CrimeNEWSನಮ್ಮರಾಜ್ಯ

KSRTC ಸಂಸ್ಥೆಗೆ ₹8.76 ಲಕ್ಷ ನಷ್ಟಮಾಡಿದ ಅಧಿಕಾರಿಗಳ ರಕ್ಷಣೆ – ಕೇವಲ 140 ರೂ. ಆರೋಪದಡಿ ಇಬ್ಬರು ನಿರ್ವಾಹಕರ ಅಮಾನತು !!

ಜೈಶಾಂತ ಕುಮಾರ್‌
ವಿಜಯಪಥ ಸಮಗ್ರ ಸುದ್ದಿ

ಕೋಲಾರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಅಧಿಕಾರಿಗಳು ತಪ್ಪು ಮಾಡಿ ಸಂಸ್ಥೆಗೆ ಲಕ್ಷ ಲಕ್ಷ ರೂಪಾಯಿ ನಷ್ಟ ಮಾಡಿದರೂ ಅವರನ್ನು ಅಮಾನತು ಮಾಡಿ ವಿಚಾರಣೆ ಮಾಡುವುದಿಲ್ಲ. ಆದರೆ ಕೇವಲ 69 ರೂ. ಮತ್ತು 71 ರೂಪಾಯಿ ಹೆಚ್ಚುವರಿಯಾಗಿ ಮಹಿಳೆಯರ ಉಚಿತ ಟಿಕೆಟ್‌ ವಿರಣೆ ಮಾಡಿದ ನಿರ್ವಾಹಕರನ್ನು ಏಕಾಏಕಿ ಅಮಾನತು ಮಾಡುತ್ತಾರೆ.

ಹೌದು!  ಕೋಲಾರ ವಿಭಾಗದಲ್ಲಿ ಮೂವರು ಅಧಿಕಾರಿಗಳು ಸಂಸ್ಥೆಗೆ 2018 ರಿಂದ 2021ರವರೆಗೂ ಸುಮಾರು 8.76 ಲಕ್ಷ ರೂಪಾಯಿ ನಷ್ಟವುಂಟು ಮಾಡಿದ್ದರೂ ಈವರೆಗೂ ಅವರನ್ನು ಅಮಾನತು ಮಾಡಿಲ್ಲ. ಜತೆಗೆ  ಅವರಿಂದ ನಷ್ಟದ ಹಣವನ್ನು ರಿಕವರಿಮಾಡಿಲ್ಲ. ಆದರೆ ಕೋಲಾರಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದ ಮಹಿಳೆ ಅರ್ಧದಲ್ಲೇ ಬಸ್‌ ಇಳಿದು ಹೋಗಿದ್ದರು ಅವರಿಗೆ ವಿತರಿಸಿದ್ದ ಕೇವಲ 69 ರೂಪಾಯಿಯ ಉಚಿತ ಟಿಕೆಟ್‌ಅನ್ನು ಹೆಚ್ಚುವರಿಯಾಗಿ ನೀಡಿದ್ದೀಯಾ ಎಂದು ನಿರ್ವಾಹಕನನ್ನು ಅಮಾನತು ಮಾಡಲಾಗಿದೆ.

ಅದೇರೀತಿ ಚಾಮರಾಜನಗರ ಘಟಕದ ಬಸ್‌ನಲ್ಲಿ ಮದ್ದೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದ ಮಹಿಳೆ ಅರ್ಧದಲ್ಲೇ ಬಸ್‌ ಇಳಿದು ಹೋಗಿದ್ದು ಈ ಸಂಬಂಧ 71 ರೂಪಾಯಿಯ ಮಹಿಳೆಯರ ಉಚಿತ ಟಿಕೆಟ್‌ಅನ್ನು ಹೆಚ್ಚುವರಿಯಾಗಿ ವಿತರಿಸಿದ್ದೀಯಾ ಎಂದು ಚಾಮರಾಜನಗರ ಡಿಸಿ ಮೇ 1ರಂದು ಅದುಕೂಡ ಕಾರ್ಮಿಕ ದಿನಾಚರಣೆಯಂದೆ  ಅಮಾನತು ಮಾಡಿದ್ದಾರೆ.

