NEWSನಮ್ಮಜಿಲ್ಲೆನಮ್ಮರಾಜ್ಯ

ಪತ್ನಿ, ಮಗನಿಗೆ ಮಾಸಿಕ ಜೀವನಾಂಶ ಪಾವತಿಸದ ಪತಿ ಆಸ್ತಿ ಮುಟ್ಟುಗೋಲು: ಹೈಕೋರ್ಟ್ ಮಹತ್ವದ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಪತ್ನಿ ಮತ್ತು ವಿಕಲಚೇತನ ಮಗುವಿಗೆ ಮಾಸಿಕ ಜೀವನಾಂಶ ಪಾವತಿಸದ ಪತಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಜತೆಗೆ ಪತಿಯ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಲಯ ಇಂತಹ ಪ್ರಕರಣ ಮರುಕಳಿಸಬಾರದೆಂದು ಎಚ್ಚರಿಕೆ ನೀಡಿದೆ. ಅಲ್ಲದೆ ಈ ಆದೇಶ ಪರಿತ್ಯಕ್ತ ಪತ್ನಿಗೆ ಜೀವನಾಂಶ ನೀಡದೆ ಸತಾಯಿಸುವ ಪತಿರಾಯರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ.

ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಅನಂತ್ ರಾಮನಾಥ್ ಹೆಗಡೆ ಅವರಿದ್ದ ದ್ವಿಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದ್ದು, 2012ರ ಏಪ್ರಿಲ್ 12ರಿಂದ ಮಾಸಿಕ ಜೀವನಾಂಶವಾಗಿ ತಲಾ 5,000 ರೂ.ಗಳನ್ನು ಪಾವತಿಸುವಂತೆ ಸೂಚನೆ ನೀಡಿ ಆದೇಶಿಸಿದೆ.

ವಾದ ಪ್ರತಿವಾದ ಆಲಿಸಿದ ಪೀಠ, ಜೀವನಾಂಶವನ್ನು ತಲಾ 5,000 ರೂ.ಗೆ ಹೆಚ್ಚಿಸಿತು. ಮಗ ವಿಕಲ ಚೇತನನಾಗಿರುವುದರಿಂದ, ಮೊತ್ತವು ಸಾಧಾರಣವಾಗಿದೆ ಮತ್ತು ಕುಟುಂಬ ನ್ಯಾಯಾಲಯವು ಅದಕ್ಕೆ ಅನುಗುಣವಾಗಿ ಆದೇಶಿಸಬೇಕಾಗಿತ್ತು ಎಂದು ಪೀಠ ಅಭಿಪ್ರಯಾಪಟ್ಟಿತು.

ಅಷ್ಟೆ ಅಲ್ಲದೆ, ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಪತಿಯ 1,276 ಚದರ ಅಡಿ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಪತ್ನಿ ಪತಿಗೆ ಸಂಬಂಧಿಸಿದ ಇತರ ಆಸ್ತಿ ವಿವರಗಳನ್ನು ಒದಗಿಸಿದರೆ, ಅದರಲ್ಲಿಯೂ ಸಹ ಭಾಗಿದಾರರಾಗಿರುತ್ತಾರೆ ಎಂದು ಪೀಠ ಹೇಳಿದೆ.

ನೊಂದ ಪತ್ನಿ ಪತಿವಿರುದ್ಧ ಹೈ ಕೋರ್ಟ್‌ ಮೆಟ್ಟಿಲೇರಿ ಕೌಟುಂಬಿಕ ನ್ಯಾಯಾಲಯವು ತನ್ನ ಮೇಲೆ ವಿಧಿಸಿದ ಹೊಣೆಗಾರಿಕೆಯನ್ನು ಪತಿ ನಿರ್ವಹಿಸಿಲ್ಲ. 1882ರ ಆಸ್ತಿ ವರ್ಗಾವಣೆ ಕಾಯ್ದೆಯ ಸೆಕ್ಷನ್ 39ರ ಅಡಿಯಲ್ಲಿ, ನಿರ್ವಹಣೆಯ ಬಾಕಿಯು ಆಸ್ತಿಯ ಮೇಲೆ ಶುಲ್ಕವನ್ನಾಗಿಸುವುದಕ್ಕೆ ಅವಕಾಶವಿದೆ.

