ನ್ಯೂಡೆಲ್ಲಿ: ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇದೇ ನವೆಂಬರ್ 19ರ ಭಾನುವಾರ ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯದ ಬಗ್ಗೆ ವಿಶ್ವದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಕಪ್ ಗೆಲ್ಲುವ ಫೆವರಿಟ್ ಪಂದ್ಯ ಭಾರತವಾದರೂ ಈಗಾಗಲೇ ಹಲವು ಬಾರಿ ವಿಶ್ವಕಪ್ ಗೆದ್ದು ದಾಖಲೆ ಬರೆದಿರುವ ಆಸಿಸ್ ಮತ್ತೇ ಕಪ್ಗೆ ಮುತ್ತಿಕ್ಕುವ ತವಕದಲ್ಲಿದೆ.
ಈಗಾಗಲೇ 2 ತಂಡಗಳು ನೆಟ್ಸ್ನಲ್ಲಿ ಭರ್ಜರಿ ಅಭ್ಯಾಸದಲ್ಲಿ ತೊಡಗಿದ್ದು, ರಣಕಣದಲ್ಲಿ ಗೆಲ್ಲಲ್ಲು ಬೇಕಾದ ರಣತಂತ್ರಗಾರಿಕೆಗಳನ್ನು ಹೆಣೆಯುತ್ತಿವೆ. ಈ ಎಲ್ಲದರ ನಡುವೆ ಫೈನಲ್ ಮ್ಯಾಚ್ ಗೆಲ್ಲುವ ತಂಡಕ್ಕೆ ವಿಶ್ವಕಪ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಹಸ್ತಾಂತರ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವರ್ಲ್ಡ್ಕಪ್ ಫೈನಲ್ ಕದನ ಸದ್ಯ ವಿಶ್ವದ ಕೇಂದ್ರ ಬಿಂದುವಾಗಿದೆ. ಪ್ರತಿಷ್ಠೆಯ ಟೂರ್ನಿಯಲ್ಲಿ ಲೀಗ್, ಸೆಮಿಫೈನಲ್ ಪಂದ್ಯಗಳೆಲ್ಲ ಮುಗಿದಿದ್ದು ಭಾನುವಾರ ಕ್ರಿಕೆಟ್ ವರ್ಲ್ಡ್ಕಪ್ನ ಫೈನಲ್ ಪಂದ್ಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಸ್ವತಃ ವರ್ಲ್ಡ್ಕಪ್ ಪ್ರದಾನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ ಆಗುತ್ತಿದೆ.
ಕ್ಯಾಪ್ಟನ್ ರೋಹಿತ್ ಶರ್ಮಾ: ಫೈನಲ್ ಪಂದ್ಯಕ್ಕಾಗಿ ಈಗಾಗಲೇ ಸ್ಟೇಡಿಯಂ ಸಿದ್ಧವಾಗಿದ್ದು ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯ ವೀಕ್ಷಕರಿಗೆ ರಸದೌತಣ ನೀಡಲಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ನೇತೃತ್ವದ ತಂಡ ತವರಿನಲ್ಲಿ ನಡೆಯುವ ಮ್ಯಾಚ್ ಗೆಲ್ಲುವ ನಿರೀಕ್ಷೆಯಲ್ಲಿದೆ.
ಅದರಂತೆ ಪ್ಯಾಟ್ ಕಮಿನ್ಸ್ ಪಡೆ ಸೌತ್ ಆಫ್ರಿಕಾವನ್ನು ಮನೆಗೆ ಕಳುಹಿಸಿ ಮತ್ತೆ ಫೈನಲ್ಗೆ ಎಂಟ್ರಿ ಕೊಟಿದ್ದು, ಕಪ್ ಗೆದ್ದುಕೊಂಡು ಹೋಗುವ ಭರವಸೆಯಲ್ಲಿದೆ. ಅದೇನೆ ಆದರೂ ಭಾನುವಾರ ನಡೆಯುವ ಮ್ಯಾಚ್ ಹಲವು ನೆನಪುಗಳಿಗೆ ಸಾಕ್ಷಿಯಾಗಿ ಉಳಿಯಲಿದ್ದು ಎಲ್ಲರಿಗೂ ಅವಿಸ್ಮರಣೀಯವಾಗಿರಲಿದೆ.
ರೋಹಿತ್ ಸಾರಥ್ಯದ ತಂಡ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯ ಗೆದ್ದು ಫೈನಲ್ಗೆ ಎಂಟ್ರಿ ಕೊಟ್ಟಿದೆ. ಅದರಂತೆ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಹೊಡೆದುರುಳಿಸಿ ಆಸ್ಟ್ರೇಲಿಯಾ ತಂಡ ಫೈನಲ್ಗೆ ಬಂದಿದೆ. ಹೀಗಾಗಿ ಫೈನಲ್ ಪಂದ್ಯ ಯಾವ ತಂಡ ಗೆಲ್ಲುತ್ತದೆ ಎಂಬ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
PM Narendra Modi might hand over the trophy to the winning captain on Sunday. pic.twitter.com/fMz882CKcb
— Mufaddal Vohra (@mufaddal_vohra) November 17, 2023