ಆದರೆ, ಕೋಲಾರ ವಿಭಾಗದಲ್ಲಿ ವಿಭಾಗೀಯ ಸಂಚಾರ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮತ್ತು ನಿರ್ವಹಿಸುತ್ತಿರುವ ಮೂವರು ಅಧಿಕಾರಿಗಳು ಸಂಸ್ಥೆಗೆ 8.76 ಲಕ್ಷ ರೂ.ಗಳಿಗೂ ಹೆಚ್ಚು ಆರ್ಥಿಕ ನಷ್ಟವುಂಟಾಗಲು ಕಾರಣರಾಗಿದ್ದರೂ ಅವರಿಗೆ ಇವರೆಗೂ ಯಾವುದೇ ಶಿಕ್ಷೆ ನೀಡದೆ ರಕ್ಷಿಸಲಾಗುತ್ತಿದೆ. ಇದನ್ನು ಗಮನಿಸಿದರೆ ಗುಬ್ಬಿಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಸಂಸ್ಥೆಗೆ ನಷ್ಟವುಂಟು ಮಾಡಿದ ಅಧಿಕಾರಿಗಳು: ಒಂದನೇ ಫೆಬ್ರವರಿ 2018ರಿಂದ 4ನೇ ಸೆಪ್ಟೆಂಬರ್‌ 2019ರವರೆಗೆ ಕೋಲಾರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ 2018ರ ನಿರ್ದೇಶನಗಳನ್ನು ಉಲ್ಲಘಿಸಿ ತನ್ಮೂಲಕ ನಿಗಮಕ್ಕೆ 4,50,297 ರೂ.ಗಳನ್ನು ಅಂದಿನ ವಿಭಾಗೀಯ ಸಂಚಾರ ಅಧಿಕಾರಿ ಬಿ.ಸಿ ನಿರಂಜನ ಅವರು (ಪ್ರಸ್ತುತ ನಿವೃತ್ತರಾಗಿದ್ದಾರೆ) ಸಂಸ್ಥೆಗೆ 4,50,297 ರೂ.ಗಳಷ್ಟು ಆರ್ಥಿಕ ನಷ್ಟವುಂಟಾಗಲು ನೇರವಾಗಿ ಕಾರಣರಾಗಿದ್ದಾರೆ.

ಅದೇರೀತಿ ಕೋಲಾರ ವಿಭಾಗದಲ್ಲೇ 01-2-2018 ರಿಂದ 4-9-2019 ರವರೆಗೆ ಕಾನೂನು ಅಧಿಕಾರಿಯಾಗಿದ್ದ ಎಂ.ವೀರಭದ್ರಪ್ಪ ಅವರು ಕೂಡ ನಿಗಮಕ್ಕೆ 1,51,792 ರೂ.ಗಳಷ್ಟು ಆರ್ಥಿಕ ನಷ್ಟವುಂಟಾಗಲು ನೇರವಾಗಿ ಜವಾಬ್ದಾರರಾಗಿದ್ದಾರೆ.

ಇನ್ನು ಪ್ರಸ್ತುತ ಕೋಲಾರ ವಿಭಾಗದಲ್ಲೇ ಪ್ರಸ್ತುತ ಸಂಚಾರ ಅಧಿಕಾರಿಯಾಗಿರುವ ಎಂ.ಬಿ.ಜೈಶಾಂತಕುಮಾರ್‌ ಕೂಡ 25-10-2020ರಿಂದ 12-11-2021ರರವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ನಿಗಮಕ್ಕೆ 2,74,483 ರೂ.ಗಳಷ್ಟು ಆರ್ಥಿಕ ನಷ್ಟವುಂಟಾಗಲು ನೇರವಾಗಿ ಜವಾಬ್ದಾರರಾಗಿದ್ದಾರೆ ಎಂದ ಆರೋಪವಿದೆ.