ಇನ್ನು ಪತಿಯಾದವರು ಈ ಹಿಂದಿನ ಆದೇಶವನ್ನು ಪಾಲಿಸಿಲ್ಲ. ಆದ್ದರಿಂದ ಅರ್ಜಿದಾರರಿಗೆ (ಪತ್ನಿ ಮತ್ತು ಮಗ) ಪಾವತಿಯ ಆಸ್ತಿಯ ಮೇಲೆ ಭಾಗ ಪಡೆಯಬಹುದು ಎಂದು ಪೀಠ ಅಭಿಪ್ರಾಯ ಪಟ್ಟಿದೆ. ಪತ್ನಿಯ ಪರ ವಕೀಲರು, ಪತಿ ಕೆಲವು ಸ್ಥಿರಾಸ್ತಿಗಳನ್ನು ಮಾರಾಟ ಮಾಡಿದ್ದಾರೆ, ತಿಂಗಳಿಗೆ 5000 ರೂ.ಗಳನ್ನು ಪಾವತಿಸಬಹುದು ಮತ್ತು ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕೋರಿದ್ದರು.

ಪ್ರಕರಣ ವೇನು?: 2012ರಲ್ಲಿ ಪತಿಯ ಮನೆಯಿಂದ ಹೊರನಡೆದಿದ್ದ ಮಹಿಳೆ, ತನಗೆ ಮತ್ತು ತನ್ನ ಅಂಗವಿಕಲ ಮಗನಿಗೆ ಜೀವನಾಂಶ ನೀಡುವಂತೆ ಕೋರಿದ್ದಳು. ಆರಂಭದಲ್ಲಿ ಪತ್ನಿ ಮತ್ತು ಮಗನಿಗೆ ಕ್ರಮವಾಗಿ 2000 ಮತ್ತು 1000 ರೂ.ಗಳ ಮಾಸಿಕ ಮೊತ್ತವನ್ನು ನೀಡಲಾಯಿತು. ದಶಕದ ಬಳಿಕ ಪತ್ನಿ ಮತ್ತು ಮಗ ತಲಾ 5 ರೂ.ಗಳೀಗೆ ಹೆಚ್ಚಿಸಲು ಕೋರಿದರು.

ಸೆಪ್ಟೆಂಬರ್ 2018ರಲ್ಲಿ, ಕೌಟುಂಬಿಕ ನ್ಯಾಯಾಲಯವು ಪತಿಗೆ ತಲಾ 3000 ರೂ.ಗಳನ್ನು ಪಾವತಿಸುವಂತೆ ನಿರ್ದೇಶನ ನೀಡಿತ್ತು. ಆದರೆ, ಕೌಟುಂಬಿಕ ನ್ಯಾಯಾಲಯದ ಆದೇಶದಿಂದ ನೊಂದ ಮಹಿಳೆ ಮೊತ್ತವನ್ನು ಮತ್ತಷ್ಟು ಹೆಚ್ಚಳ ಮಾಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅದರಲ್ಲಿ ಪರಿಹಾರ ಮೊತ್ತ ಕಡಿಮೆಯಿದ್ದು, ಹೆಚ್ಚಳ ಮಾಡಬೇಕು. ಜತೆಗೆ, ಪತಿ ಬಾಕಿ ಪಾವತಿಸಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು ಪತ್ನಿ. ಈ ಹಿನ್ನೆಲೆಯಲ್ಲಿ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ಈ ಆದೇಶ ಹೊರಡಿಸಿದ್ದಾರೆ.

Leave a Reply

error: Content is protected !!
LATEST
KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ ನಾಗಮಂಗಲ ಕೋಮುಗಲಭೆ ಪ್ರಕರಣ: ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅಮಾನತು KSRTC ಸಿಬ್ಬಂದಿಯಿಂದಲೇ ಡಿಸಿಗೆ ಇರಿಯಲು ಯತ್ನ- ಕೈ ಅಡ್ಡಹಾಕಿ ಪ್ರಾಣಾಪಾಯದಿಂದ ಪಾರಾದ ಜಗದೀಶ್ ಕುಮಾರ್‌ "ARM" ಸಿನಿಮಾ ಇಂದು ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಸೆ.14ರಂದು ಸಾರಿಗೆ ಸಿಬ್ಬಂದಿಗಳಿಗೆ ಔಷಧೀಯ ಸಸ್ಯಗಳ  ಉಚಿತ ವಿತರಣೆ: ಅಧಿಕಾರಿಗಳು ಭಾಗಿ ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್! ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಬಂಧನ ಅವಧಿ ಮತ್ತೆ ಒಂದು ದಿನ ವಿಸ್ತರಣೆ KSRTC ಚಿಕ್ಕಮಗಳೂರು: ಘಟಕದ ಗೇಟ್‌ ಬಳಿ ತ್ಯಾಜ್ಯಗಳ ನಡುವೆ ಚಾಲಕನ ಪಾರ್ಥಿವ ಶರೀರವಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ-... ವಾಲ್ಮೀಕಿ ಹಗರಣ: ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ - ಛಲವಾದಿ ನಾರಾಯಣಸ್ವಾಮಿ