಘರ್ಷ ಸಮಿತಿ ತನ್ನ ಸಂಸ್ಥಾಪನಾ ದಿನಾಚರಣೆಯನ್ನು ದೇಶಾದ್ಯಂತ ಆಚರಿಸಲು, ಕೇಂದ್ರಕಾರ್ಯಕಾರಿ ಸಮಿತಿ ಸಮಿತಿ ನಿರ್ಧರಿಸಿದ್ದು, ಈ ಬಗ್ಗೆ ಕಾರ್ಯಕ್ರಮ ಪಟ್ಟಿಯನ್ನು ಕೂಡಲೇ ಎಲ್ಲ ಸಂಘಟನೆಯ ನಿವೃತ್ತ ನೌಕರರಿಗೆ ನೀಡುವುದಾಗಿ ಎನ್ಎಸಿ ಉಪಾಧ್ಯಕ್ಷರಾದ ವೀರ ಕುಮಾರ್ ಗಡದ್ ತಿಳಿಸಿದರು.

ಮುಂದಿನ ದಿನಗಳಲ್ಲಿ ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮಾಡಿದಲ್ಲಿ ಜಯ ಶತಸಿದ್ಧ. ಈ ಬಗ್ಗೆ ಯಾರು ಎದೆಗುಂದುವುದು ಬೆಡ ಎಂಬ ತೀರ್ಮಾನವನ್ನು ಸಭೆಯಲ್ಲಿ ಮಾಡಿರುವುದಾಗಿ ವಿವರಿಸಿದರು.

ಸಭೆ ಆರಂಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ, ಡೋಲಪ್ಪನವರು ಎಲ್ಲ ನಿವೃತ್ತರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾಡಿದರು. ಅಂತಿಮವಾಗಿ ಡೋಲಪ್ಪನವರ ಒಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯಗೊಂಡಿತು.

ಸಭೆಯ ನಿರ್ವಹಣೆಯನ್ನು ಪದಾಧಿಕಾರಿಗಳಾದ ನಾಗರಾಜು, ಮನೋಹರ್ ಹಾಗೂ ರುಕ್ಮೇಶ್ ಅತ್ಯಂತ ಯಶಸ್ವಿಯಾಗಿ ನಡಸಿಕೊಟ್ಟರು. ಸಭೆಯ ಇಂದಿನ ನಡವಳಿ ಬಗ್ಗೆ ನಿವೃತ್ತರು ಹರ್ಷ ವ್ಯಕ್ತಪಡಿಸಿದರು.

Leave a Reply

error: Content is protected !!
LATEST
KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ ನಾಗಮಂಗಲ ಕೋಮುಗಲಭೆ ಪ್ರಕರಣ: ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅಮಾನತು KSRTC ಸಿಬ್ಬಂದಿಯಿಂದಲೇ ಡಿಸಿಗೆ ಇರಿಯಲು ಯತ್ನ- ಕೈ ಅಡ್ಡಹಾಕಿ ಪ್ರಾಣಾಪಾಯದಿಂದ ಪಾರಾದ ಜಗದೀಶ್ ಕುಮಾರ್‌ "ARM" ಸಿನಿಮಾ ಇಂದು ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಸೆ.14ರಂದು ಸಾರಿಗೆ ಸಿಬ್ಬಂದಿಗಳಿಗೆ ಔಷಧೀಯ ಸಸ್ಯಗಳ  ಉಚಿತ ವಿತರಣೆ: ಅಧಿಕಾರಿಗಳು ಭಾಗಿ ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್! ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಬಂಧನ ಅವಧಿ ಮತ್ತೆ ಒಂದು ದಿನ ವಿಸ್ತರಣೆ KSRTC ಚಿಕ್ಕಮಗಳೂರು: ಘಟಕದ ಗೇಟ್‌ ಬಳಿ ತ್ಯಾಜ್ಯಗಳ ನಡುವೆ ಚಾಲಕನ ಪಾರ್ಥಿವ ಶರೀರವಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ-... ವಾಲ್ಮೀಕಿ ಹಗರಣ: ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ - ಛಲವಾದಿ ನಾರಾಯಣಸ್ವಾಮಿ