ಈ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ  ಅನ್ಬುಕುಮಾರ್‌ ಅವರೇ ಸ್ವತಃ ಕಳೆದ 2022ರ ಜೂನ್‌ 20ರಂದು ಕಾರಣ ಕೇಳಿ ಆಪಾದನ ಪತ್ರ ನೀಡಿದ್ದಾರೆ. ಆದರೆ ಈವರೆಗೂ ಲಕ್ಷ ಲಕ್ಷ ರೂಪಾಯಿಗಳ ಆರ್ಥಿಕ ನಷ್ಟ ಉಂಟು ಮಾಡಿರುವ ಈ ಅಧಿಕಾರಿಗಳ ವಿರುದ್ಧ ಯಾವುದೆ ನಾನೂನು ಕ್ರಮ ಜರುಗಿಸಿಲ್ಲ ಏಕೆ?

ಈ ಅಧಿಕಾರಿಗಳೂ ಸಂಸ್ಥೆಗೆ ನಷ್ಟುವುಂಟು ಮಾಡಿದ್ದು ಹೇಗೆ?: ಸಂಸ್ಥೆ, ಕೋಲಾರ ವಿಭಾಗದಲ್ಲಿ ಬೇರೆ ಬೇರೆ ಅವಧಿಯಲ್ಲಿ ವಿಭಾಗೀಯ ಸಂಚಾರ ಅಧಿಕಾರಿ ಮತ್ತು ಕಾನೂನು ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಲಗೇಜ್‌ ಟಿಕೆಟ್‌ ದರವನ್ನು ಪರಿಷ್ಕರಣೆ ಮಾಡದೆ ಹಳೇ ದರವೇ ಇಟಿಎಂನಲ್ಲಿ ಇದ್ದ ಪರಿಣಾಮ 110 ರೂಪಾಯಿ ಬದಲು ಕೇವಲ 42 ರೂಪಾಯಿ ಲಗೇಜ್‌ ಚಾರ್ಜ್‌ ಆಗುತ್ತಿತ್ತು.

ಹೀಗಾಗಿ ಈ ಅಧಿಕಾರಿಗಳು ಸಾಮಾನ್ಯ ಸ್ಥಾಯಿ ಆದೇಶ 25-01-2018ರಲ್ಲಿನ ನಿರ್ದೇಶನಗಳನ್ವಯ ವಿಭಾಗದಲ್ಲಿ ಅಂತರ ರಾಜ್ಯ ಮಾರ್ಗಗಳಲ್ಲಿರುವ ಸ್ಥಳಗಳಿಗೆ ಇಟಿಎಂ ತಂತ್ರಾಂಶದಲ್ಲಿ ಅಗತ್ಯ ನಿಗದಿತ ಹಂತದ ದರವನ್ನು ನಿಗದಿಪಡಿಸಲು ಹಾಗೂ ಸಾಮಾನ್ಯ ಸ್ಥಾಯಿ ಆದೇಶದಲ್ಲಿನ ಬದಲಾವಣೆಗಳನ್ನು ಇಟಿಎಂ ತಂತ್ರಾಂಶದಲ್ಲಿ ಅಳವಡಿಸಲು/ ಮಾರ್ಪಾಡು ಮಾಡಲು ಸೂಕ್ತ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ.

ಅಲ್ಲದೆ ಮಾರ್ಗ ಮತ್ತು ದರಗಳ ಸಂಬಂಧಿತ ಮಾಹಿತಿಯನ್ನು ಘಟಕಗಳಿಗೆ ಒದಗಿಸಲು ಮತ್ತು ಇಟಿಎಂಗಳಲ್ಲಿ ಈ ಮಾಹಿತಿ ಪರಿಷ್ಕರಣೆಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಪರಿಷ್ಕೃತ ಲಗೇಜು ದರಗಳನ್ನು ಅಳವಡಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ/ ಮರು ಪರಿಶೀಲನೆ ಮಾಡಲು ಹಾಗೂ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಲು ವಿಫಲರಾಗುವ ಮೂಲಕ ಸಾಮಾನ್ಯ ಸ್ಥಾಯಿ ಆದೇಶ ಉಲ್ಲಂಘಿಸಿ ಸಂಸ್ಥೆಗೆ ಸುಮಾರು 8.76 ಲಕ್ಷ ರೂ.ಗಳಷ್ಟು ಆರ್ಥಿಕ ನಷ್ಟವುಂಟಾಗಲು ನೇರವಾಗಿ ಜವಾಬ್ದಾರರಾಗಿದ್ದಾರೆ.

ಹೀಗಾಗಿ  ಸಂಸ್ಥೆಯಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೀವು ಈ ನ್ಯೂನತೆಗಳನ್ನು ಎಸಗಿ ಕರ್ತವ್ಯದಲ್ಲಿ ನಿಷ್ಠೆಯನ್ನು ಕಾಪಾಡಲು ವಿಫಲರಾಗಿ, ಸಂಸ್ಥೆಯ ನೌಕರರಿಗೆ ತರವಲ್ಲದ ಕೃತ್ಯವನ್ನೆಸಗಿ ಸಂಸ್ಥೆ ನೌಕರರ (ನಡತೆ ಮತ್ತು ಶಿಸ್ತು) ನಿಯಮಾವಳಿಗಳು 1971ರ ನಿಯಮಾವಳಿ 3 (1) ರ (ii) ಮತ್ತು (iii) ನ್ನು ಉಲ್ಲಂಘಿಸಿದ್ದೀರಿ ಎಂದು ಕಳೆದ 2020 ಜೂನ್‌ 20ರಂದು ಎಂಡಿ ಅವರೇ ಇವರು ವಿರುಧ ಆಪಾದನ ಪತ್ರ ನೀಡಿದ್ದರು.

ಆದರೆ, ಈ ಪತ್ರ ನೀಡಿರುವುದು ಬಿಟ್ಟರೆ ಈವರೆಗೂ ಈ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದನ್ನು ಗಮನಿಸಿದರೆ ಇಲ್ಲಿ ವ್ಯವಸ್ಥಾಪಕ ನಿರ್ದೇಶಕರು ಈ ಅಧಿಕಾರಿಗಳನ್ನು ರಕ್ಷಿಸುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಕಾರಣ ಕೇವಲ 69 ಮತ್ತು 71 ರೂಪಾಯಿ ಉಚಿತ ಟಿಕೆಟ್‌ಅನ್ನು ಹೆಚ್ಚುವರಿಯಾಗಿ ನೀಡಿದ್ದಾರೆ ಎಂಬ ಕಾರಣ ನೀಡಿ ಇಬ್ಬರು ನಿರ್ವಾಹಕರನ್ನು ಅಮಾನತು ಮಾಡಿರುವ ಸಂಸ್ಥೆ 8.76 ಲಕ್ಷ ರೂಪಾಯಿ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿಲ್ಲ ಏಕೆ?

ಇನ್ನು ನಿಗಮಕ್ಕೆ 2,74,483 ರೂ.ಗಳಷ್ಟು ಆರ್ಥಿಕ ನಷ್ಟವುಂಟಾಗಲು ನೇರವಾಗಿ ಜವಾಬ್ದಾರರಾಗಿರುವ ಸಂಚಾರ ಅಧಿಕಾರಿ ಜೈಶಾಂತಕುಮಾರ್‌ ಅವರು ಪ್ರಸ್ತುತ ಕೋಲಾರ ವಿಭಾಗದಲ್ಲೇ ಸಂಚಾರ ಅಧಿಕಾರಿಯಾಗಿದ್ದಾರೆ. ಅಂದರೆ ಅವರ ವಿರುದ್ಧ ಈವರೆಗೂ ಏಕೆ ಎಂಡಿ ಅವರು ಕಾನೂನು ಕ್ರಮ ಜರುಗಿಸಿಲ್ಲ. ಈ ನಷ್ಟವನ್ನು ಯಾರು ತುಂಬಿಕೊಡಬೇಕು ಎಂದು ಸಂಸ್ಥೆಯ ಕಾನೂನು ವಿಭಾಗದ ಅಧಿಕಾರಿಗಳೇ ಪ್ರಶ್ನಿಸುತ್ತಿದ್ದಾರೆ.

ಕೇವಲ 140 ರೂಪಾಯಿ ಆರೋಪದಡಿ  ಇಬ್ಬರು ನಿರ್ವಾಹಕರ ಅಮಾನತು ಮಾಡಿರುವ ಸಂಸ್ಥೆಯಲ್ಲಿ ಲಕ್ಷ ಲಕ್ಷ ರೂಪಾಯಿ ನಷ್ಟವುಂಟು ಮಾಡಿರುವ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿದೆ. ಈ ಬಗ್ಗೆ ಕೇಳಬೇಕಾದ ಎಂಡಿ ಅನ್ಬುಕುಮಾರ್ ಅವರು‌ ಜಾಣಮೌನವಹಿಸಿರುವುದನ್ನು ನೋಡುತ್ತಿದ್ದರೆ ಇವರೊಬ್ಬ ಪ್ರಾಮಾಣಿಕ ನೌಕರರ ಸ್ನೇಹಿ ಅಧಿಕಾರಿ ಎಂದು ಹೇಳಿವುದಕ್ಕೆ ಮುಜುಗರವಾಗುತ್ತಿದೆ.

ಇನ್ನಾದರೂ ಸಂಸ್ಥೆಗೆ ಲಕ್ಷ ಲಕ್ಷ ರೂಪಾಯಿ ನಷ್ಟವುಂಟು ಮಾಡಿರುವ ಅಧಿಕಾರಿಗಳನ್ನು ರಕ್ಷಣೆ ಮಾಡುವುದನ್ನು ಬಿಟ್ಟು ನಿಗಮದಲ್ಲಿ ಎಲ್ಲರಿಗೂ ಒಂದೇ ನಿಯಮ ಎಂಬುದನ್ನು ತೋರಿಸಲು ಈ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಹೆಸರೇಳಲಿಚ್ಛಿಸದ ಅಧಿಕಾರಿಯೊಬ್ಬರು ಆಗ್ರಹಿಸಿದ್ದಾರೆ.

ವ್ಯವಸ್ಥಾಪಕ ನಿರ್ದೇಶಕರು ಹೊರಡಿಸಿರುವ ಆಪಾದನ ಪತ್ರ: dto charge sheet_035055 klr

error: Content is protected !!
LATEST
KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ ನಾಗಮಂಗಲ ಕೋಮುಗಲಭೆ ಪ್ರಕರಣ: ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅಮಾನತು KSRTC ಸಿಬ್ಬಂದಿಯಿಂದಲೇ ಡಿಸಿಗೆ ಇರಿಯಲು ಯತ್ನ- ಕೈ ಅಡ್ಡಹಾಕಿ ಪ್ರಾಣಾಪಾಯದಿಂದ ಪಾರಾದ ಜಗದೀಶ್ ಕುಮಾರ್‌ "ARM" ಸಿನಿಮಾ ಇಂದು ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಸೆ.14ರಂದು ಸಾರಿಗೆ ಸಿಬ್ಬಂದಿಗಳಿಗೆ ಔಷಧೀಯ ಸಸ್ಯಗಳ  ಉಚಿತ ವಿತರಣೆ: ಅಧಿಕಾರಿಗಳು ಭಾಗಿ ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್! ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಬಂಧನ ಅವಧಿ ಮತ್ತೆ ಒಂದು ದಿನ ವಿಸ್ತರಣೆ KSRTC ಚಿಕ್ಕಮಗಳೂರು: ಘಟಕದ ಗೇಟ್‌ ಬಳಿ ತ್ಯಾಜ್ಯಗಳ ನಡುವೆ ಚಾಲಕನ ಪಾರ್ಥಿವ ಶರೀರವಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ-... ವಾಲ್ಮೀಕಿ ಹಗರಣ: ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ - ಛಲವಾದಿ ನಾರಾಯಣಸ್ವಾಮಿ